ಸಂತೇಮರಹಳ್ಳಿ: ಜಿಲ್ಲೆಯ ಪ್ರಮುಖ ಹೋಬಳಿಗಳಲ್ಲಿ ಒಂದಾಗಿರುವ ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರೂ ಜಾನುವಾರುಗಳಿಗೆ ಸಾಕಷ್ಟು ಕುಡಿಯುವ ನೀರು ಲಭ್ಯವಾಗಿಲ್ಲ.

ಏಪ್ರಿಲ್ 30ರ ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದರೂ ಸಂತೇಮರಹಳ್ಳಿ ಹೋಬಳಿಯಾದ್ಯಂತ ಸ್ವಲ್ಪವೂ ಮಳೆ ಬಿದ್ದಿರಲಿಲ್ಲ.

ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿ ಕೆರೆಕಟ್ಟೆಗಳು ಅಲ್ಪ ಪ್ರಮಾಣದಲ್ಲಾದರೂ ತುಂಬಬೇಕಿತ್ತು. ಕಳೆದ ವರ್ಷ ಈ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗಿರಲಿಲ್ಲ. ಆದರೆ, ಈ ಬಾರಿಕೆರೆಗೆ ನೀರು ಹರಿದುಬರುವಂತಹ ಮಳೆ ಇನ್ನೂ ಬಂದಿಲ್ಲ.

ಜಾನುವಾರುಗಳು ಬಯಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ಹಾಗೂ ಕುಡಿಯಲು ನೀರು ಸಿಗುತ್ತಿಲ್ಲ.

ನಡೆಯದ ಕೃಷಿ:ಹೋಬಳಿ ವ್ಯಾಪ್ತಿಯಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಕಾರ್ಯ ನಡೆಸುವ ಗುರಿ ಹೊಂದಲಾಗಿದೆ. ರೈತಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಉದ್ದು 50 ಕ್ವಿಂಟಲ್, ಹೆಸರು 30, ಸೂರ್ಯಕಾಂತಿ 1 , ಬಿಳಿಜೋಳ 15 ಹಾಗೂ ಮುಸುಕಿನಜೋಳ 20 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ಮಳೆಯ ಅಭಾವದಿಂದ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಬಿತ್ತನೆ ಬೀಜ ರೈತರಿಗೆ ಪೂರ್ಣ ಪ್ರಮಾಣದಲ್ಲಿ ವಿತರಣೆಯಾಗಿಲ್ಲ.

ಮಳೆಯ ಕೊರತೆಯಿಂದಾಗಿ ಬಿತ್ತನೆ ಬೀಜ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ನೀರಾವರಿ ಅಶ್ರಯ ಹೊಂದಿರುವ ಪ್ರದೇಶದ ಕೆಲವು ರೈತರು ಅಲ್ಪಪ್ರಮಾಣದಲ್ಲಿ ಬಿತ್ತನೆ ಬೀಜ ಖರೀದಿಸಿದ್ದಾರೆ.

ಮಳೆಯ ಕೊರತೆಯಿಂದ ವ್ಯವಸಾಯಕ್ಕೆ ಮಾತ್ರವಲ್ಲದೆ ಜನ, ಜಾನುವಾರುಗಳಿಗೂ ತೊಂದರೆ ಉಂಟಾಗಿದೆ. ಕಾಡಿನ ಯಾವ ಭಾಗದಲ್ಲಿಯೂ ಮೇವು ಕಾಣಿಸುತ್ತಿಲ್ಲ. ಮನೆಗಳಲ್ಲಿ ಶೇಖರಿಸಿದ್ದ ಒಣಮೇವು ಖಾಲಿಯಾಗಿವೆ. ಮೇವು, ನೀರಿನ ಸಮಸ್ಯೆಯಿಂದಾಗಿ ಜನುವಾರುಗಳನ್ನು ಸಾಕಾಲಾಗದೆ ಮಂಗಳವಾರ ಸಂತೆ ಹಾಗೂ ತಿ.ನರಸೀಪುರ ಸಂತೆಗಳಲ್ಲಿ ಆಡು, ಕುರಿ ದನಗಳನ್ನು ಮಾರಾಟ ಮಾಡುವ ಸ್ಥಿತಿ ಒದಗಿ ಬಂದಿದೆ. ಜಾನುವಾರುಗಳು ನಿಗದಿತ ಬೆಲೆಗೆ ಮಾರಾಟವಾಗುತ್ತಿಲ್ಲ. ಅನಿವಾರ್ಯವಾಗಿ ಕೇಳಿದಷ್ಟು ಬೆಲೆಗೆ ಜಾನುವಾರು ಮಾಲೀಕರು ಮಾರಾಟ ಮಾಡುತ್ತಿದ್ದಾರೆ.

‘ಈ ಸಮಯದಲ್ಲಿ ಮುಂಗಾರು ವ್ಯವಸಾಯದ ಚಟುವಟಿಕೆ ಆರಂಭವಾಗಬೇಕಿತ್ತು. ಇನ್ನು ಒಂದೆರಡು ವಾರ ಸರಿಯಾಗಿ ಮಳೆ ಬಾರದಿದ್ದರೆ ತೊಂದರೆ ತಪ್ಪಿದ್ದಲ್ಲ. ಕೃಷಿ ಚಟುವಟಿಕೆ ನಡೆಯದಿದ್ದರೆ ಜನರು ಪಟ್ಟಣ ಪ್ರದೇಶಗಳತ್ತ ತೆರಳಬೇಕಾಗುತ್ತದೆ’ ಎಂದು ರೈತ ಮಹದೇವಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತ ಸಂಪರ್ಕ ಕೇಂದ್ರಕ್ಕೆ ಬಾರದ ಕೃಷಿಕರು’

‘ಸಕಾಲದಲ್ಲಿ ಮಳೆ ಆಗದ ಕಾರಣ ರೈತರು ರೈತಸಂಪರ್ಕ ಕೇಂದ್ರಕ್ಕೆ ಆಗಮಿಸಿ ಬಿತ್ತನೆ ಬೀಜ ಖರೀದಿಸಿಲ್ಲ. ಇದರಿಂದಾಗಿ ಹೋಬಳಿಯಲ್ಲಿ ಈ ಬಾರಿ ಬಿತ್ತನೆ ಪ್ರಮಾಣ ಇಳಿಮುಖ ಕಂಡಿದೆ. ಒಂದೆರಡು ವಾರದವರೆಗೆ ಮುಂಗಾರು ಮಳೆಯನ್ನು ರೈತರು ನಿರೀಕ್ಷೆ ಮಾಡಬಹುದು’ ಎಂದು ಕೃಷಿ ಅಧಿಕಾರಿ ಲೀಲಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.