ರಾಜ್ಯ ಸರ್ಕಾರವು ಮುಸ್ಲಿಂ ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ಒದಗಿಸಲು ಮುಂದೆ ಬಂದರೂ ವಿಧಿಸಿರುವ ಷರತ್ತುಗಳನ್ನು ಪೂರ್ಣವಾಗಿ ಪರಿಪಾಲಿಸು ವುದರಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು ವಿಫಲರಾಗುವುದ ರಲ್ಲಿ ಅನುಮಾನವೇ ಇಲ್ಲ. ಆದರೂ ಸರ್ಕಾರದ ಉದ್ದೇಶ ಬಡವರಿಗೆ ಸಹಾಯ ಮಾಡುವುದು. ಈ ಹೊಸ ಯೋಜನೆಯನ್ನು ಸಮಾಜದ ಎಲ್ಲಾ ವರ್ಗದವರು ಸ್ವಾಗತಿಸಬೇಕು.

ಮುಸ್ಲಿಂ ಹೆಣ್ಣು ಮಕ್ಕಳಿಂದ ಈ ಯೋಜನೆ ಪ್ರಾರಂಭವಾಗಲಿದೆ. ಇದು ಅಲ್ಪ ಸಂಖ್ಯಾತರ ಇಲಾಖೆಯಿಂದ ಪ್ರಾರಂಭವಾಗಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೂ ಇದರ ಲಾಭ ಸಿಗಬೇಕು. ನಾನು ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ಆದಷ್ಟು ಮಟ್ಟಿಗೆ ಈ ಯೋಜನೆ ಸಮಾಜದ ಎಲ್ಲಾ ವರ್ಗಗಳ ಬಡವರಿಗೆ ಅನ್ವಯವಾಗುವಂತೆ ಮಾಡಬೇಕು.

ಟಿಪ್ಪು ಸುಲ್ತಾನ್‌ರ ಕಾಲದಲ್ಲಿ ಬಡತನದಿಂದ ಮದುವೆ ಆಗದೆ ಇರುವ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರವೇ ಮದುವೆ ಖರ್ಚನ್ನು ಕೊಡುವ ಆದೇಶವನ್ನು ಹೊರಡಿಸಲಾಗಿತ್ತು. ಸಾಮಾಜಿಕ ನ್ಯಾಯ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಹೆಣ್ಣು ಮಕ್ಕಳು ಈ ಯೋಜನೆ ಲಾಭ ಪಡೆದರೆ ಪೋಷಕರ ಆಶೀರ್ವಾದ ಸರ್ಕಾರಕ್ಕೆ ಸಿಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.