ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಓಡುವ ಖುಷಿಯನ್ನು ಒದಗಿಸಿಕೊಟ್ಟವರು ‘ಪಿಂಕಥಾನ್’ ಸಂಸ್ಥಾಪಕ ಮಿಲಿಂದ್ ಸೋಮನ್. ಸೀರೆ, ಬುರ್ಖಾ ಇಲ್ಲವೆ ಭಾರತದ ಇತರ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಮಹಿಳೆಯರು ಓಡುವಾಗ ಎದುರಿಸುತ್ತಿದ್ದ ಅಡೆತಡೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಅವರು, ಓಡಲು ಅನುವಾಗುವಂತೆ ಸಾಂಪ್ರದಾಯಿಕ ಉಡುಗೆಗಳಲ್ಲಿ ಏನೇನು ಸಣ್ಣ–ಪುಟ್ಟ ಬದಲಾವಣೆ ಮಾಡಬಹುದು ಎಂದು ಯೋಚಿಸಿದರು. ಆಗ ಅವರ ನೆರವಿಗೆ ಬಂದವರು ಮಹಿಳೆಯರ ಉಡುಗೆಗಳ ಉತ್ಪಾದನಾ ಕಂಪನಿಯಾದ ‘ದೇವಿ’ಯ ಮುಖ್ಯಸ್ಥ ಎಂ.ದರ್ಶನ್. ಸುಲಭವಾಗಿ ಓಡಲು ಸಾಧ್ಯವಾಗುವಂತಹ ಸೀರೆ, ಕುರ್ತಾ, ಟಿ–ಶರ್ಟ್‌ಗಳನ್ನು ‘ದೇವಿ’ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಬಗೆಯ ಸೀರೆಯನ್ನು (ರನ್ನಿಂಗ್ ಸಾರಿ) ಮಾಜಿ ಅಥ್ಲೀಟ್, 101 ವರ್ಷದ ಮನ್ ಕೌರ್ ಅವರು ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ ಪ್ರದರ್ಶಿಸಿದರು. ಇನ್ನುಮುಂದೆ ಮಹಿಳೆಯರು ತಮಗೆ ಇಷ್ಟವಾದ ಉಡುಗೆಗಳನ್ನು ತೊಟ್ಟು ಆರಾಮವಾಗಿ ಓಡಬಹುದು ಎನ್ನುತ್ತಾರೆ ಮಿಲಿಂದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.