ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ, ಆಡಳಿತಾತ್ಮಕ ತಂತ್ರ ಹೆಣೆಯಲು ತಂಡವನ್ನೇ ಕಟ್ಟಿಕೊಂಡಿರುವ ಫಡಣವೀಸ್

ಮಹಾರಾಷ್ಟ್ರ ಸಿಎಂಗಿದೆ ‘ವಿಶೇಷ ಕರ್ತವ್ಯನಿರತ ಅಧಿಕಾರಿ‘ಗಳ ಬಲ
Last Updated 15 ಮೇ 2019, 10:13 IST
ಅಕ್ಷರ ಗಾತ್ರ

ರಾಜಕೀಯ ತಂತ್ರಗಾರಿಕೆ ರೂಪಿಸಲು, ಆಡಳಿತಾತ್ಮಕ ಸಲಹೆ ಪಡೆಯಲು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸಲು ಒಂದು ತಂಡವನ್ನೇ ಕಟ್ಟಿಕೊಂಡಿದ್ದಾರೆಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ‘ವಿಶೇಷ ಕರ್ತವ್ಯನಿರತ ಅಧಿಕಾರಿ (ಒಎಸ್‌ಡಿಎಸ್)’ಗಳೆಂದು ಕೆಲವರನ್ನು ನೇಮಕ ಮಾಡಿಕೊಂಡಿದ್ದರು. ಇವರಲ್ಲಿ ಫಡಣವೀಸ್ ಆಪ್ತರಾದ ಕೇತನ್ ಪಾಠಕ್, ಕೌಸ್ತುಭ್ ಧವಸೆ, ಪ್ರಿಯಾ ಖಾನ್ ಮತ್ತು ರವಿಕಿರಣ್ ದೇಶ್‌ಮುಖ್ ಸಹ ಸೇರಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರವೀಣ್ ಪರದೇಸಿ ಮತ್ತು ಮುಖ್ಯ ಕಾರ್ಯದರ್ಶಿ ಭೂಷಣ್ ಗರ್ಗಾನಿ ಜತೆ ಈ ‘ವಿಶೇಷ ಕರ್ತವ್ಯನಿರತ ಅಧಿಕಾರಿ’ಗಳಿಗೂ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಮೂಲಸೌಕರ್ಯ, ಸಾಮಾಜಿಕ ಕ್ಷೇತ್ರ, ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಹೊಣೆಯನ್ನೂ ವಹಿಸಲಾಗಿದೆ. ಮುಂಬೈ ಮೆಟ್ರೊ, ಟ್ರಾನ್ಸ್‌ ಹಾರ್ಬರ್ ಮತ್ತಿತರ ಯೋಜನೆಗಳ ಅನುಷ್ಠಾನಕ್ಕೆ ಐಎಎಸ್‌ ಅಧಿಕಾರಿಗಳ ಜತೆಗೂಡಿ ಈ‘ವಿಶೇಷ ಕರ್ತವ್ಯನಿರತ ಅಧಿಕಾರಿ’ಗಳೂ ಕೆಲಸಮಾಡುತ್ತಿದ್ದಾರೆ.

‘ವಿಶೇಷ ಕರ್ತವ್ಯನಿರತ ಅಧಿಕಾರಿ’ಗಳಲ್ಲಿ ಹೆಚ್ಚಿನವರು ಬಹಳ ಹಿಂದಿನಿಂದಲೂ ಫಡಣವೀಸ್‌ಗೆ ಪರಿಚಿತರೇ. ‘ಈ ತಂಡವನ್ನು ಸೇರುವುದಕ್ಕೂ ಮೊದಲೇ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಸದ್ಯ ನೀತಿ ನಿರೂಪಣೆಗೆ ಸಲಹೆ, ರಾಜ್ಯ ಬಜೆಟ್ ವಿಶ್ಲೇಷಣೆ’ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ ಪ್ರಿಯಾ ಖಾನ್.

‘ವಿಶೇಷ ಕರ್ತವ್ಯನಿರತ ಅಧಿಕಾರಿ’ಯಾಗಲು ಲಾಭದಾಯಕ ಹುದ್ದೆಯನ್ನೇ ತೊರೆದು ಬಂದವರು ಕೌಸ್ತುಭ್ ಧವಸೆ. ‘ಈಗಿರುವ 11 ಕಿಲೋ ಮೀಟರ್‌ ಮೆಟ್ರೊ ಕಾಮಗಾರಿ ಮುಗಿಯಲು 11 ವರ್ಷಗಳೇ ಬೇಕಾಗಿದ್ದವು. ಆದರೆ ನಾವು ಮೂರು ಪ್ರಮುಖ ನಗರಗಳಲ್ಲಿ ಮೂರರಿಂದ ಐದು ವರ್ಷಗಳಲ್ಲಿ 276 ಕಿಲೋ ಮೀಟರ್ ಮೆಟ್ರೊ ಕಾಮಗಾರಿಗೆ ಅನುಮತಿ ನೀಡಿದ್ದೇವೆ. ಈಗಾಗಲೇ ಕಾಮಗಾರಿಯೂ ಆರಂಭವಾಗಿದೆ’ ಎಂದು ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ ಧವಸೆ.

‘ಯಾವುದೇ ಇಲಾಖೆ ಬಗ್ಗೆ ಏನೇ ಸುದ್ದಿ ಪ್ರಕಟ, ಪ್ರಸಾರವಾದರೂ ಒಂದು ಗಂಟೆ ಒಳಗೆ ಪ್ರತಿಕ್ರಿಯೆ ನೀಡಬೇಕೆಂಬ ನೀತಿ ರೂಪಿಸಿಕೊಂಡಿದ್ದೇವೆ’ ಎಂದಿದ್ದಾರೆ ಮಾಧ್ಯಮ ತಂಡದ ಜವಾಬ್ದಾರಿ ವಹಿಸಿಕೊಂಡಿರುವ ಕೇತನ್ ಪಾಠಕ್. ಮಾಜಿ ಪತ್ರಕರ್ತರಾಗಿರುವ ಇವರುರವಿಕಿರಣ್ ದೇಶ್‌ಮುಖ್ ಜತೆಗೂಡಿ ಮಾಧ್ಯಮ ತಂಡ ನಿರ್ವಹಿಸುತ್ತಿದ್ದಾರಲ್ಲದೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT