ಎತ್ತಲೂ ಬಯಲು, ಸುತ್ತಲೂ ಬೆಟ್ಟಗಳ ಸಾಲು, ಅಲ್ಲಲ್ಲಿ ಜಾಲಿ, ಸೀಗೆ ಮೆಳೆಗಳು, ಪಚ್ಚೆ ಹುಲ್ಲಿನ ನಡುವೆ ಚಿನ್ನಾಟವಾಡುವ ಕೃಷ್ಣಮೃಗಗಳು. ಪೊದೆಗಳಲ್ಲಿ ಅವಿತು ಕುಳಿತು ನಾದ ಹೊಮ್ಮಿಸುವ ಬೀ ಈಟರ್ಗಳು. ಗರಿಬಿಚ್ಚಿ ನರ್ತಿಸುವ ಮಯೂರಿ. ಮರದ ತುದಿಯಲ್ಲಿಂದ ಹೊರಹೊಮ್ಮುವ ಹಕ್ಕಿಗಳ ನಿನಾದ, ಮೊಲಗಳ ಜಿಗಿತ, ಜಿಂಕೆಗಳ ನೆಗೆದಾಟ...

ಇದು ತುಮಕೂರು ಜಿಲ್ಲೆ ಕೊರಟಗೆರೆ– ಮಧುಗಿರಿಯ ನಂತರ ಕಾಣುವ ಜಯಮಂಗಲಿ ವನ್ಯಜೀವಿಧಾಮ. ಸಾವಿರಾರು ಕೃಷ್ಣಮೃಗಗಳನ್ನು ಪೋಷಿಸುತ್ತಿರುವ ಧಾಮವಿದು. ಈಚೆಗೆ ಆ ವನ್ಯಜೀವಿ ಧಾಮಕ್ಕೆ ಭೇಟಿ ನೀಡುವ ಆಕಸ್ಮಿಕ ಅವಕಾಶವೊಂದು ಒದಗಿಬಂದಿತ್ತು. ಮುಂಜಾನೆ ತುಮಕೂರು ಬಿಟ್ಟು, ವನ್ಯಜೀವಿಧಾಮವಿರುವ ಪುರವರ ಗ್ರಾಮ ತಲುಪಿದಾಗ ಬೆಳಿಗ್ಗೆ 10.30ಗಂಟೆಯಾಗಿತ್ತು. ವನ್ಯಜೀವಿ ಧಾಮ ಪ್ರವೇಶಿಸುತ್ತಿರುವಾಗಲೇ ಕೃಷ್ಣಮೃಗಗಳ ಹಿಂಡು ಕಂಡಿತು. ಒಂದು ಅಮ್ಮನತ್ತ ಜಿಗಿಯುತ್ತಿದ್ದರೆ, ಇನ್ನಷ್ಟು ಪುಟ್ಟ ಪುಟ್ಟ ಮರಿಗಳು, ಶಾಲೆಯಲ್ಲಿ ಮಕ್ಕಳು ಪ್ರಾರ್ಥನೆಗೆ ಸಾಗುವಂತೆ ಸಾಲಾಗಿ ಲೆಫ್ರೈಟ್ ಮಾಡಿಕೊಂಡು ಹೊರಟಿದ್ದವು. ಕೆಲವು ಪೊದೆಗಳ ಅಡಿಯಲ್ಲಿ ತಣ್ಣನೆ ವಿಶ್ರಾಂತಿ ಪಡೆಯುತ್ತಿದ್ದವು.

ಅವುಗಳ ಓಡಾಟ ಎಷ್ಟು ಚುರುಕಾಗಿತ್ತೆಂದರೆ, ಒಂದು.. ಎರಡು.. ಮೂರು ಎಂದು ಎಣಿಸುತ್ತಾ ನಾವು ಕಣ್ಣು ಸೆಟ್ ಮಾಡಿಕೊಳ್ಳುವ ಹೊತ್ತಿಗೆ, ಚಂಗನೆ ಜಿಗಿದು ಮಾಯವಾಗುತ್ತಿದ್ದವು. ಅವುಗಳ ವೇಗಕ್ಕೆ ನಮ್ಮ ಕಣ್ಣಷ್ಟೇ ಅಲ್ಲ, ಜತೆಗಿದ್ದ ಕ್ಯಾಮೆರಾದ ಕಣ್ಣನ್ನು ಹೊಂದಿಸು ವುದು ಕಷ್ಟವಾಗಿಬಿಟ್ಟಿತು. ಕೃಷ್ಣಮೃಗಗಳ ಹಿಂಡು ಮುಂದೆ ಸಾಗುತ್ತಿದ್ದಂತೆ, ಕಾಡು ಹಂದಿಯೊಂದು ಸರಿದಾಡಿತು. ಜತೆಗೆ, ಪಕ್ಷಿಗಳ ಹಿಂಡು ಹಾರಾಡುತ್ತಿದ್ದುದು ಕಂಡಿತು.

ಈ ವನ್ಯಜೀವಿಧಾಮದಲ್ಲಿರುವ ಪ್ರಾಣಿಗಳ ಆಹಾರಕ್ಕಾಗಿ ಅಲ್ಲಲ್ಲೇ ರೇಷ್ಮೆ, ಹುರುಳಿ, ಸೊಪ್ಪು, ಹೆಪ್ಪು ನೇರಳೆ ಗಿಡಗಳನ್ನು ಬೆಳೆಸಿದ್ದಾರೆ. ಹೀಗಾಗಿ ಬಿಸಿಲೇರುತ್ತಿದ್ದರೂ, ಮೇವಿಗಾಗಿ ಪ್ರಾಣಿಗಳು ಹಿಂಡು ಹಿಂಡಾಗಿ ಬಯಲಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಸಂಜೆಯಾಗುತ್ತಿದ್ದಂತೆ ಮನೆಯತ್ತ ಹೊರಟು ನಿಂತಾಗ, ಕೃಷ್ಣಮೃಗಗಳ ಹಿಂಡಿನ ಜತೆಗೆ, ನವಿಲುಗಳು ಕಾಣಿಸಿಕೊಂಡವು. ರಾಜಸಖಿಯ ರಂತೆ ಅಲ್ಲಲ್ಲಿ ಗುಂಪುಗೂಡಿ ಓಡಾಡುವ, ಗರಿಬಿಚ್ಚಿ ನರ್ತಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಫೋಟೊಗ್ರಫಿಗೆ ಉತ್ತಮ ಸ್ಥಳ

ಈ ವನ್ಯಜೀವಿಧಾಮ ಪ್ರವಾಸದ ಜತೆಗೆ, ಛಾಯಾಗ್ರಹಣಕ್ಕೂ ಉತ್ತಮ ತಾಣ. ಅತ್ಯುತ್ತಮ ಲೆನ್ಸ್ ಹಾಗೂ ಆಧುನಿಕ ಕ್ಯಾಮೆರಾ ಉಳ್ಳವರಿಗೆ ಮಾತ್ರ ಕೃಷ್ಣಮೃಗಗಳ ವೈವಿಧ್ಯಮಯ ಚಟುವಟಿಕೆಗಳನ್ನು ದೂರದಲ್ಲೇ ನಿಂತು ಸೆರೆ ಹಿಡಿಯಬಹುದು. ಸಾಮಾನ್ಯ ಕ್ಯಾಮೆರಾಗಳಲ್ಲಿ ಚಿತ್ರ ತೆಗೆಯಬಹುದು. ಆದರೆ, ಪ್ರಾಣಿಗಳ ವೇಗಕ್ಕೆ ಕ್ಯಾಮೆರಾ ‘ಫೋಕಸ್’ ಮಾಡುವುದೇ ಕಷ್ಟ. ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರ ಸೆರೆಹಿಡಿಯಲು ಯತ್ನಿಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಕಣ್ಣಲ್ಲೇ ನೋಡಿ, ಮನದಲ್ಲೇ ಚಿತ್ರಗಳನ್ನು ಪ್ರಿಂಟ್ ಹಾಕಿಕೊಳ್ಳುತ್ತೇವೆ ಎಂದುಕೊಳ್ಳುವ ‘ವನ್ಯಜೀವಿ’ ಪ್ರಿಯರಿಗೆ ಉತ್ತಮ ಬೈನಾಕ್ಯುಲರ್ ಇದ್ದರೆ ಸಾಕು. ಕೃಷ್ಣಮೃಗಗಳ ಜತೆಗೆ, ಇತರೆ, ಪ್ರಾಣಿ ಪಕ್ಷಿಗಳನ್ನು ನೋಡಬಹುದು. ನಾವು ಬೆಳಿಗ್ಗೆಯಿಂದ ಸಂಜೆವರೆಗೂ ಅಡ್ಡಾಡುತ್ತಾ ಸುಮಾರು 100 ಕೃಷ್ಣಮೃಗಗಳು ಹಿಂಡನ್ನು ನೋಡಿರಬಹುದು. ಜತೆಗೆ ಬೇರೆ ಬೇರೆ ಪ್ರಾಣಿಗಳೂ ಕಂಡವು.

ಪರಿಸರ ಸೂಕ್ಷ್ಮ ಪ್ರದೇಶ, ಎಚ್ಚರ

ವನ್ಯಜೀವಿ ಧಾಮದಲ್ಲಿ ಪ್ರವಾಸಿಗರಿಗೆ ಸೂಚನೆ ನೀಡುವ ಫಲಕಗಳಿವೆ. ಆ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ, ಪ್ರಕೃತಿಯಲ್ಲಿ ಸಹಜವಾಗಿ ಜೀವನ ನಡೆಸುವ ಇಲ್ಲಿನ ಪ್ರಾಣಿಗಳು ಮೃಗಾಲಯ ಪ್ರಾಣಿಗಳಿಗಿಂತ ಭಿನ್ನ. ಅವು ಮನುಷ್ಯರ ಚೇಷ್ಟೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ. ಹಾಗಾಗಿ ಪ್ರವಾಸಿಗರು ನಿಶ್ಯಬ್ದವಾಗಿರಬೇಕು. ಪ್ರಾಣಿಗಳ ಗುಂಪು ಕಂಡೊಡನೆ ಕೇಕೆ ಹಾಕುವುದು, ಚಪ್ಪಾಳೆ ತಟ್ಟುವುದು ಮಾಡಿದರೆ ಅರಣ್ಯ ಇಲಾಖೆ ಸಿಬ್ಬಂದಿ, ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಾರೆ. ಛಾಯಾಗ್ರಾಹಕರಿಗೂ ಈ ನಿಯಮಗಳೂ ಅನ್ವಯಿಸುತ್ತವೆ. ಚಿತ್ರ ತೆಗೆಯುವ ಭರದಲ್ಲಿ ಪ್ರಾಣಿಗಳ ಹತ್ತಿರತ್ತಿರಕ್ಕೆ ಹೋಗುವುದು, ಕೂಗುವುದು ಮಾಡುವಂತಿಲ್ಲ. ಅದು ಅಪರಾಧ. ಜತೆಗೆ, ಪ್ಲಾಸಿಕ್ ಮತ್ತು ಮಣ್ಣಲ್ಲಿ ಕರಗದ ತ್ಯಾಜ್ಯವನ್ನು ಎಸೆಯುವಂತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ, ಈ ಮೊದಲೇ ಪ್ರವಾಸಿಗರಿಗೆ ತಿಳಿಹೇಳುತ್ತಾರೆ.

ವಾಹನ ಸವಾರರಿಗೂ ಮಾಹಿತಿ

ವಾಹನಗಳು ಕಚ್ಚಾರಸ್ತೆ ಮೇಲೆಯೇ ಚಲಿಸಬೇಕು. ಅದು ಬಿಟ್ಟು ಹುಲ್ಲುಗಾವಲಿನಲ್ಲಿ ಚಲಿಸುವಂತಿಲ್ಲ. ಆದಷ್ಟು, ಕಾಡಿನ ಪರಿಸರಕ್ಕೆ ಹೊಂದುವಂತಹ ಉಡುಗೆ– ತೊಡುಗೆ ಇದ್ದರೆ ಒಳ್ಳೆಯದು. ಊಟ–ಉಪಹಾರ ಸೇವನೆಗಾಗಿ ವನ್ಯಜೀವಿ ಧಾಮದ ಪ್ರವೇಶದ್ವಾರದಲ್ಲೇ ಪ್ರತ್ಯೇಕ ಸ್ಥಳ ನಿಗದಿ ಮಾಡಿದ್ದಾರೆ. ಪ್ರಾಣಿಗಳನ್ನು ನೋಡಲು ಹೋದ ಸ್ಥಳದಲ್ಲಿ ಆಹಾರ ಸೇವನೆ ನಿಷಿದ್ಧ. ಅಷ್ಟೇ ಅಲ್ಲ, ಮದ್ಯ, ಮಾಂಸಾಹಾರ, ಧೂಮಪಾನ ಇಲ್ಲಿ ನಿಷೇಧಿಸಲಾಗಿದೆ. ನಿಸರ್ಗದತ್ತವಾಗಿರುವ ಇಲ್ಲಿನ ಪ್ರಾಣಿಗಳನ್ನು ಸಂರಕ್ಷಿಸುವ ಬದ್ಧತೆ ಪ್ರವಾಸಿಗರಿಗೂ ಇದ್ದರೆ ಒಳಿತು.

ಈ ವನ್ಯಜೀವಿಧಾಮ ಕೃಷ್ಣಮೃಗಗಳಿಗೆ ಹೆಸರುವಾಸಿಯಾ ಗಿದ್ದರೂ ಇದರ ಜತೆಗೆ, ಕಾಡುಹಂದಿ, ತೋಳ, ಮುಂಗುಸಿ, ಅಳಿಲು, ಕಾಡುಬೆಕ್ಕು, ಕಡವೆ, ಮೊಲ, ಗಿಳಿ, ಬಾವಲಿ, ಮಿಂಚುಳ್ಳಿ, ಬುಲ್ ಬುಲ್ ಮುನಿಯ, ಚಂದ್ರಮುಕುಟ, ಕಲ್ಲು ಗುಬ್ಬಚ್ಚಿ, ಗಿಡುಗ ಹೀಗೆ ಅಪರೂಪದ ಜೀವವೈವಿಧ್ಯವೇ ಈ ಧಾಮದಲ್ಲಿ ಮೇಳೈಸಿವೆ. ಬೇರೆಲ್ಲೂ ಕಾಣಸಿಗದ ಸಸ್ಯ ಪ್ರಬೇಧಗಳು, ಪಕ್ಷಿ, ಕೀಟ, ಚಿಟ್ಟೆಗಳು, ಅಲ್ಲದೇ ರಾತ್ರಿಯಾದೊಡೆನೆ ಕ್ರೀಯಾಶಿಲವಾಗುವ ನಿಶಾಚರಿ ಪ್ರಾಣಿಗಳಿಂದ ಈ ಹುಲ್ಲುಗಾವಲು ವಿಸ್ಮಯಗಳ ಕಣಜವಾಗಿದೆ. ಇವೆಲ್ಲವನ್ನೂ ನೋಡಿ ಆನಂದ ಪಡುವ ಜತೆಗೆ, ಅವುಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು ಅಲ್ಲಿಗೆ ತೆರಳುವ ಪ್ರತಿಯೊಬ್ಬ ಪ್ರವಾಸಿಗರ ಜವಾಬ್ದಾರಿಯಾಗಿದೆ.

ಹೋಗುವುದು ಹೇಗೆ

ರಸ್ತೆ ಮಾರ್ಗ: ಬೆಂಗಳೂರಿನಿಂದ ಡಾಬಸ್ಪೇಟೆ–ಊರ್ಡಿಗೆರೆ–ಕೊರಟಗೆರೆ–ಮಧುಗಿರಿ–ಪುರವರ ಮೂಲಕ ವನ್ಯಜೀವಿಧಾಮಕ್ಕೆ ತಲುಪುವುದಾದರೆ 110 ಕಿ.ಮೀ ದೂರವಾಗುತ್ತದೆ.

ಇನ್ನೊಂದು ಮಾರ್ಗ: ಬೆಂಗಳೂರು– ದೊಡ್ಡಬಳ್ಳಾಪುರ ಕ್ರಾಸ್– ಗೌರಿಬಿದನೂರು– ಕೊಡಿಗೇನಹಳ್ಳಿ– ಜಯಮಂಗಲಿ ವನ್ಯಧಾಮ– ಈ ಮಾರ್ಗವಾಗಿ ಕ್ರಮಿಸಿದರೆ 97 ಕಿ.ಮೀ ಆಗುತ್ತದೆ. ತುಮಕೂರು – ಕೊರಟಗೆರೆ– ಮಧುಗಿರಿ– ಪುರವರ ಮಾರ್ಗವಾಗಿ ತಲುಪಬಹುದು.

ವನ್ಯಧಾಮಕ್ಕೆ ಹೋಗಲು ಸ್ವಂತ ವಾಹನ ವ್ಯವಸ್ಥೆ ಇದ್ದರೆ ಒಳಿತು. ಏಕೆಂದರೆ, ಕೊಡಿಗೇನಹಳ್ಳಿಯಿಂದ (7 ಕಿ.ಮೀ) ವನ್ಯಜೀವಿ ಧಾಮಕ್ಕೆ ಬಸ್ ಸೌಲಭ್ಯವಿಲ್ಲ.

ರೈಲು ಮಾರ್ಗ: ತುಮಕೂರು ಸಮೀಪದ ರೈಲ್ವೆ ನಿಲ್ದಾಣ. ಅಲ್ಲಿಂದ ಖಾಸಗಿ ಅಥವಾ ಸರ್ಕಾರಿ ಬಸ್ಗಳ ಮೂಲಕ ಮಧುಗಿರಿ– ಪುರವರ ಮಾರ್ಗವಾಗಿ ಹೋಗಬಹುದು. ಆಂಧ್ರದ ಹಿಂದೂಪುರ ರೈಲು ನಿಲ್ದಾಣದಿಂದ ಬರುವವರಿಗೆ ಮಧುಗಿರಿ, ಕೊಡಿಗೇನಹಳ್ಳಿಗೆ ಖಾಸಗಿ ಬಸ್ಗಳ ಸೌಲಭ್ಯವಿದೆ.

ಸ್ಥಳೀಯರನ್ನು ಕೇಳಿ ಪ್ರಯಾಣಿಸಿ

ಪ್ರವಾಸಿಗರು ಮಾರ್ಗ ಸೂಚಿ ಬಗ್ಗೆ ಅಲ್ಲಲ್ಲೇ ಸ್ಥಳೀಯರನ್ನು ಕೇಳಿ ತಿಳಿದುಕೊಂಡು ಪ್ರಯಾಣಿಸಬೇಕು. ಏಕೆಂದರೆ, ಇಲ್ಲಿ ಪ್ರವಾಸಿ ಮಾರ್ಗಸೂಚಿ ಫಲಕಗಳ ಕೊರತೆ ಎದ್ದುಕಾಣುತ್ತದೆ. ಪುರವರ, ಕೊಡಿಗೇನಹಳ್ಳಿಯಲ್ಲಿ ಸಣ್ಣ ಫಲಕಗಗಳನ್ನು ಬಿಟ್ಟರೆ ಬೇರೆಲ್ಲೂ ಮಾರ್ಗಸೂಚಿಗಳನ್ನು ಅಳವಡಿಸಿಲ್ಲ. ಅಲ್ಲದೇ ಈ ವನ್ಯಧಾಮ ಆಂಧ್ರದ ಗಡಿಗೆ ಅಂಟಿಕೊಂಡಿದ್ದು, ಹಿಂದೂಪುರ, ಅನಂತಪುರ ಈ ಭಾಗಗಳಿಂದಲೂ ಪ್ರವಾಸಿಗರು ಬರುತ್ತಾರೆ. ಆದರೆ, ಆ ಭಾಗದಲ್ಲಿ ಒಂದೂ ಮಾರ್ಗಸೂಚಿ ಫಲಕಗಳಿಲ್ಲ.

ಊಟ–ವಸತಿ ಸೌಲಭ್ಯ

ವನ್ಯಧಾಮದಲ್ಲಿ ತಂಗಲು ಒಂದು ವಿಶ್ರಾಂತಿ ಗೃಹವಿದೆ. ಆದರೆ ಪ್ರವಾಸಿಗರಿಗೆ ಅವಕಾಶವಿಲ್ಲ. (ಈ ಹಿಂದೆ ಅವಕಾಶವಿತ್ತು). ಪ್ರವಾಸಿಗರೇ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕು. ವನ್ಯಜೀವಿ ಸಮೀಪದಲ್ಲಿರುವ ಪುರವರ, ಕೊಡಿಗೇನಹಳ್ಳಿಯಲ್ಲಿ ಹೋಟೆಲ್ಗಳಿವೆ. ಕೃಷ್ಣಮೃಗಗಳ ವೀಕ್ಷಣೆಗಾಗಿ ವನ್ಯಧಾಮದ ಬಯಲಿನಲ್ಲಿ 5 ವೀಕ್ಷಣಾ ಗೋಪುರಗಳಿವೆ. ಅದರಲ್ಲಿ ಮೂರು ಗೋಪುರಗಳನ್ನು ಆಧುನೀಕರಿಸಿದ್ದಾರೆ.

ಸೂಕ್ತ ಸಮಯ: ಜೂನ್ನಿಂದ ಸೆಪ್ಟಂಬರ್ ತಿಂಗಳು ಪ್ರವಾಸಿಗರು ಈ ವನ್ಯಜೀವಿ ಧಾಮಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.