ಒಂದು ವಾರದ ಅವಧಿಯಲ್ಲಿ ಕಾಮಪ್ರಚೋದಕ ಅಂತರ್ಜಾಲ ತಾಣಗಳ ಮೇಲೆ ನಿಷೇಧ ಹೇರಿ ಮತ್ತೆ ಹಿಂತೆಗೆದುಕೊಂಡದ್ದನ್ನು ನೋಡಿದರೆ, ನಿಷೇಧಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ; ಆದರೆ ನಿಷೇಧದ ಭಾಗಶಃ ರದ್ದುಗೊಳಿಸುವಿಕೆಗೆ ಸಹಜವಾಗಿ ಪ್ರತಿಕ್ರಿಯೆಗಳು ಕಡಿಮೆಯೇ!

‘ಮಾಧ್ಯಮ ಸ್ವಾತಂತ್ರ್ಯ, ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಸಂವಾದವನ್ನು ಕೇಂದ್ರ ಗೌರವಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂಬುದು ಕೇಂದ್ರ ದೂರಸಂಪರ್ಕ ಸಚಿವರ ಹೇಳಿಕೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಅನೈತಿಕತೆಗೂ, ಮುಕ್ತ ಸಂವಾದಕ್ಕೂ, ಸ್ವಚ್ಛಂದಕ್ಕೂ ಇರುವ ವ್ಯತ್ಯಾಸವನ್ನು ನಾವು ಗಮನಿಸದೇ ಬಿಡುವಂತಿಲ್ಲ.

ಕಾಮಪ್ರಚೋದಕ ಅಂತರ್ಜಾಲ ತಾಣಗಳ ನಿಷೇಧವಾಗಲಿ, ನಿಷೇಧ ಹಿಂತೆಗೆದುಕೊಳ್ಳುವುದಾಗಲಿ ಒಟ್ಟೂ ಆರೋಗ್ಯದ ದೃಷ್ಟಿಯಿಂದ, ವಸ್ತುನಿಷ್ಠವಾಗಿ ನೋಡಿದಾಗ ಎರಡೂ ವಿಪರೀತದ, ಆತುರದ ನಿರ್ಧಾರಗಳಾಗಿ ಕಂಡು ಬರುತ್ತವೆ.

ಮಾಧ್ಯಮಗಳಾಗಲಿ, ಮಿಲ್ಸ್ ಅಂಡ್ ಬೂನ್್ಸನಂಥ ಕಾದಂಬರಿಗಳಾಗಲಿ ಇವೆಲ್ಲವೂ ಮನುಷ್ಯನ ಲೈಂಗಿಕತೆಯನ್ನು ಹೆಚ್ಚಿಸುವಲ್ಲಿ, ನಿಯಂತ್ರಿಸುವಲ್ಲಿ ಮೊದಲಿನಿಂದ ಇರುವ ಸಾಧನಗಳೇ ಆಗಿವೆ. ಮಾನವನ ಮೂಲಭೂತ ಅಗತ್ಯಗಳಲ್ಲಿ ಪ್ರಮುಖವಾದ ಲೈಂಗಿಕತೆಗೆ ಅಭಿವ್ಯಕ್ತಿ- ತೃಪ್ತಿ ಎರಡರ ಅವಶ್ಯಕತೆಯೂ ಉಂಟಷ್ಟೆ. ಅಂತರ್ಜಾಲ ತಾಣಗಳು ಇದನ್ನು ಸುಲಭವಾಗಿ ಸಿಕ್ಕುವಂತೆ, ಹೆಚ್ಚು ಖಾಸಗಿಯಾಗಿ ‘ಅನುಭವಿಸು’ವಂತೆ ಮಾಡಿವೆ.

ಸರ್ಕಾರದ ಈ ನಿಷೇಧದ ಹಿಂದೆ ಒಂದು ರೀತಿಯ ಹತಾಶೆಯೂ ಹುದುಗಿರಲು ಸಾಧ್ಯವಿದೆ. ಹೆಚ್ಚುತ್ತಿರುವ ಅತ್ಯಾಚಾರಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕ್ರೌರ್ಯ ಇವೆಲ್ಲವನ್ನೂ ಹೇಗೆ ತಡೆಯಲು ಸಾಧ್ಯ? ಕಾಮಪ್ರಚೋದಕ ತಾಣಗಳ ನಿಷೇಧ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬ ನಂಬಿಕೆ ಈ ರೀತಿಯ ಹಠಾತ್ ಕ್ರಮದ ಹಿಂದಿರುವಂತಿದೆ. ಆದರೆ ಲೈಂಗಿಕತೆಗೆ ಸಂಬಂಧಿಸಿದ ಯಾವ ಚರ್ಚೆಯೂ ಅಷ್ಟು ಸರಳವಾಗಿ ಮುಗಿಯುವಂತಿಲ್ಲ.

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೋ, ಬೇಡವೋ ಎನ್ನುವ ಚರ್ಚೆ ನಡೆಯುತ್ತಲೇ ಇದೆಯಷ್ಟೆ. ಆದರೆ ನಾವು ಹಿರಿಯರು, ಲೈಂಗಿಕತೆಯ ಬಗ್ಗೆ ಮಾತನಾಡಲು ಮುಜುಗರ ಪಟ್ಟರೂ, ಮಕ್ಕಳು ಸಹಜ ಕುತೂಹಲ ಬಿಡಲು ಸಾಧ್ಯವಿಲ್ಲ. ಸುಲಭದ ತಂತ್ರಜ್ಞಾನ ಇಂದು ಮಕ್ಕಳನ್ನು 10ನೇ ವಯಸ್ಸಿಗಾಗಲೇ ಲೈಂಗಿಕತೆ ಬಗೆಗಿನ ಮಾಹಿತಿ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸಿಬಿಟ್ಟಿದೆ! ಇಂದಿನ ಹಿರಿಯರು ಮಕ್ಕಳಾಗಿದ್ದಾಗಲೂ ಕುತೂಹಲವಿರಲಿಲ್ಲ ಎಂದೇನೂ ಇದರರ್ಥವಲ್ಲ. ಬದಲಾಗಿ ಪುಸ್ತಕಗಳನ್ನು ಹುಡುಕಬೇಕಾಗುತ್ತಿತ್ತು.

ಲೈಂಗಿಕ ಮ್ಯಾಗಜಿನ್ಗಳನ್ನು ಕದ್ದುಮುಚ್ಚಿ ಓದಬೇಕಾಗುತ್ತಿತ್ತು. ಟಿ.ವಿ.ಯಲ್ಲಿ ಅಂಥ ದೃಶ್ಯಗಳಿಗಾಗಿ ಕಾದು ಕುಳಿತಿರಬೇಕಾಗಿತ್ತು!
ಹಾಗಿದ್ದರೆ ನಿಷೇಧ ಏಕೆ? ತೆಗೆದದ್ದೇ ಒಳ್ಳೆಯದಾಯಿತಲ್ಲ ಎನ್ನುವಂತೆಯೂ ಇಲ್ಲ. ಎಳೆಯ ಮಕ್ಕಳ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುವ ಶಕ್ತಿ ಅಂತರ್ಜಾಲಕ್ಕಿದೆ. ‘ಸ್ಮಾರ್ಟ್’ ತರಗತಿಗಳಿಂದ, ದೃಶ್ಯ- ಶ್ರಾವ್ಯ ಮಾಧ್ಯಮಗಳಿಂದ ಎಲ್ಲವನ್ನೂ ಪರಿಣಾಮಕಾರಿಯಾಗಿ ಕಲಿಸುವಂತೆ ಲೈಂಗಿಕ ದೃಶ್ಯಗಳು ಪರಿಣಾಮ ಬೀರುವ ಸಾಧ್ಯತೆಗಳನ್ನು ಈಗಾಗಲೇ ಅಧ್ಯಯನಗಳು ಕಂಡು ಹಿಡಿದಿವೆ.

ಕ್ರೌರ್ಯದ ಬಗ್ಗೆ ನಮ್ಮ ಮನಸ್ಸನ್ನು ಸಂವೇದನಾರಹಿತವಾಗಿಸಿದಂತೆ, ಲೈಂಗಿಕತೆಯ ಬಗೆಗೂ ಸಂವೇದನೆ-ಸೂಕ್ಷ್ಮತೆಗಳನ್ನು ಇಂಥ ವಿಡಿಯೊಗಳು ಕುಗ್ಗಿಸಬಹುದು. ಲೈಂಗಿಕತೆಯ ಬಗೆಗೆ ಅತಿ ನಿರೀಕ್ಷೆ, ಪ್ರಯೋಗಿಸುವ ಹುಮ್ಮಸ್ಸು, ಲೈಂಗಿಕ ರೋಗಗಳು, ಬಾಲಕಿಯರಲ್ಲಿ ಹದಿಹರೆಯದ ಗರ್ಭಧಾರಣೆಗಳನ್ನು ಹೆಚ್ಚಿಸಬಹುದು. ವಯೋ ಸಹಜವಾದ ಕುತೂಹಲ, ಕುಗ್ಗುತ್ತಿರುವ ಕುಟುಂಬ ವ್ಯವಸ್ಥೆ, ಒಂಟಿತನ, ಆಟವಾಡಲು ಇರದ ವ್ಯವಸ್ಥೆ ಎಲ್ಲವೂ ಸೇರಿ ಮಕ್ಕಳು ‘ಇಂಟರ್ನೆಟ್ ಅಡಿಕ್ಷನ್’ಗೆ ತುತ್ತಾಗಲು ಪ್ರಬಲ ಕಾರಣಗಳಾಗಬಹುದು. ಬಾಲಕಿಯರಲ್ಲಿ ಈ ರೀತಿಯ ನೋಡುವಿಕೆ ಲೈಂಗಿಕತೆಯ ಬಗ್ಗೆ ಅಸಹ್ಯ ಮೂಡಿಸಲೂ ಕಾರಣವಾಗಬಹುದು. ಮುಂದಿನ ಲೈಂಗಿಕ ಜೀವನದ ದೃಷ್ಟಿಯಿಂದ ಸಮಸ್ಯೆಗಳನ್ನು ಉಂಟು ಮಾಡಬಹುದು.

ಇನ್ನು ದಂಪತಿಗಳ ವಿಷಯಕ್ಕೆ ಬಂದರೆ, ದಾಂಪತ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆಗೆ ಬರುವವರಲ್ಲಿ ಶೇಕಡ 60ರಷ್ಟು ಜನ ಬರುವುದು ಲೈಂಗಿಕ ಸಮಸ್ಯೆಗಳಿಗಾಗಿ. ಇಂದಿನ ದಿನಗಳಲ್ಲಿ ವಾರಕ್ಕೆ 3 ರಿಂದ 5 ಬಾರಿ ಲೈಂಗಿಕ ವಿಡಿಯೊಗಳನ್ನು ನೋಡುವವರಲ್ಲಿ ಒಂಟಿತನ, ಆತಂಕ, ಖಿನ್ನತೆ ಸಾಮಾನ್ಯ. ಪತಿಯ ಕಾಮಪ್ರಚೋದಕ ವಿಡಿಯೊ ನೋಡುವಿಕೆಯ ಬಗ್ಗೆ ಮಹಿಳೆಯರು ಸಾಮಾನ್ಯವಾಗಿ ಭಯ,`ತಮ್ಮ ದೇಹದ ಬಗ್ಗೆ ಅತೃಪ್ತಿ, ಆತ್ಮವಿಶ್ವಾಸದ ಕೊರತೆ,`ವಿಡಿಯೊಗಳಲ್ಲಿ ತೋರಿಸುವ ಕ್ರಿಯೆಗಳನ್ನು ಮಾಡುವುದು ತಮಗೆ ಕಷ್ಟವೆನಿಸುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ `ಗಂಡ ದೂರವಾಗಬಹುದು ಎಂಬ ಒಂದೇ ಕಾರಣಕ್ಕೆ ಈ ಸಂದರ್ಭವನ್ನು ಹೇಗಾದರೂ ನಿಭಾಯಿಸುತ್ತೇವೆ ಎನ್ನುತ್ತಾರೆ.

ಮೇಲಿನ ಚರ್ಚೆಯಿಂದ ಕಾಮಪ್ರಚೋದಕ ವಿಡಿಯೊಗಳಿಂದ ಸಾಮಾಜಿಕವಾಗಿ- ಮಾನಸಿಕವಾಗಿ- ಭಾವನಾತ್ಮಕವಾಗಿ ಆರೋಗ್ಯ ಹದಗೆಡಲು ಸಾಧ್ಯವಿದೆ ಎಂಬುದು ಸುಸ್ಪಷ್ಟ. ಆದರೆ ಅದರ ನಿಷೇಧವಾಗಲಿ, ಕಟ್ಟುನಿಟ್ಟಾದ ನಿರ್ಬಂಧವಾಗಲಿ ಸಾಧ್ಯವೇ? ಇದಕ್ಕೆ ಮೊದಲ ಅಡ್ಡಿ ತಂತ್ರಜ್ಞಾನದ ಆವಿಷ್ಕಾರಗಳು; ನಿಷೇಧ ಮುರಿದು ಒಳನುಗ್ಗಲು ಹಲವು ಅಡ್ಡ ದಾರಿಗಳಿರುವುದು, ಅವುಗಳನ್ನು ಶೋಧಿಸಲು ಚೀನಾ, ಸೌದಿ ಅರೇಬಿಯಾದಂಥ ದೇಶಗಳು ಬಳಸುವ ‘deep packet inspection’ ತಂತ್ರಜ್ಞಾನ ಅತಿ ದುಬಾರಿಯಾಗಿರುವುದು... ಈ ಕಾರಣಗಳಿಂದ ಪ್ರಾಯೋಗಿಕವಾಗಿ ಇಂತಹ ಕ್ರಮ ಕಷ್ಟ.

ನಿಷೇಧಕ್ಕೆ ಎದುರಾಗುವ ಇನ್ನೊಂದು ಬಹು ದೊಡ್ಡ ಸವಾಲು ಮಾನವ ಸ್ವಭಾವ. ಕಾನೂನಿನ ಬಲದ ಮೂಲಕ ಮಾನವ ಸ್ವಭಾವವನ್ನು ಕಟ್ಟಿ ಹಾಕುವುದು ಸುಲಭವಲ್ಲ. ಹೆಣ್ಣು ಭ್ರೂಣ ಹತ್ಯೆ, ಗುಟ್ಕಾ ನಿಷೇಧ, ಸಾರಾಯಿ/ ಮದ್ಯ ನಿಷೇಧ, ವರದಕ್ಷಿಣೆ ವಿರೋಧಿ ಕಾನೂನುಗಳ ಬಗ್ಗೆ ಚರ್ಚೆ ಮಾಡದೆ ಎಲ್ಲರೂ ಒಪ್ಪಿಕೊಂಡಿರುವುದು ಸಹಜ. ಆದರೆ ಅವುಗಳ ಅನುಷ್ಠಾನಕ್ಕೆ ಬಂದರೆ ನಾವು ಯಶಸ್ವಿ ಎಂದು ಹೇಳುವಂತಿಲ್ಲ. ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳ ಬಗೆಗಂತೂ ಜನಾಭಿಪ್ರಾಯ ಏಕಮುಖವಾಗಿರಲು ಸಾಧ್ಯವೇ ಇಲ್ಲ!

ಹಾಗಿದ್ದರೆ ನಿಷೇಧ ಬೇಕೆ, ಬೇಡವೆ ಎಂಬ ಬಗ್ಗೆ ಆತುರದ ನಿರ್ಧಾರ ಸಲ್ಲದು. ತುಂಬಾ ವಿವೇಚನೆ, ವಸ್ತುನಿಷ್ಠತೆಯಿಂದಷ್ಟೇ ಇದರ ಬಗೆಗಿನ ಕಾನೂನು ರೂಪುಗೊಳ್ಳಬೇಕು. 18 ವರ್ಷದೊಳಗಿನ ಯುವಕ-ಯುವತಿಯರ ಲೈಂಗಿಕ ಶಿಕ್ಷಣದ ಸರಿಯಾದ ಕ್ರಮ, ಅವರ ಕುತೂಹಲವನ್ನು ಸರಿಯಾದ ದಾರಿಯಲ್ಲಿ ಪ್ರವಹಿಸುವಂತೆ ಮಾಡಬಲ್ಲದು. ಮಕ್ಕಳನ್ನು ಒಳಗೊಂಡ ಕಾಮಪ್ರಚೋದಕ ಅಂತರ್ಜಾಲ ತಾಣಗಳನ್ನು ನಿಷೇಧಿಸುವ ಕ್ರಮ ಮಕ್ಕಳ ಸುರಕ್ಷೆ, ಅಸಹಜ ಲೈಂಗಿಕ ಚಟುವಟಿಕೆಗೆ ಪ್ರಚೋದನೆ ದೃಷ್ಟಿಯಿಂದ ಸ್ವಾಗತಾರ್ಹವೇ. ಆದರೆ ಯುವಜನರ ಲೈಂಗಿಕ ಅಗತ್ಯಗಳು?

ಹಸ್ತಮೈಥುನ ಸಹಜವಾದ ಲೈಂಗಿಕ ನಡವಳಿಕೆ ಎನ್ನುತ್ತೇವೆ. ಆದರೆ ಯಾವಾಗಲೂ ಮಾಡಿ, ಎಲ್ಲಿ ಬೇಕಾದರೂ ಮಾಡಿ ಎನ್ನುತ್ತೇವೆಯೇ? ಹಾಗೆಯೇ ಲೈಂಗಿಕ ವಿಡಿಯೊ ನೋಡುವುದೂ ಒಂದು ಲೈಂಗಿಕ ನಡವಳಿಕೆ. ಆದರೆ ಅದಕ್ಕೂ ಸ್ವನಿಯಂತ್ರಣದ ಅವಶ್ಯಕತೆಯಿದೆ. ಒಂದು ನಿರ್ದಿಷ್ಟ ವಯಸ್ಸಿನಲ್ಲಿ (18ರಿಂದ 30) ಮಾತ್ರ ಅದು ಹೆಚ್ಚೆಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಹಾಗೆ ನೋಡಿದರೆ ಅನಿಯಂತ್ರಿತ ಲೈಂಗಿಕತೆಗೆ, ಮನಸ್ಸಿನ ಲೈಂಗಿಕ ಭಾವನೆಗಳಿಗೆ ಒಂದು ಭಾವವಿರೇಚಕ (Catharsis) ಪ್ರಕ್ರಿಯೆಯಾಗಿ ಲೈಂಗಿಕ ಸಾಹಿತ್ಯ- ಶಿಲ್ಪ- ವಿಡಿಯೊ ದೃಶ್ಯಗಳು ಕೆಲಸ ಮಾಡುತ್ತವೆ. ಹೆಚ್ಚಿನವರು ಇವೆಲ್ಲವನ್ನೂ ಓದುವುದು, ನೋಡುವುದು ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಮಾತ್ರ. ಆನಂತರದ ದಿನಗಳಲ್ಲಿ ಜೀವನದ ಅಗತ್ಯ-ಅವಶ್ಯಕತೆಗಳು ಬೇರೆ ದಾರಿ ಹಿಡಿದಂತೆ ಕ್ರಮೇಣ ಈ ಅತಿ ಆಸಕ್ತಿ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಹಾಗಾಗಿ ಯುವಜನರ ಲೈಂಗಿಕ ಅಗತ್ಯಗಳು ಮತ್ತು ಮಕ್ಕಳ ಮೇಲೆ ಈ ವಿಡಿಯೊಗಳ ದುಷ್ಪರಿಣಾಮ ಇವೆರಡನ್ನೂ ಕಾನೂನಿನ ಸಾಧ್ಯತೆ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಉಚಿತ ತಾಣಗಳನ್ನು ದುಬಾರಿ ತಾಣಗಳಾಗಿ ಪರಿವರ್ತಿಸುವುದು ಪ್ರಯೋಗ ಮಾಡಬಹುದಾದ ಇನ್ನೊಂದು ವಿಧಾನ. ಮಿತಿಯಿಲ್ಲದ ಲೈಂಗಿಕತೆ, ಅತಿ ನಿರ್ಬಂಧ ಎರಡೂ ಮನುಷ್ಯನ ಆರೋಗ್ಯ, ಸಮಾಜದ ಹಿತದೃಷ್ಟಿಯಿಂದ ಅಪಾಯಕಾರಿ. ವಿವೇಚನಾಬದ್ಧವಾದ ವೈಯಕ್ತಿಕ`ಲೈಂಗಿಕ ನಡವಳಿಕೆಗಳು, ಅಂದರೆ ಲೈಂಗಿಕ ವಿಡಿಯೊ ನೋಡುವಿಕೆ, ಲೈಂಗಿಕ ಪುಸ್ತಕಗಳ ಓದುವಿಕೆ, ಆದರೆ ಸ್ವನಿಯಂತ್ರಣಗಳನ್ನು ಪ್ರತಿಯೊಬ್ಬರ ಜವಾಬ್ದಾರಿಯಾಗಿಸುವ ಶಿಕ್ಷಣ, ಅರಿವು ಅಗತ್ಯ. ಇಲ್ಲದೆ ಹೋದರೆ ಕಾನೂನು ಬರಲಿ, ಬಿಡಲಿ, ನಾಲ್ಕು ದಿನಗಳ ಚರ್ಚೆಯಷ್ಟೇ ಆಗಿ, ಬಿಸಿ ಆರಿದ ಮೇಲೆ ಎಲ್ಲರೂ ಮರೆತು ಬಿಡುವ ಪರಿಸ್ಥಿತಿಯಷ್ಟೇ ಉಳಿದೀತು. ಸಮಸ್ಯೆಗಳು ಎಂದಿನಂತೆ ಮುಂದುವರಿಯುವ ಸಾಧ್ಯತೆ ಹೆಚ್ಚೀತು!

ಅಲ್ಲಿದೆ ಇಲ್ಲಿಲ್ಲ...!
ಅತ್ಯಾಚಾರದ ವಿಡಿಯೊಗಳನ್ನು ನೋಡುವ ಎಲ್ಲರೂ ಹೊರಗೆ ಹೋಗಿ ಅತ್ಯಾಚಾರಗಳನ್ನು ಮಾಡುತ್ತಾರೆ ಎಂಬುದಕ್ಕೆ ಆಧಾರವಿಲ್ಲ. ಕಿನ್ಸಿ ಇನ್ಸ್ಟಿಟ್ಯೂಟ್ ನಡೆಸಿದ ವೈಜ್ಞಾನಿಕ ಸಮೀಕ್ಷೆಯೊಂದರಲ್ಲಿ 10,453 ಜನ ಪ್ರತಿಕ್ರಿಯಿಸಿದರು.

ಅವರು ಅಶ್ಲೀಲ ವಿಡಿಯೊಗಳನ್ನು ನೋಡುವ ಕಾರಣಗಳನ್ನು ಕೇಳಿದಾಗ, ಸಾಮಾನ್ಯವಾದ ಮೊದಲ 5 ಕಾರಣಗಳು ಹೀಗಿದ್ದವು: ಹಸ್ತಮೈಥುನಕ್ಕಾಗಿ, ಲೈಂಗಿಕ ಉದ್ರೇಕಕ್ಕಾಗಿ, ಕುತೂಹಲಕ್ಕಾಗಿ, ನಿಜಜೀವನದಲ್ಲಿ ಮಾಡಲು ಬಯಸದ ಸಂಗತಿಗಳನ್ನು ಕಲ್ಪಿಸಿಕೊಂಡು ಸಂತಸ ಪಡುವುದಕ್ಕಾಗಿ, ಮನಸ್ಸಿನ ಬೇಸರ ಕಳೆಯಲು. ಲೈಂಗಿಕತೆ ಕುರಿತಾದ ಅಶ್ಲೀಲ ವಿಡಿಯೊಗಳಿಗೂ, ಲೈಂಗಿಕ ಹಿಂಸೆಗೂ ಇರುವ ಸಂಬಂಧದ ಬಗ್ಗೆಯೂ ಸ್ಪಷ್ಟ ಅಭಿಪ್ರಾಯಗಳು ಇದುವರೆಗೆ ಕಂಡುಬಂದಿಲ್ಲ.

ಅಮೆರಿಕದಲ್ಲಿ ಹಿಂಸಾತ್ಮಕ ಲೈಂಗಿಕತೆಯ ವಿಡಿಯೊ ಮೇಲೆ ತೀವ್ರ ನಿಷೇಧ ಹೇರಿದಾಗ ಅಪರಾಧಗಳಲ್ಲಿ ಇಳಿಕೆಯೇನೂ ತೋರಿಬಂದಿಲ್ಲ. ಅದೇ ಜಪಾನ್ನಲ್ಲಿ ‘ಪೋರ್ನೊಗ್ರಫಿ’ ವ್ಯಾಪಕವಾಗಿದೆ, ಆದರೆ`ಅತ್ಯಾಚಾರದ ಘಟನೆಗಳು ಬಹು ಕಡಿಮೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.