ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ತಟ್ಟಿತೇ?

Last Updated 22 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಸಂಘ ಚಾಲಕ ಮೋಹನ ಭಾಗವತ ಅವರು, ಇತ್ತೀಚೆಗೆ ‘ಅಸಮಾನತೆ ಇರುವವರೆಗೆ ಮೀಸಲಾತಿ ಇರಲಿ’ ಅಂತ ಹೇಳಿಕೆ ನೀಡಿದ್ದಾರೆ. ಹೀಗೆ ಹೇಳುವುದರ ಮೂಲಕ ಮೀಸಲಾತಿಯ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ.

ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಬೆನ್ನು ಮೂಳೆಯಾದ ಆರ್‌.ಎಸ್.ಎಸ್‌.  ಮುಖ್ಯಸ್ಥರಾಗಿ ಬಿಹಾರ ಚುನಾವಣೆಯ ವೇಳೆ, ‘ಮೀಸಲಾತಿ ವಿಷಯವನ್ನು ಪುನರ್‌ ವಿಮರ್ಶಿಸಬೇಕಾಗಿದೆ’ ಎಂದು ಹೇಳಿಕೆ ನೀಡಿ ಬಿಹಾರದ ಜನರಲ್ಲಿ ಸಂಶಯ ಮೂಡಿಸಿದರು. ಇದು ಬೇಕಾಗಿತ್ತೇ? ಇಂಥ ಹೇಳಿಕೆಯಿಂದ ಶೋಷಿತ ವರ್ಗದ ಜನರಲ್ಲಿ ಭೀತಿ ಉಂಟಾಯಿತು. ಅವರು ಬಿಜೆಪಿಯಿಂದ ದೂರವಾದರು. ಪರಿಣಾಮ: ನಿದ್ರೆ ಮತ್ತು ಆಹಾರವನ್ನು ತ್ಯಜಿಸಿ ಅವಿಶ್ರಾಂತವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶ್ರಮ ವ್ಯರ್ಥವಾಗಿ ಹೋಯಿತು.

ಒಬ್ಬ ಮುಖಂಡರ ವಿವಾದಾತ್ಮಕ ಹೇಳಿಕೆ, ಚುನಾವಣೆ ಸಮಯದಲ್ಲಿ ಎಂಥ ಅನಾಹುತ ಉಂಟು ಮಾಡಬಹುದು ಎಂಬುದಕ್ಕೆ ಮೋಹನ ಭಾಗವತರ ಹೇಳಿಕೆಯೇ ಸಾಕ್ಷಿ. ಡಾ. ಅಂಬೇಡ್ಕರರ ಆಶಯದಂತೆ ಶೋಷಿತ ವರ್ಗಕ್ಕೆ ನೀಡಲಾಗಿರುವ ಮೀಸಲಾತಿಯನ್ನು ದಶಕದಿಂದ ದಶಕಕ್ಕೆ ವಿಸ್ತರಿಸುತ್ತ ಬರಲಾಗಿದೆ. ಅದನ್ನು ತೆಗೆದುಹಾಕಲು ಯಾವ ರಾಜಕೀಯ ಪಕ್ಷವೂ ಧೈರ್ಯ ಮಾಡದು. ಮಾಡಿದರೆ ಬಿಹಾರದಲ್ಲಿ ಆದಂತೆ ಚುನಾವಣೆ ಸೋಲಿನ ರುಚಿ ಉಣ್ಣಬೇಕಾಗಬಹುದು. ನುರಿತ ಭಾಗವತರಿಗೆ ಇಂತಹ ವಿಷಯ ತಿಳಿಯದೇ! ಪಾಪ,  ಹೇಳಿಕೆಯ ಪರಿಣಾಮ ಅವರಿಗೆ ಈಗ ಅರಿವಿಗೆ ಬಂದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT