ಇಡೀ ಜಗತ್ತಿನ ಆರ್ಥಿಕತೆ ಸುಸ್ಥಿರವಾಗಿಲ್ಲ. ಈಗಿರುವ ಎಲ್ಲಾ ಆರ್ಥಿಕತೆಗಳೂ ಭೂಮಿಯನ್ನು ಮತ್ತು ಮನುಷ್ಯನನ್ನು ಸತತವಾಗಿ ಶೋಷಿಸುತ್ತಿವೆ.

ನಾವು ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳಿಗೆಲ್ಲಾ ನಾವು ಈಗ ಅನುಸರಿಸುತ್ತಿರುವ ಆರ್ಥಿಕ ಮಾದರಿಗಳೇ ಕಾರಣ ಎಂಬ ಎಲ್ಲಾ ವಾದಗಳನ್ನು ನಾವು ಬಹಳಷ್ಟು ಸಾರಿ ಕೇಳಿರುತ್ತೇವೆ. ಆದರೆ ಇದಕ್ಕೇನು ಪರಿಹಾರ? ಪ್ರಶ್ನೆಗೆ ಉತ್ತರವಾಗಿ ಹುಟ್ಟಿಕೊಂಡಿರುವುದೇ ‘ಚಕ್ರೀಯ ಆರ್ಥಿಕತೆ’.

ಇದರ ವಿಶೇಷವೇನೆಂದರೆ ಒಂದು ನಿರ್ದಿಷ್ಟ ಉದ್ಯಮದ ಪ್ರತಿಯೊಂದು ತ್ಯಾಜ್ಯವೂ ಮತ್ತೊಂದು ಉತ್ಪನ್ನವಾಗುವಂಥ ವ್ಯವಸ್ಥೆಯನ್ನು ರೂಪಿಸುವುದು. ಅಂದರೆ ಮರುಬಳಕೆ ಎಂಬುದು ಇಲ್ಲಿ ಕೇವಲ ಒಂದು ನಿಯಮವಲ್ಲ. ಇಡೀ ಆರ್ಥಿಕತೆಯ ಮಾದರಿಯೇ ಮರುಬಳಕೆಯನ್ನು ಅವಲಂಬಿಸಿರುತ್ತದೆ. ಇದು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಇದನ್ನು ಸಾಧ್ಯ ಮಾಡಿಸುವ ಅನೇಕ ಪ್ರಯೋಗಗಳು ಈಗ ಪ್ರಪಂಚದಾದ್ಯಂತ ನಡೆಯುತ್ತಿವೆ.

ಈ ಚಕ್ರೀಯ ಆರ್ಥಿಕತೆಯನ್ನು ಕಲಿಸುವ ದೊಡ್ಡ ಹೊಣೆಗಾರಿಕೆಯನ್ನು ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ವಹಿಸಿಕೊಂಡಿದೆ. ಇದರ ಭಾಗವಾಗಿ ಚಕ್ರೀಯ ಆರ್ಥಿಕತೆಯ ಕುರಿತ ಒಂದು ಪರಿಚಯಾತ್ಮಕ ಕೋರ್ಸ್ ಒಂದನ್ನು ರೂಪಿಸಿದೆ. ಇದರಲ್ಲಿ ಚಕ್ರೀಯ ಆರ್ಥಿಕತೆ ಎಂದರೇನು ಎಂಬುದರಿಂದ ತೊಡಗಿ ಬಹುಕಾಲ ಬಾಳಿಕೆ ಬರುವ ಉತ್ಪನ್ನಗಳ ತಯಾರಿ, ಅವುಗಳ ಮರು ಬಳಕೆ, ಮರು ಉತ್ಪಾದನೆಗಳು, ಅದರ ಸಾಧ್ಯತೆಗಳೆಲ್ಲದರ ಪರಿಚಯವನ್ನು ಕೋರ್ಸ್ ನೀಡುತ್ತದೆ.

ಇದನ್ನು ನಿಮ್ಮದೇ ವೇಗದಲ್ಲಿ ಕಲಿಯಬಹುದು. ಕೋರ್ಸ್ನ ಅವಧಿ 7 ವಾರಗಳಷ್ಟಿದೆ. ವಾರಕ್ಕೆ ಮೂರರಿಂದ ಆರು ಗಂಟೆಗಳ ಅಧ್ಯಯನಾವಧಿ ಬೇಕೆಂದು ವಿಶ್ವವಿದ್ಯಾಲಯ ಹೇಳುತ್ತಿದೆ. ಕೋರ್ಸ್ಗೆ ಸೇರಿಕೊಳ್ಳಲು ಇಚ್ಛಿಸುವವರು ಇಲ್ಲಿರುವ ಲಿಂಕ್ ಕ್ಲಿಕ್ಕಿಸಬಹುದು: https://goo.gl/36ueUD

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.