ಬರಗಾಲದಲ್ಲಿ ಸಾಲ ವಸೂಲಿ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಕೃಷಿಕರ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಜಮೀನಿನಲ್ಲಿ ಬೆಳೆ ನೆಲ ಕಚ್ಚಿರುವುದನ್ನು ಕಂಡು ರೈತರು ಜರ್ಜರಿತರಾಗಿರುತ್ತಿದ್ದರು. ಆದರೆ, ಸಾಲ ವಸೂಲಿ ಮಾಡದೇ ಬ್ಯಾಂಕ್ ಉಳಿಯಲು ಸಾಧ್ಯವಿಲ್ಲ.
ಕಾನೂನು ಚೌಕಟ್ಟಿನಲ್ಲಿ ಸಾಲ ವಸೂಲಿ ಮಾಡುವಾಗ ಮನ ಕರಗುತ್ತಿತ್ತು.

ನ್ಯಾಯಾಲಯದ ಆದೇಶ ಹೊರಬಿದ್ದ ತಕ್ಷಣ ಬ್ಯಾಂಕ್ ಅಧಿಕಾರಿಗಳು ರೈತರ ಮನೆಯ ಎಲ್ಲ ವಸ್ತುಗಳನ್ನೂ ಜಪ್ತಿ ಮಾಡುತ್ತಿದ್ದರು.

ಊಟಕ್ಕೆ ಇಟ್ಟುಕೊಂಡಿದ್ದ ದವಸ– ಧಾನ್ಯ, ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಕೂಡ ಹರಾಜಾಗುತ್ತಿದ್ದವು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಆದರೆ ರೈತರಿಗೆ ಪ್ರಯೋಜನ ಆಗುತ್ತದೆ. ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ರೈತರಲ್ಲಿ ಕುಗ್ಗಿದಾಗ ಸರ್ಕಾರ ನೆರವಿಗೆ ಧಾವಿಸುವುದರಲ್ಲಿ ತಪ್ಪೇನೂ ಇಲ್ಲ.

ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಸಹಕಾರಿ ಸಂಸ್ಥೆಗಳು ಎಂದೂ ಸರ್ಕಾರದ ಮುಂದಿಟ್ಟಿಲ್ಲ. ಇದು ರೈತರಿಂದ ವ್ಯಕ್ತವಾಗುತ್ತಿದ್ದ ಒತ್ತಾಯ. ಇದರಿಂದ ಗರಿಷ್ಠ ಪ್ರಮಾಣದ ಪ್ರಯೋಜನ ರೈತರಿಗೇ ದಕ್ಕಿದೆ. ಜತೆಗೆ ಸಹಕಾರಿ ವ್ಯವಸ್ಥೆ ಬಲಗೊಳ್ಳಲು ಉತ್ತೇಜನವೂ ಸಿಕ್ಕಿದೆ. ಹಿಂದೆ ಕೃಷಿ ಸಾಲದ ಬಡ್ಡಿ ದರ ಶೇ 10ಕ್ಕಿಂತ ಹೆಚ್ಚಿತ್ತು. ಆಗ ಸಾಲ ವಸೂಲಾತಿಯ ಪ್ರಮಾಣ ಕಡಿಮೆ ಇತ್ತು. ಇದರಿಂದ ಸಹಕಾರಿ ಸಂಸ್ಥೆಗಳ ಅನುತ್ಪಾದಕ ಆಸ್ತಿಯ (ಎನ್ಪಿಎ) ಪ್ರಮಾಣ ಜಾಸ್ತಿ ಆಗುತ್ತಿತ್ತು.

ಎನ್ಪಿಎ ಪ್ರಮಾಣ ಶೇ 5ಕ್ಕಿಂತ ಹೆಚ್ಚಾದಾಗ ಸಹಕಾರಿ ಸಂಸ್ಥೆಗಳು ನಷ್ಟಕ್ಕೆ ಸಿಲುಕುತ್ತಿದ್ದವು. ಸರ್ಕಾರ ಬಡ್ಡಿಯ ಸಬ್ಸಿಡಿ ಘೋಷಣೆ ಮಾಡಲು ಶುರು ಮಾಡಿದ ಬಳಿಕ ಸಹಕಾರಿ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ಪುಟಿಯಿತು. ವಹಿವಾಟು, ಸಾಲ ವಸೂಲಾತಿ ಪ್ರಮಾಣವೂ ಹೆಚ್ಚಿತು. ಎನ್ಪಿಎ ಪ್ರಮಾಣ ಕುಸಿಯಿತು. ಸಹಕಾರಿ ಸಂಸ್ಥೆಗಳದು ಒಂದು ಸರಪಳಿ (ಚೈನ್ ಲಿಂಕ್) ವ್ಯವಸ್ಥೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಎಂಬ ಮೂರು ಹಂತದ ವ್ಯವಸ್ಥೆ ರಾಜ್ಯದಲ್ಲಿದೆ.

ಎಲ್ಲರಿಗೂ ಸಾಲ ನೀಡುವಷ್ಟು ಬಂಡವಾಳ ಸಹಕಾರಿ ಸಂಸ್ಥೆಗಳಲ್ಲಿ ಇಲ್ಲ. ಮೂಲ ಬಂಡವಾಳ, ಖಾತೆದಾರರ ಠೇವಣಿಯನ್ನು ಆಧರಿಸಿ ವ್ಯವಹರಿಸುವುದು ಕಷ್ಟ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ನಿಂದ ಸಾಲ ತಂದು ರೈತರಿಗೆ ಸಾಲ ನೀಡುವ ಪರಿಪಾಠ ಬೆಳೆದು ಬಂದಿದೆ. ಕಾಲಮಿತಿಯೊಳಗೆ ಹಣ ಪಾವತಿ ಮಾಡದೇ ಇದ್ದರೆ ಸಹಕಾರಿ ಸಂಸ್ಥೆ ಕೂಡ ಸುಸ್ತಿದಾರರ ಪಟ್ಟಿ ಸೇರುತ್ತದೆ. ಹೀಗಾಗಿ, ನೀಡಿದ ಸಾಲ ಸಹಕಾರಿ ಬ್ಯಾಂಕ್ಗಳ ಕೈಸೇರುವುದು ಅವಶ್ಯ.

ವಾಣಿಜ್ಯ ಬಾಂಕ್ಗಳಲ್ಲಿ ಕೃಷಿಗೆ ನೀಡುವ ಸಾಲದ ಪ್ರಮಾಣ ಶೇ 30 ದಾಟುವುದಿಲ್ಲ. ಆದರೆ, ಸಹಕಾರಿ ಬ್ಯಾಂಕ್ಗಳು ಕೃಷಿ ಕ್ಷೇತ್ರವನ್ನೇ ನಂಬಿಕೊಂಡಿವೆ. ಶೇ 50ಕ್ಕಿಂತ ಹೆಚ್ಚು ಸಾಲವನ್ನು ಕೃಷಿಗೆ ನೀಡುತ್ತಿವೆ. ಕೃಷಿಯೇತರ ಸಾಲ ಇಲ್ಲಿ ವಿರಳ. ಕೆಲ ಸಹಕಾರಿ ಬ್ಯಾಂಕ್ಗಳ ಸಾಲದಲ್ಲಿ ಕೃಷಿಯ ಪಾಲು ಶೇ 85ಕ್ಕೂ ಹೆಚ್ಚಿದೆ. ಬೆಳೆ ಸಾಲ, ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿ, ಕೊಳವೆ ಬಾವಿ ಕೊರೆಸುವುದು, ತಂತಿ ಬೇಲಿ ಸೇರಿದಂತೆ ಕೃಷಿ ಚಟುವಟಿಕೆಗೆ ಪಡೆಯುವ ಎಲ್ಲ ಸಾಲವನ್ನೂ ಕೃಷಿ ಸಾಲ ಎಂದೇ ಪರಿಗಣಿಸಲಾಗುತ್ತದೆ. ಬೆಳೆ ಸಾಲದ ಮರುಪಾವತಿಗೆ ಸಾಮಾನ್ಯವಾಗಿ 12ರಿಂದ 14 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.

ಸಾಲ ಮನ್ನಾ ಮಾಡುವುದು ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ಅರಿವಾದ ಬಳಿಕ ಬಡ್ಡಿಯ ದರದಲ್ಲಿ ಸಬ್ಸಿಡಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 1990ರ ದಶಕದಲ್ಲಿ ಶೇ 6ರ ಬಡ್ಡಿ ದರವನ್ನು ಕೃಷಿ ಸಾಲಕ್ಕೆ ನಿಗದಿ ಮಾಡಲಾಯಿತು. ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಹುತೇಕ ಮುಖ್ಯಮಂತ್ರಿಗಳು ಈ ಬಡ್ಡಿ ದರವನ್ನು ಕಡಿತಗೊಳಿಸಿದರು. ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಬಡ್ಡಿ ದರ ಶೇ 4ಕ್ಕೆ, ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಶೇ 3ಕ್ಕೆ ಇಳಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡ್ಡಿ ರಹಿತ ಸಾಲ ನೀಡುತ್ತಿದೆ.

ಕೃಷಿಕರಿಗೆ ₨ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಅಸಲನ್ನು ಮಾತ್ರ ಪಾವತಿಸಿದರೆ ಸಾಕು. ₨ 3ರಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ 3ರ ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ರೈತರಿಗೆ ಪ್ರಯೋಜನವಾಗುತ್ತಿದೆ. ಕಾಲಮಿತಿಯೊಳಗೆ ಸಾಲ ಮರುಪಾವತಿ ಮಾಡಿದ ರೈತರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಹೀಗಾಗಿ, ಬಹುತೇಕ ಸಾಲ ಮರುಪಾವತಿ ಆಗುತ್ತಿದೆ.

ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ಗಳಿಗೆ ಬಡ್ಡಿ ಮತ್ತು ಸಾಲ ತುಂಬಿಕೊಡುವುದನ್ನು ಸರ್ಕಾರ ಅನೇಕ ಬಾರಿ ವಿಳಂಬ ಮಾಡಿದೆ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲ ಮನ್ನಾ ಘೋಷಣೆಯಾಯಿತು. ಇದರಲ್ಲಿ ಸುಮಾರು ₨ 600 ಕೋಟಿಯಷ್ಟು ಹಣವಷ್ಟೇ ಸಹಕಾರಿ ಬ್ಯಾಂಕ್ಗಳಿಗೆ ಪಾವತಿ ಆಯಿತು. ಸಹಕಾರಿ ಬ್ಯಾಂಕ್ಗಳಿಗೆ ₨ 2,500 ಕೋಟಿ ಕೊಡುವುದು ಬಾಕಿ ಇರುವಾಗಲೇ ಸರ್ಕಾರ ಬದಲಾಯಿತು.

ಅಧಿಕಾರ ಹಸ್ತಾಂತರದ ಪ್ರಕ್ರಿಯೆಯಲ್ಲಿ ಸಹಕಾರಿ ಸಂಸ್ಥೆಗಳಿಗೆ ನೀಡಬೇಕಾಗಿದ್ದ ಸಾಲದ ಬಾಕಿಯಲ್ಲಿ ವಿಳಂಬವಾಯಿತು. ಹೀಗೆ ಪಾವತಿಯಲ್ಲಾಗುವ ವಿಳಂಬದ ಹೊಣೆಯನ್ನು ಯಾವ ಸರ್ಕಾರವೂ ಹೊರುವುದಿಲ್ಲ. ಈ ಲೋಪ ಹಲವು ಬಾರಿ ಮರುಕಳಿಸಿದೆ. ಇದರಿಂದ ಸಹಕಾರಿ ಕ್ಷೇತ್ರ ಆರ್ಥಿಕ ನಷ್ಟಕ್ಕೂ ತುತ್ತಾದ ನಿದರ್ಶನಗಳಿವೆ. ರೈತರ ಸಾಲ ಮನ್ನಾ ಮಾಡುವುದರಿಂದ ಸಹಕಾರಿ ಸಂಸ್ಥೆಗಳಿಗೆ ಈ ಅನನುಕೂಲವೂ ಇದೆ.

ಹೆಗಡೆ ಸರ್ಕಾರದಲ್ಲಿ ಆರಂಭ
ರಾಜ್ಯದಲ್ಲಿ ಕೃಷಿ ಸಾಲ ಮತ್ತು ಬಡ್ಡಿ ಮನ್ನಾ ರೂಢಿಗೆ ಬಂದದ್ದು 1983ರಲ್ಲಿ. ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ರೈತರಿಗೆ ನೆರವಾಗಲು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಈ ಜನಪ್ರಿಯ ಯೋಜನೆಯನ್ನು ಘೋಷಿಸಿದರು. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿ ಬಹುತೇಕ ಮುಖ್ಯಮಂತ್ರಿಗಳು ಇದನ್ನು ಮುಂದುವರಿಸಿಕೊಂಡು ಬಂದರು. 2009ರಲ್ಲಿ ಕೇಂದ್ರದ ಯುಪಿಎ ಸರ್ಕಾರ ಕೂಡ ಕೋಟ್ಯಂತರ ರೂಪಾಯಿ ಕೃಷಿ ಸಾಲವನ್ನು ಮನ್ನಾ ಮಾಡಿತು. ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಪಡೆದ ದೊಡ್ಡ ರೈತರು ಇದರ ಪ್ರಯೋಜನ ಪಡೆದರು.

ಪರ್ಯಾಯ ಮಾರ್ಗಗಳೂ ಇವೆ
ಕೃಷಿ ಸಾಲ ಮನ್ನಾ ಸರಿಯಾದ ಕ್ರಮವಲ್ಲ. ಇದು ಬ್ಯಾಂಕ್ನಲ್ಲಿ ಬೆಳೆ ಸಾಲ ಪಡೆದು ಮರು ಪಾವತಿಸದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವವನ್ನು ರೈತರಲ್ಲಿ ಹುಟ್ಟುಹಾಕುತ್ತದೆ. ಪ್ರಾಮಾಣಿಕವಾಗಿ ಮರು ಪಾವತಿ ಮಾಡುವ ಕೃಷಿಕರನ್ನೂ ದಾರಿ ತಪ್ಪಿಸುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿ.

ಬಹಳ ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ಇದ್ದರೆ ಸರ್ಕಾರ ಬಡ್ಡಿ, ಸುಸ್ತಿ ಬಡ್ಡಿ ಮನ್ನಾದಂತಹ ಕ್ರಮಗಳನ್ನು ಕೈಗೊಳ್ಳಬಹುದು. ಅಲ್ಲದೇ, ಬೆಳೆ ವಿಫಲವಾದ ಹಂಗಾಮಿನಲ್ಲಿ ಮರು ಪಾವತಿ ಸಾಧ್ಯವಾಗದ ರೈತರ ಸಾಲವನ್ನು ಹೊಸ ಸಾಲವಾಗಿ ಪರಿವರ್ತಿಸಬಹುದು. ಮುಂದಿನ ಹಂಗಾಮಿನಲ್ಲಿ ತೀರಿಸಲು ಅವಕಾಶ ಮಾಡಿಕೊಡಬಹುದು. ಬ್ಯಾಂಕಿಂಗ್ ವಹಿವಾಟಿನಲ್ಲಿಯೇ ಸಾಲ ಮರು ಹೊಂದಾಣಿಕೆಗೆ ಅವಕಾಶವಿದೆ ಎಂದು ಅವರು ಹೇಳುತ್ತಾರೆ.

(ಲೇಖಕರು ಅಪೆಕ್ಸ್ ಬ್ಯಾಂಕ್ ನಿರ್ದೇಶಕರು, ಮೈಸೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.