PHOTOS | ಥಾಮಸ್ ಕಪ್: ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ
14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಫೈನಲ್ನಲ್ಲಿ ಅಮೋಘ ಗೆಲುವು ದಾಖಲಿಸಿರುವ ಭಾರತ, ಇದೇ ಮೊದಲ ಬಾರಿಗೆ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
Badminton | Thomas Cup | Indian Badminton | Kidambi Srikanth |ಬ್ಯಾಡ್ಮಿಂಟನ್ನಲ್ಲಿ ಐತಿಹಾಸಿಕ ಸಾಧನೆ - ಮೊದಲ ಬಾರಿಗೆ ಥಾಮಸ್ ಕಪ್ ಗೆಲುವು
ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಅಂತರದ ಗೆಲುವು
ಸಿಂಗಲ್ಸ್ನಲ್ಲಿ ಲಕ್ಷ್ಮ ಸೇನ್, ಕಿದಂಬಿ ಶ್ರೀಕಾಂತ್ ಮತ್ತು ಡಬಲ್ಸ್ನಲ್ಲಿ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿಗೆ ಗೆಲುವು
ಚಾಂಪಿಯನ್ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆ
14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಗೆಲುವು
ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಇಲಾಖೆ ₹ 1 ಕೋಟಿ ಬಹುಮಾನ ಘೋಷಿಸಿದೆ
ಭಾರತ ಬ್ಯಾಡ್ಮಿಂಟನ್ ಆಟಗಾರರ ಸಂಭ್ರಮ
ಫೈನಲ್ನಲ್ಲಿ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದ ಭಾರತ
1983ರ ಕ್ರಿಕೆಟ್ ವಿಶ್ವಕಪ್ ಗೆಲುವಿಗೆ ಹೋಲಿಸಿದ ಅಭಿಮಾನಿಗಳು
ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡದಿಂದ ಐತಿಹಾಸಿಕ ಸಾಧನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ನಡಾಲ್ ಮುಡಿಗೆ 14ನೇ ಫ್ರೆಂಚ್ ಓಪನ್, 22ನೇ ಗ್ರ್ಯಾನ್ಸ್ಲಾಂ ಕಿರೀಟ
ಅಪಾರ ಅನುಭವ, ದೈಹಿಕ ಸಾಮರ್ಥ್ಯ ಮತ್ತು ಕೌಶಲವನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಆಡಿದ ಸ್ಪೇನ್ನ ರಾಫೆಲ್ ನಡಾಲ್, ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು. ಈ ಮೂಲಕ ನಡಾಲ್, 14ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ, ‘ಕ್ಲೇ ಕೋರ್ಟ್ ಕಿಂಗ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಅಲ್ಲದೆ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು.
Rafael Nadal | French open | Tennis | Grand Slam |ರಾಫೆಲ್ ನಡಾಲ್, ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ನಡಾಲ್, ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 6–3, 6–3, 6–0 ರ ನೇರ ಸೆಟ್ಗಳ ಜಯ ಸಾಧಿಸಿದರು.
ಈ ಮೂಲಕ ನಡಾಲ್, 14ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ, ‘ಕ್ಲೇ ಕೋರ್ಟ್ ಕಿಂಗ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. (ಚಿತ್ರ ಕೃಪೆ: Twitter/@rolandgarros)
ಚಾಂಪಿಯನ್ ರಫೆಲ್ ನಡಾಲ್ ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ಚಿತ್ರ ಕೃಪೆ: Twitter/@rolandgarros)
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗೆದ್ದು ದಾಖಲೆಯ 21ನೇ ಟ್ರೋಫಿ ಜಯಿಸಿದ್ದ ನಡಾಲ್, ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು. (ಚಿತ್ರ ಕೃಪೆ: Twitter/@rolandgarros)
ಫ್ರೆಂಚ್ ಓಪನ್ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವ ನಡಾಲ್ಗೆ ಒಲಿಯಿತು. ಸ್ಪೇನ್ನವರೇ ಆದ ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು. (ಚಿತ್ರ ಕೃಪೆ: Twitter/@rolandgarros)
ಅಪಾರ ಅನುಭವ, ದೈಹಿಕ ಸಾಮರ್ಥ್ಯ ಮತ್ತು ಕೌಶಲವನ್ನು ನಡಾಲ್ ಪ್ರದರ್ಶಿಸಿದರು. (ಚಿತ್ರ ಕೃಪೆ: Twitter/@rolandgarros)
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ನಾಯಕ ಹಾರ್ದಿಕ್ ಆಲ್ರೌಂಡ್ ಆಟ; ಗುಜರಾತ್ ಚಾಂಪಿಯನ್
ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್, ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
Hardik Pandya | IPL 2022 | Gujarat Titans | Rajasthan Royals | Yuzvendra Chahal | Jos Buttler | Sanju Samson |ನಾಯಕ ಹಾರ್ದಿಕ್ ಆಲ್ರೌಂಡ್ ಆಟ - 3 ವಿಕೆಟ್ ಹಾಗೂ 34 ರನ್
ಟೂರ್ನಿಯಲ್ಲಿ ಜೋಸ್ ಬಟ್ಲರ್ ಗರಿಷ್ಠ ರನ್ ಸಾಧನೆ (863)
ಟೂರ್ನಿಯಲ್ಲಿ ಯಜುವೇಂದ್ರ ಚಾಹಲ್ ಅತಿ ಹೆಚ್ಚು ವಿಕೆಟ್ (27) ಸಾಧನೆ
ಗೆಲುವಿನ ಜೊತೆಯಾಟ ಕಟ್ಟಿದ ಶುಭಮನ್ ಗಿಲ್ ಹಾಗೂ ಡೇವಿಡ್ ಮಿಲ್ಲರ್
ಅಹಮದಾಬಾದ್ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಯಿಂದ ಫೈನಲ್ ಪಂದ್ಯ ವೀಕ್ಷಣೆ
ಓರ್ವ ಆಟಗಾರನಾಗಿ ಹಾರ್ದಿಕ್ಗೆ 5ನೇ ಐಪಿಎಲ್ ಕಿರೀಟ
ಫೈನಲ್ನಲ್ಲಿ ರಾಜಸ್ಥಾನ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು
ಗಿನ್ನೆಲ್ ದಾಖಲೆ - ಅತಿ ದೊಡ್ಡ ಕ್ರಿಕೆಟ್ ಜೆರ್ಸಿ ಅನಾವರಣ
ಪದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಚಾಂಪಿಯನ್
14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ರಾಜಸ್ಥಾನ್ಗೆ ಸೋಲು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಐಪಿಎಲ್ ಸಮಾರೋಪ ಸಮಾರಂಭದಲ್ಲಿ ತಾರೆಯರ ರಂಗು
ಐಪಿಎಲ್ 2022 ಫೈನಲ್ಗೂ ಮುನ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕಲಾವಿದರು ಸಮಾರೋಪ ಸಮಾರಂಭಕ್ಕೆ ಮೆರಗು ತುಂಬಿದ್ದಾರೆ.
IPL 2022 | IPL Final | Ahmedabad | Gujarat Titans | Rajasthan Royals | AR Rahman | Ranveer Singh |ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ ಎ.ಆರ್ ರೆಹಮಾನ್, ರಣವೀರ್ ಸಿಂಗ್
ಐಪಿಎಲ್ ಫೈನಲ್ಗೂ ಮುನ್ನ ವೀಕ್ಷಕ ವಿವರಣೆಗಾರರ ರಂಗು
ಸ್ಟೇಡಿಯಂಗೆ ಆಗಮಿಸಿದ ಅಭಿಮಾನಿಗಳು
ಫೈನಲ್ ವೀಕ್ಷಿಸಲು ಅಭಿಮಾನಿಗಳ ಆಗಮನ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಆಯೋಜನೆ
ಸ್ಟೈಲಿಷ್ ಉಡುಪಿನಲ್ಲಿ ಕಾಣಿಸಿಕೊಂಡ ರಣವೀರ್ ಸಿಂಗ್
ಬಾಲಿವುಡ್ ನಟ ರಣವೀರ್ ಸಿಂಗ್ ಮೋಡಿ
ಅಹಮದಾಬಾದ್ನಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಪ್ರೊಮೋಷನ್ನಲ್ಲಿ ಭಾಗವಹಿಸಿದ ನಟ ಅಕ್ಷಯ್ ಕುಮಾರ್, ನಟಿ ಮಾನುಷಿ ಚಿಲ್ಲರ್
ಭವ್ಯ ಸಮಾರೋಪ ಸಮಾರಂಭ
ಟ್ರೋಫಿ ಜೊತೆಗೆ ಸಂಜು ಸ್ಯಾಮ್ಸನ್ ಹಾಗೂ ಹಾರ್ದಿಕ್ ಪಾಂಡ್ಯ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಹಸಿರು ಪೋಷಾಕು; ಆರ್ಸಿಬಿಗೆ ಒಲಿದ ಅದೃಷ್ಟ
ಐಪಿಎಲ್ 2022 ಟೂರ್ನಿಯಲ್ಲಿ ಆರ್ಸಿಬಿ, ಭಾನುವಾರ ವಾಂಖೆಡೆ ಮೈದಾನದಲ್ಲಿ ಎಸ್ಆರ್ಎಚ್ ವಿರುದ್ಧ ನಡೆದ ಪಂದ್ಯದಲ್ಲಿ 67 ರನ್ ಅಂತರದ ಗೆಲುವು ದಾಖಲಿಸಿದೆ. ನಾಯಕ ಫಫ್ ಡುಪ್ಲೆಸಿ ಆಕರ್ಷಕ ಅರ್ಧಶತಕ (73*) ಗಳಿಸಿದರೆ ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. 'ಗೋ ಗ್ರೀನ್' ಅಭಿಯಾನದ ಅಂಗವಾಗಿ ಆರ್ಸಿಬಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿದಿತ್ತು.
Royal Challengers Bangalore | IPL 2022 | Sunrisers Hyderabad | Faf du Plessis |ನಾಯಕ ಫಫ್ ಡುಪ್ಲೆಸಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಿರಾಟ್ ಕೊಹ್ಲಿ ಗೆಲುವಿನ ಸಂಭ್ರಮ
ನಾಯಕನ ಆಟವಾಡಿದ ಫಫ್ ಡುಪ್ಲೆಸಿ (50 ಎಸೆತಗಳಲ್ಲಿ ಅಜೇಯ 73)
ರಜತ್ ಪಾಟಿದಾರ್ (48) ಜೊತೆಗೆ ಮೊದಲ ವಿಕೆಟ್ಗೆ ಡುಪ್ಲೆಸಿ ಶತಕದ ಜೊತೆಯಾಟ
ಆರ್ಸಿಬಿ ಆಟಗಾರರ ಸಂಭ್ರಮ - 67 ರನ್ ಅಂತರದ ಭರ್ಜರಿ ಗೆಲುವು
ಎರಡು ವಿಕೆಟ್ ಕಬಳಿಸಿದ ಜೋಶ್ ಹ್ಯಾಜಲ್ವುಡ್
ಕೊನೆಯ ಹಂತದಲ್ಲಿ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದ ದಿನೇಕ್ ಕಾರ್ತಿಕ್
ಕೊಹ್ಲಿ ಗೋಲ್ಡನ್ ಡಕ್ ಔಟ್; ಮ್ಯಾಕ್ಸ್ವೆಲ್ 33 ರನ್ ಕೊಡುಗೆ
ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ
ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ
18 ರನ್ ತೆತ್ತು 5 ವಿಕೆಟ್ ಗಳಿಸಿದ ಹಸರಂಗ ಜಾದೂ