ಬುಧವಾರ, ಫೆಬ್ರವರಿ 26, 2020
19 °C

ವೈಎಸ್ಆರ್ ಕಾಂಗ್ರೆಸ್‌ನ ಆಭ್ಯರ್ಥಿ ಪಟ್ಟಿಯನ್ನು ಟೀಕಿಸಿದ ಪವನ್‌ ಕಲ್ಯಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಚಲಿಪಟ್ಟಣಂ: ವೈ.ಎಸ್. ಜಗನ್‌ ಮೋಹನ್ ರೆಡ್ಡಿಯವರು ತಮಗೆ ಕಷ್ಟದ ಸಮಯದಲ್ಲಿ ಆರ್ಥಿಕ ಸಹಾಯ ಮಾಡಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನಿಡದೇ ಮೂಲೆಗುಂಪು ಮಾಡಿದ್ದಾರೆ ಎಂದು ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಆರೋಪಿಸಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್‌ನ ಕಾರ್ಯಕರ್ತರನ್ನು ಜಗನ್‌ ಮೋಹನ್ ರೆಡ್ಡಿ ಆರ್ಥಿಕವಾಗಿ ಶೋಷಿಸುತ್ತಿದ್ದಾರೆ ಎಂದು ಮಚಲಿಪಟ್ಟಣಂನಲ್ಲಿ ನಡೆದ ಚುನಾವಣಾ ಕಾರ್ಯಕ್ರಮದಲ್ಲಿ ಪವನ್‌ ಕಲ್ಯಾಣ್‌ ಹೇಳಿದರು

ನಾನು 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜನರಲ್ಲಿ ಗೊಂದಲವಿದೆ. ಅದರೂ ಯುವ ಜನರ ಪ್ರೀತಿ ಮತ್ತು ಸಹಕಾರ  ನನ್ನನು ಚುನಾವಣೆಯಲ್ಲಿ ಸ್ಪರ್ಧಿಸುಲು ಪ್ರೆರೇಪಿಸಿದೆ ಎಂದು ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಯಾವುದೇ ಯೋಜನೆಗಳು ಜನಸಾಮಾನ್ಯರ ಪ್ರಯೋಜನಕ್ಕೆ ಬಂದಿಲ್ಲ. ಬಾಯಿ ಮಾತಿಗೆ ಜನ ಸೇವಕರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಮಚಲಿಪಟ್ಟಣಂ ಬಂದರಿನಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಚುನಾವಣೆಗಾಗಿ ಲಾಭ ಪಡೆಯಲು ಕಳೆದ ತಿಂಗಳು ಶಿಲಾನ್ಯಾಸ ಮಾಡಲಾಗಿದೆ ಎಂದು ಟಿಡಿಪಿ ಸರಕಾರವನ್ನು ಟೀಕಿಸಿದರು. ಮುಖ್ಯಮಂತ್ರಿಯಾಗುವ  ಭರವಸೆಯನ್ನು ವ್ಯಕ್ತಪಡಿಸಿದ ನಟ ಪವನ್‌, ರೈತರಿಗೆ ಯಾವುದೇ ತೊಂದರೆಯಾಗದಂತೆ ಮಚಲಿಪಟ್ಟಣಂನ ಬಂದರನ್ನು ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು