ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದು ಸೂಕ್ತ

Last Updated 3 ನವೆಂಬರ್ 2015, 19:51 IST
ಅಕ್ಷರ ಗಾತ್ರ

ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಚಿವ ರೋಷನ್ ಬೇಗ್ ಅವರು ಟಿಪ್ಪು ಸುಲ್ತಾನ್‌ ಹುತಾತ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕೆಂದು, ಟಿಪ್ಪು ಪ್ರತಿಮೆಯನ್ನು ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕೆಂದು ಒತ್ತಾಯಿಸಿರುವುದು ಸಮಂಜಸ. ಆದರೆ ಅಂದು ಸರ್ಕಾರಿ ರಜೆ ಘೋಷಿಸಬೇಕೆಂದು ಒತ್ತಾಯಿಸಿರುವುದು ಸರಿಯಲ್ಲ.

ಈಗಾಗಲೇ ಸರ್ಕಾರ ಹಲವು ಗಣ್ಯಮಾನ್ಯರ ಜನ್ಮದಿನಾಚರಣೆಗಳು, ಪುಣ್ಯದಿನಾಚರಣೆಗಳು ಹಾಗೂ ಇತರ ನೆಪಗಳ ಕಾರಣ ರಜೆ ಘೋಷಿಸುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಿದೆ. ಇಲ್ಲಸಲ್ಲದ ಆಚರಣೆಗಳಿಗಾಗಿ ಸರ್ಕಾರದ ಹಣ ಪೋಲು ಮಾಡುವುದು ಎಷ್ಟು ಸರಿ?  ಈಚೆಗೆ ಸರ್ಕಾರದ ವತಿಯಿಂದ ಆಚರಿಸಿದ ಭಗೀರಥ ಜನ್ಮದಿನಾಚರಣೆ, ಶಂಕರಾಚಾರ್ಯರ ದಿನಾಚರಣೆ ಅದ್ಯಾವ ಸಾರ್ಥಕತೆ ಪಡೆದುಕೊಂಡವೋ ತಿಳಿಯದು.

ನಾಡಿಗಾಗಿ ಜೀವ ತೆತ್ತವರನ್ನು, ಐತಿಹಾಸಿಕವಾಗಿ ಹೋರಾಡಿದವರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಇಂತಹ ಆಚರಣೆಗಳು ಎಲ್ಲರೂ ಭಾಗವಹಿಸುವಂತಹ ಆಚರಣೆಗಳಾಗಬೇಕು. ಯುವಪೀಳಿಗೆಗೆ ಆದರ್ಶಮಯವಾಗಿರಬೇಕು. ಅದು ಬಿಟ್ಟು ಸರ್ಕಾರಿ ರಜೆ ಘೋಷಿಸುವುದರಿಂದ, ರಜೆ ನೆಪದಿಂದ ಯಾರೂ ಮನೆಬಿಟ್ಟು ಆಚೆ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ವಿಶೇಷವಾಗಿ ಸರ್ಕಾರಿ ನೌಕರರಿಗೂ ಇದೇ ನೆಪ ಸಾಕು. ಇದರಿಂದ ದೇಶದ ದೈನಂದಿನ ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗುತ್ತವೆ.

ಈಗಾಗಲೇ ಭಾನುವಾರ, ಎರಡನೇ ಶನಿವಾರ, ನಿರ್ಬಂಧಿತ ರಜೆ ಹಾಗೂ ಸಾರ್ವಜನಿಕ ರಜೆ ಸೇರಿ ಸುಮಾರು 96 ದಿನಗಳು ವರ್ಷಕ್ಕೆ ವ್ಯಯವಾಗುತ್ತಿವೆ. ಅಕ್ಟೋಬರ್, ನವೆಂಬರ್‌ನಲ್ಲಿ ಒಂದರ ಹಿಂದೊಂದು ರಜೆಗಳು. ಮಧ್ಯದಲ್ಲಿ ಬರುವ ಕೆಲಸದ ದಿನಕ್ಕೆ ರಜೆ ಹಾಕಿಬಿಟ್ಟರೆ ವಾರಗಟ್ಟಲೆ ಸರ್ಕಾರಿ ಕೆಲಸಕ್ಕೆ ಪೆಟ್ಟು. ಈ ಬಗ್ಗೆ ಸರ್ಕಾರ ಮರುಚಿಂತನೆ ಮಾಡಿ ‘ಕಾಯಕವೇ ಕೈಲಾಸ’ ಎಂಬ ಸಂಕಲ್ಪದತ್ತ ಗಮನಹರಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT