ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರೆತು ಬಾಳಲಿ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಾಮಫಲಕಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಹೈಕೋರ್ಟ್ ತೀರ್ಪು  ಕನ್ನಡಿಗರಲ್ಲಿ ಆತಂಕ ಹುಟ್ಟಿಸಿರುವುದು ಸಹಜ. ಆದರೆ ಕನ್ನಡದ ಕೆಲಸ ಎಲ್ಲವೂ ಕಾನೂನಿನ ಮೂಲಕವೇ ಆಗ­ಬೇಕೆಂದಿಲ್ಲ.

ಬೇರೆ ರಾಜ್ಯಗಳಲ್ಲಿ ಹುಟ್ಟಿದರೂ ಇಲ್ಲಿನ ಗಾಳಿ, ಅನ್ನ, ನೀರು ಸೇವಿಸಿರುವ ಜನರು ಸ್ವಯಂ ಪ್ರೇರಣೆಯಿಂದ ಕನ್ನಡದಲ್ಲಿ ಫಲಕ­ಗಳನ್ನು ಬರೆಯಿಸಿ ಹಾಕಲಿ. ನೆರೆಯ ತಮಿಳುನಾಡಲ್ಲಿ ನಾಮ­ಫಲಕಗಳು ತಮಿಳು ಮತ್ತು ಆಂಗ್ಲ ಭಾಷೆಯ ಹೊರತಾಗಿ ಬೇರೆ  ಭಾಷೆಗಳಲ್ಲಿ ಇಲ್ಲ.

ಅನ್ಯ ಭಾಷೆಯ ಜನರು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿ­ಕೊಳ್ಳ­ಬೇಕು. ತಮಿಳುನಾಡಿನಲ್ಲಿ ಇರುವ ಕನ್ನಡಿಗರು ತಮಿಳು ಕಲಿತು ಅಲ್ಲಿನ ಜನರ ಜತೆ ಬೆರೆತು ಹೋದಂತೆ ಇಲ್ಲಿನ ಅನ್ಯಭಾಷೆಯ ಜನರು ಕನ್ನಡಿಗರ  ಜತೆ ಬೆರೆಯಲಿ. ಕೇವಲ ತಮಿಳರು ಅಲ್ಲ, ಎಲ್ಲ ಭಾಷಿಕರು ಬೆರೆತು ಬಾಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT