ಅಮೆರಿಕದ ಸರ್ಜನ್ ಜನರಲ್ ಕಚೇರಿ ೧೯೬೪ರ ಜನವರಿ ೧೧ ರಂದು ಒಂದು ವರದಿ ಬಿಡುಗಡೆ ಮಾಡಿತ್ತು. ೫೦ ವರ್ಷಗಳ ನಂತರ ಮತ್ತೊಂದು ವರದಿಯನ್ನು ಜನವರಿ ೧೧, ೨೦೧೪ರಂದು ಬಿಡುಗಡೆ ಮಾಡಿದೆ. ಧೂಮಪಾನದಿಂದ ಆಗುವ ಆರೋಗ್ಯ ಸಮಸ್ಯೆಗಳು, ಧೂಮಪಾನದ ‘ರೋಗ’ವನ್ನು ಹೊಡೆದೋಡಿಸುವ ಅವಕಾಶಗಳು, ಸರ್ಕಾರಗಳ ಧೋರಣೆಗಳು ಈ ಎಲ್ಲದರ ಬಗ್ಗೆ ಈ ವರದಿ ಚರ್ಚಿಸುತ್ತದೆ. ಹೊಸ ಅಂಕಿ-ಅಂಶಗಳನ್ನೂ ನೀಡುತ್ತದೆ.

ಇದರಲ್ಲಿ ಒಂದು ಗಮನಾರ್ಹವಾದ ಅಂಶ ಧೂಮಪಾನಕ್ಕೂ ಸ್ತನ ಕ್ಯಾನ್ಸರ್ಗೂ ಇರಬಹುದಾದ ಸಂಬಂಧ. ಶ್ವಾಸಕೋಶ ಕ್ಯಾನ್ಸರ್ಗೂ ಧೂಮಪಾನಕ್ಕೂ ಇರುವ ಬಲವಾದ ನಂಟಿನ ಬಗ್ಗೆ ೧೯೬೪ರ ವರದಿ ಜಗತ್ತಿನ ಗಮನ ಸೆಳೆದಿತ್ತು. ಈಗಿನ ವರದಿ, ಮಹಿಳೆಯರಲ್ಲಿ ಧೂಮಪಾನ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮಹಿಳೆ ಧೂಮಪಾನ ಮಾಡುವುದರ ವಿರೋಧದ ಈ ಚರ್ಚೆ ಸ್ತ್ರೀಸಮಾನತೆಗೆ ಸಂಬಂಧಿಸಿದ್ದಲ್ಲ. ಆರೋಗ್ಯದ ದೃಷ್ಟಿಯಿಂದ ಮಹಿಳೆ-ಪುರುಷ ಇಬ್ಬರೂ ಧೂಮಪಾನದಿಂದ ಸಮಸ್ಯೆಗಳನ್ನೇ ಎದುರಿಸುತ್ತಾರೆ ಎಂಬುದು ವೈಜ್ಞಾನಿಕವಾಗಿ ಬಲವಾಗಿಯೇ ಸಿದ್ಧಪಟ್ಟಿದೆ. ಧೂಮಪಾನದಷ್ಟೇ ಪ್ರಬಲವಾದದ್ದು ತಂಬಾಕನ್ನು ವಿವಿಧ ರೂಪಗಳಲ್ಲಿ, ಹೆಸರುಗಳಲ್ಲಿ ಅಗಿಯುವ ಚಟ. ಗ್ರಾಮೀಣ ಮತ್ತು ಆರ್ಥಿಕ ಕೆಳವರ್ಗದ ಮಹಿಳೆಯರಲ್ಲಿ ತಂಬಾಕು ಸೇವನೆ ಅತಿ ಸಾಮಾನ್ಯ. ಇದು ಆರಂಭವಾಗುವುದು ಬಹುಪಾಲು ಬೇಸರವನ್ನು ಕಳೆಯುವ ಚಟುವಟಿಕೆಯಾಗಿ. ಮತ್ತೆ ಕೆಲವು ಬಾರಿ ಹಲ್ಲು ನೋವಿನಿಂದ ಮುಕ್ತಿ ಹೊಂದಲು. ಧೂಮಪಾನಿಗಳಿಗಿಂತ ತಂಬಾಕು ಚಟವುಳ್ಳವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯೇ ಹೊರತು ಬೇರೆ ತರಹದ ಕ್ಯಾನ್ಸರ್ಗಳು, ಆರೋಗ್ಯ ಸಮಸ್ಯೆಗಳು ತಂಬಾಕಿನಿಂದ ತಪ್ಪಿದ್ದಲ್ಲ.

ಮಹಿಳೆಯರ ಈ ಧೂಮಪಾನದ ನಂಟು ಇಲ್ಲಿಗೇ ಮುಗಿಯಲಿಲ್ಲ. ಧೂಮಪಾನಿ ಪತಿಯನ್ನು ಹೊಂದಿದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ನ ಸಾಧ್ಯತೆ ಹೆಚ್ಚೆಂದು ೧೯೮೧ರಷ್ಟು ಹಿಂದೆಯೇ ಜಪಾನಿನ ಟಾಕೇಶಿ ಹಿರಯಾಮರ ಅಧ್ಯಯನ ತೋರಿಸಿತು. ತಂಬಾಕಿನ ಸುಡುವಿಕೆಯಿಂದ ಮತ್ತು ಅದನ್ನು ಸೇದುವುದರಿಂದ ಹಲವು ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಈ ವಿಷಕಾರಿ ರಾಸಾಯನಿಕಗಳು ವಾತಾವರಣದಲ್ಲಿ, ನಾವೆಲ್ಲರೂ ಉಸಿರಾಡುವ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಮನೆಯಲ್ಲಿಯೇ ಒಬ್ಬ ಧೂಮಪಾನಿಯಿದ್ದರಂತೂ ಅಂಥ ಮನೆಯ ಮಕ್ಕಳು ನ್ಯುಮೋನಿಯ, ಕೆಮ್ಮು, ದಮ್ಮು, ಕಿವಿಯ ನೋವು, ಚರ್ಮದ ಅಲರ್ಜಿಗಳಿಂದ ನರಳುವ ಸಾಧ್ಯತೆ ಹೆಚ್ಚುತ್ತದೆ.

ಮಾರುಕಟ್ಟೆ, ಬಸ್-ರೈಲು ನಿಲ್ದಾಣಗಳಲ್ಲಿ ಜನಜಂಗುಳಿ ಹೆಚ್ಚಷ್ಟೇ. ಮೊದಲೇ ಆಮ್ಲಜನಕದ ಕೊರತೆಯಿರುವ ಇಂಥ ಸ್ಥಳಗಳಲ್ಲಿ ಧೂಮಪಾನ ಸಾವಿರಾರು ಜನರಿಗೆ ರೋಗವನ್ನು ಹರಡಬಹುದು. ಅದರಲ್ಲಿಯೂ ಧೂಮಪಾನಿ ಒಳಗೆಳೆದುಕೊಂಡು ಹೊರಬಿಡುವ ಹೊಗೆ Side stream smoke, ನಾವೇ ಧೂಮಪಾನ ಮಾಡುವುದಕ್ಕಿಂತ ಹೆಚ್ಚು ಹಾನಿಕಾರಕ.

ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕಾನೂನಿದೆ. ಧೂಮಪಾನದ ಜಾಹೀರಾತಿನ ಜೊತೆಗೆ ‘ಅದು ಅರೋಗ್ಯಕ್ಕೆ ಹಾನಿಕರ’ ಎಂಬುದನ್ನು ತೋರಿಸಬೇಕೆಂಬ, ಮುದ್ರಿಸಬೇಕೆಂಬ ನಿಯಮವೂ ಇದೆ. ತಂಬಾಕು ನಿಯಂತ್ರಣದ ಮಾತು ಬಂದಾಗಲೆಲ್ಲಾ ಆರ್ಥಿಕತೆಗಾಗುವ ನಷ್ಟ ಎದ್ದು ನಿಲ್ಲುವ ವಾದ. ತೆರಿಗೆಯ ಇಳಿಕೆ, ಸಾವಿರಾರು ಉದ್ಯೋಗಾವಕಾಶಗಳ ಕಡಿತ, ದರ ಏರಿಕೆಯಿಂದ ಧೂಮಪಾನಿಗಳ ಮೇಲೆ ಆರ್ಥಿಕ ಹೊರೆ ಇವು ಈ ಆರ್ಥಿಕ ಸಮಸ್ಯೆಗಳ ವಿವಿಧ ಮುಖಗಳು. ಅಂದರೆ ತಂಬಾಕು ನಿಷೇಧ ಅದನ್ನು ಬೆಳೆಯುವ ರೈತರ ಮೇಲೆ ಒತ್ತಡ ತಂದರೆ, ತಂಬಾಕು ಉತ್ಪನ್ನಗಳ ಉದ್ಯಮಗಳಲ್ಲಿ ದುಡಿಯುವ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಸಿಗರೇಟಿನ ದರವನ್ನೇ ಏರಿಸಿದರೆ ಕೊಳ್ಳಲಾಗದೆ ಧೂಮಪಾನ ಬಿಡುತ್ತಾರೆ ಎಂಬುದೂ ಸತ್ಯವಲ್ಲ. ವ್ಯಸನಕ್ಕೆ ಚಿಕಿತ್ಸೆ ನೀಡದೆ ದರ ಮಾತ್ರ ಏರಿಸಿದರೆ ದರ ಎಷ್ಟೇ ಹೆಚ್ಚಾದರೂ ಧೂಮಪಾನಿಗಳು ಧೂಮಪಾನವನ್ನೇ ಮುಂದುವರಿಸುತ್ತಾರೆ. ಇವೆಲ್ಲವೂ ತಂಬಾಕು ನಿಷೇಧದ ಮಾತು ಬಂದಾಕ್ಷಣ ಸರ್ಕಾರ-, ಉದ್ಯಮ ನೀಡುವ ವಾದಗಳು.

ಆದರೆ ‘ತಂಬಾಕು ನಿಯಂತ್ರಣದ ಮುಖ್ಯ ಉದ್ದೇಶ ಆರೋಗ್ಯ’ (ವಿಶ್ವಸಂಸ್ಥೆ). ಅಷ್ಟೇ ಅಲ್ಲ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು, ಉದ್ಯೋಗಿಗಳ ಅನಾರೋಗ್ಯದ ರಜೆಯಿಂದ ಉಂಟಾಗುವ ಆರ್ಥಿಕ ನಷ್ಟವೇ, ತಂಬಾಕು ನಿಷೇಧದಿಂದ ಉಂಟಾಗುವ ಆರ್ಥಿಕ ನಷ್ಟಕ್ಕಿಂತ ಹೆಚ್ಚು ಎಂಬುದನ್ನು ವಿಶ್ವಬ್ಯಾಂಕ್ ೧೯೯೯ರಷ್ಟು ಹಿಂದೆಯೇ ನಡೆಸಿದ ಸಮೀಕ್ಷೆ- ಮೂಲಕ ಸಾಬೀತುಪಡಿಸಿದೆ. ಸಮಾಜದ ದೃಷ್ಟಿಯಿಂದ, ದೇಶದ ಪ್ರಗತಿಯ ದೃಷ್ಟಿಯಿಂದ ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ ಕೂಡ. ಆದರೆ ತಂಬಾಕಿನ ಉದ್ಯಮದ್ದು ವೈಯಕ್ತಿಕ ಲಾಭದ ದೃಷ್ಟಿಯಷ್ಟೇ! ಹಾಗಾಗಿ ತಡೆಯಬಹುದಾದ ಸಾವಿನ ಕಾರಣಗಳಲ್ಲಿ ತಂಬಾಕು ಸೇವನೆ ಪ್ರಮುಖವಾದದ್ದು.

ವೈದ್ಯಕೀಯ ಜಗತ್ತು, ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇವೆ. ಸರ್ಕಾರಗಳು ಜಗತ್ತಿನಾದ್ಯಂತ ನಿಷೇಧ ಕ್ರಮಗಳನ್ನು ಜಾರಿಗೊಳಿಸುತ್ತಿರುವುದೂ ಉತ್ತಮ ಬೆಳವಣಿಗೆಯೇ. ಆದರೆ ಈ ನಿಷೇಧಗಳು, ಕ್ರಮಗಳು, ಅರಿವಿನ ಕಾರ್ಯಕ್ರಮಗಳು -ಕಾನೂನುಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಪರಿಶೀಲಿಸಿ, ಅಧ್ಯಯನ, ಮೌಲ್ಯಮಾಪನ ಫಲಿತಾಂಶಕ್ಕನುಗುಣವಾಗಿ ಬದಲಾವಣೆ, ಮುಂದುವರಿಕೆ ಎಲ್ಲವೂ ಅಗತ್ಯ.

‘ಸುಸ್ಪಷ್ಟ ವ್ಯಾಖ್ಯಾನ ಕಷ್ಟ’
ರಸ್ತೆ ಮತ್ತು ಬೀದಿ ಬದಿಯನ್ನು ಮುಕ್ತ ಪ್ರದೇಶ (open space) ಎನ್ನಬಹು ದಾದರೂ, ಅದು ಸಾರ್ವ ಜನಿಕರು ಸಾಮಾನ್ಯವಾಗಿ ಉಪ ಯೋಗ ಮಾಡುವ ಪ್ರದೇಶ ಆಗಿರುವ ಕಾರಣ, ಅದೂ ಸಾರ್ವಜನಿಕ ಸ್ಥಳ ಆಗುತ್ತದೆ. ಹಾಗಾಗಿ ಅಲ್ಲಿ ಧೂಮಪಾನ ನಿಷೇಧಾರ್ಹ ಆಗುತ್ತದೆ. ಕಾನೂನಿನ ಭಾಷೆಯಲ್ಲಿ ಸುಸ್ಪಷ್ಟತೆ (absolute clarity) ಸಾಧ್ಯವಿಲ್ಲ. ಅದನ್ನು ವ್ಯಾಖ್ಯಾನದ ಮೂಲಕ ಅರ್ಥೈಸಿ ಕೊಳ್ಳಬೇಕು. ಕಾನೂನನ್ನು ಯಾವ ಉದ್ದೇಶಕ್ಕಾಗಿ ರೂಪಿಸ ಲಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಅರ್ಥೈಸಬೇಕು.

ಕಾನೂನಿನ ಭಾಷೆಯನ್ನು ಹೆಚ್ಚು ವಿಸ್ತೃತ ಮಾಡಿದಂತೆ, ಕಾನೂನಿನ ಕೈಗಳಿಂದ ತಪ್ಪಿಸಿ ಕೊಳ್ಳುವ ಸಾಧ್ಯತೆಯೂ ಹೆಚ್ಚಾ ಗುತ್ತದೆ. ಈ ಕಾಯ್ದೆಯ ಮತ್ತು ಅಧಿಸೂಚನೆಯ ಅನುಷ್ಠಾನ ಕುರಿತಂತೆ ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡಬೇಕು.
–ಕೆ.ಎಂ.ನಟರಾಜ್, ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.