ಭಾನುವಾರ, ಜೂನ್ 26, 2022
29 °C

ಸಾಹಸಮಯ ಯಾನದ ಆರಂಭಕ್ಕೆ ‘ಎಸ್‌ಟಿಎ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರವಾಸಿಗರಿಗೆ ಸಾಹಸಮಯ ಯಾನ ಆರಂಭಿಸಲು ಪ್ರೇರೇಪಿಸುವ ಉದ್ದೇಶದಿಂದ ‘ಸ್ಟಾರ್ಟ್ ಟ್ರಾವೆಲ್ ಅಡ್ವೆಂಚರ್’ (ಎಸ್‌ಟಿಎ) 1979ರಿಂದ ಕಾರ್ಯನಿರ್ವಹಿಸುತ್ತಿದೆ. ನಿರ್ದಿಷ್ಟವಾಗಿ ವಿದ್ಯಾರ್ಥಿಗಳಿಗೆ ಹಾಗೂ ಯುವಜನರಿಗೆ ಪ್ರತ್ಯೇಕ ಆಫರ್‌ಗಳು ಇಲ್ಲಿ ಲಭ್ಯ. ₹3,863 (49 ಯುರೊ) ಮುಂಗಡ ಪಾವತಿಸಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇದೆ.

ರೌಂಡ್ ದಿ ವರ್ಲ್ಡ್

ಜಗತ್ತಿನ ಬೇರೆ ಬೇರೆ ದಿಕ್ಕಿನಲ್ಲಿರುವ ಸ್ಥಳಗಳಿಗೆ ಒಂದೊಂದು ಬಾರಿ ಭೇಟಿ ನೀಡಬೇಕೆಂದರೆ ಪ್ರವಾಸದ ವೆಚ್ಚ ಹೆಚ್ಚುತ್ತಾ ಹೋಗುತ್ತದೆ. ಬಜೆಟ್ ಕಡಿಮೆ ಮಾಡಿ ಸುತ್ತಾಡಲು ಇಲ್ಲೊಂದು ಅವಕಾಶವಿದೆ. ಒಂದೇ ಸುತ್ತಾಟದಲ್ಲಿ ನಿಮ್ಮದೇ ಆಯ್ಕೆಯ ವಿವಿಧ ಸ್ಥಳಗಳಿಗೆ ಹೇಗೆ ಭೇಟಿ ನೀಡಬಹುದು ಎಂದು ಇಲ್ಲಿ ತಜ್ಞರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ ‘ರೌಂಡ್ ದಿ ವರ್ಲ್ಡ್’ ಟಿಕೆಟ್ (ಆರ್‌ಟಿಡಬ್ಲ್ಯು) ಎನ್ನುವ ಪ್ರತ್ಯೇಕ ಸೌಲಭ್ಯ ಇದೆ. ಬಜೆಟ್ ಬಗ್ಗೆ ಚಿಂತಿಸದೆ ನೋಡಬೇಕೆನಿಸಿದ ಸ್ಥಳಗಳನ್ನೆಲ್ಲಾ ಪಟ್ಟಿ ಮಾಡಿ ನೀಡಿದರೆ, ಪ್ರವಾಸ ಹೇಗೆ ಕೈಗೊಳ್ಳುವುದು ಎಂದು ತಜ್ಞರು ಮಾರ್ಗದರ್ಶನ ಮಾಡುತ್ತಾರೆ.

ಗುಂಪು ಪ್ರವಾಸಕ್ಕಾಗಿ ಜಿ ಅಡ್ವೆಂಚರ್ ವಿಭಾಗದಲ್ಲಿ ಟಿಕೆಟ್ ಕಾಯ್ದಿರಿಸಿದರೆ ಮುಂದಿನ ಬಾರಿ ಈ ವಿಭಾಗದಲ್ಲಿ ಪ್ರವಾಸ ಕೈಗೊಳ್ಳುವಾಗ ಶೇ 10 ರಿಯಾಯ್ತಿ ದೊರಕುತ್ತದೆ.

ಟಿಕೆಟ್ ಮಾರಾಟಕ್ಕೆ

ಪ್ರವಾಸದ ಟಿಕೆಟ್‌ಗಳು ಮಾರಾಟಕ್ಕೆ ಇರುತ್ತವೆ. ಜತೆಗೆ ಶೇ 25ರಷ್ಟು ರಿಯಾಯ್ತಿ ಸಹ ದೊರಕುತ್ತದೆ. ಸದ್ಯಕ್ಕೆ ಈ ತಿಂಗಳ ಟಿಕೆಟ್ ಮಾರಾಟ ಆರಂಭವಾಗಿದ್ದು, 31ರೊಳಗೆ ಖರೀದಿಸಬೇಕಾಗುತ್ತದೆ.

ಹಾಗಾದರೆ ತಡವೇಕೆ ಮೊದಲು ಯಾವ ವಿಭಾಗದಲ್ಲಿ ಪ್ರವಾಸ ಕೈಗೊಳ್ಳಬೇಕೆಂದು ಆಯ್ಕೆ ಮಾಡಿ ಟಿಕೆಟ್ ಕಾಯ್ದಿರಿಸಿ ಬಳಿಕ ಲಗೇಜ್ ಸಿದ್ಧಪಡಿಸಿಕೊಳ್ಳಿ. ಮಾಹಿತಿಗಾಗಿ https://www.statravel.co.uk/ ಇಲ್ಲಿ ಕ್ಲಿಕ್ ಮಾಡಿ.

ಮಾಹಿತಿ: ರಾಧಿಕಾ ಎನ್‌. ಆರ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.