ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದೇಶಗಳಲ್ಲಿ ಪೆಟ್ರೋಲ್‌ ದರ ಎಷ್ಟು ಕಡಿಮೆ ಗೊತ್ತೇ?

Last Updated 27 ಮೇ 2021, 14:45 IST
ಅಕ್ಷರ ಗಾತ್ರ

ಈ ತಿಂಗಳಲ್ಲಿ 14 ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಭಾರತದ ಕೆಲವು ರಾಜ್ಯಗಳಲ್ಲಿ ಲೀಟರ್‌ ಪೆಟ್ರೋಲ್‌ ದರ ₹100ರ ಗಡಿ ದಾಟಿದೆ.

ಭಾರತದ ಆರ್ಥಿಕತೆ ಮೇಲೆ ನೇರ ಪ್ರಭಾವ ಬೀರುವ ತೈಲ ಬೆಲೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಏರುತ್ತಿರುವುದರ ವಿರುದ್ಧ ಈಗಾಗಲೇ ದೇಶದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ.

ಈ ಮಧ್ಯೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜೆಎಸ್‌ಟಿ ವ್ಯಾಪ್ತಿಗೆ ತರುವ ಚರ್ಚೆಗಳೂ ನಡೆದಿವೆ. ಆದರೆ, ಪೆಟ್ರೋಲ್ ಬೆಲೆಯಲ್ಲಿ ಮಾತ್ರ ಗಮನಾರ್ಹ ಇಳಿಕೆ ಆಗಿಲ್ಲ.

ದೇಶದಲ್ಲಿ ಪೆಟ್ರೋಲ್‌ ದರ ನೂರರ ಗಡಿ ದಾಟಿರುವ ಈ ಸಂದರ್ಭದಲ್ಲಿ, ಜಗತ್ತಿನಲ್ಲಿ ಪೆಟ್ರೋಲ್‌ ಎಲ್ಲೆಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ ಎಂಬ ಕುತೂಹಲ ಮನೆ ಮಾಡಿದೆ.

ಪೆಟ್ರೋಲ್‌ ಎಲ್ಲೆಲ್ಲಿ ಕಡಿಮೆ ಬೆಲೆ ಸಿಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.

ದೇಶ ಮತ್ತು ಪೆಟ್ರೋಲ್‌ ಬೆಲೆ (ಪ್ರತಿ ಲೀಟರ್‌ಗೆ)

-ವೆನೆಜುವೆಲಾ– ₹0.15 ($0.02)

-ಇರಾನ್‌– ₹0.94 ($0.013)

-ಸೌದಿ ಅರೇಬಿಯಾ– ₹10.08 ($0.139)

-ಅಂಗೋಲಾ – ₹15.24 ($0.210)

-ಅಲ್ಜೀರಿಯಾ– ₹15.74 ($0.217)

-ಕುವೈತ್‌– ₹27.72 ($0.382)

-ತುರ್ಕ್‌ಮೇನಿಸ್ತಾನ್‌ – ₹27.93 ($0.385)

-ಈಕ್ವೆಡಾರ್‌– ₹28.37 ($0.391)

-ಬಹ್ರೇನ್‌– ₹30.76 ($0.424)

-ಈಜಿಪ್ಟ್‌– ₹31.27 ($0.431)

ಇದರಲ್ಲಿನ ಬಹುತೇಕ ರಾಷ್ಟ್ರಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಗತ್ತಿನ ಇತರ ರಾಷ್ಟ್ರಗಳಿಗೆ ರಫ್ತು ಮಾಡುತ್ತಿವೆ.

ಆಧಾರ: globalpetrolprices.comನ ಮೇ 27ರ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT