ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ದೀಪ ಆರಿಸಿ

ಕುಂದು ಕೊರತೆ
Last Updated 7 ಸೆಪ್ಟೆಂಬರ್ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಪಾಲಿಕೆಯ ದಯೆಯಿಂದಾಗಿ ಜಯನಗರ 9ನೇ ಬಡಾವಣೆಯ 26ನೇ ‘ಬಿ’ ಮುಖ್ಯರಸ್ತೆಯಲ್ಲಿನ ನಿವಾಸಿಗಳಿಗೆ ಹಗಲಲ್ಲೂ ಬೀದಿ ದೀಪದ ದರ್ಶನವಾಗುತ್ತದೆ! ಅಂದರೆ ದಿನದ 24 ಗಂಟೆಗಳೂ ಬೀದಿ ದೀಪ ಉರಿಯುತ್ತಿರುತ್ತದೆ ಎನ್ನುವುದೇ ಸೋಜಿಗ. 

ಒಂದು ಕಡೆ ವಿದ್ಯುತ್ ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದರೆ, ಇನ್ನೊಂದು ಕಡೆ ಸಂಬಂಧಪಟ್ಟವರ ಬೇಜವಾಬ್ದಾರಿಯಿಂದಾಗಿ ವಿದ್ಯುತ್ ಪೋಲಾಗುತ್ತಿದೆ. ಹಿಂದೆ ಬೀದಿ ದೀಪದ ನಿರ್ವಹಣೆಗೆ ಟೈಮರ್ ಅಳವಡಿಸಲಾಗಿತ್ತು.  ಆದರೆ ಈಗ ಒಬ್ಬ ವ್ಯಕ್ತಿಗೆ ಬೀದಿ ದೀಪವನ್ನು ಹಾಕುವ ಮತ್ತು ಆರಿಸುವ ಕೆಲಸವನ್ನು ಒಪ್ಪಿಸಲಾಗಿದೆ.  ಆತನ ಮರ್ಜಿಗೆ ಅನುಸಾರವಾಗಿ ಬೀದಿ ದೀಪ ಉರಿಯುತ್ತದೆ.  ಒಂದು ವ್ಯವಸ್ಥೆ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವುದು ಎಷ್ಟರ ಮಟ್ಟಿಗೆ ಸರಿ? ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಾರೆಂದು ಭಾವಿಸೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT