ಬೆಕ್ಕು ಸಾಕುವ ಮೊದಲು ಅದರ ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಳ್ಳಿ. ನೀವು ನೀಡುವ ಆಹಾರ ಅವುಗಳ ಆರೋಗ್ಯಕ್ಕೆ ಹಾನಿಯಾದೀತು ಜೋಕೆ..

*ಬೆಕ್ಕಿಗೆ ಚಾಕೊಲೆಟ್ ಕೊಡಬಾರದು. ಚಾಕೊಲೆಟ್ ತಿನ್ನುವುದರಿಂದ ಬೆಕ್ಕಿಗೆ ಹೃದಯ ಸಂಬಂಧಿ ತೊಂದರೆಯಾಗುವ ಸಂಭವವಿದೆ.

*ತುಂಬಾ ಮುಳ್ಳುಗಳಿರುವ ಮೀನು ಕೊಡಬೇಡಿ. ಮುಳ್ಳುಗಳು ಗಂಟಲಿನಲ್ಲಿ ಸಿಕ್ಕಿಕೊಂಡರೆ ಅವುಗಳಿಗೆ ತೊಂದರೆಯಾಗುತ್ತದೆ.

*ಹಸಿ ಮೊಟ್ಟೆ, ಮಾಂಸ ತಿಂದರೆ ಬೆಕ್ಕುಗಳ ಮಿದುಳಿಗೆ ಹಾನಿಯಾಗುತ್ತದೆ. ಹಾಗಾಗಿ ಬೇಯಿಸಿದ ಮೊಟ್ಟೆಯನ್ನೇ ಕೊಡಿ.

*ಅಣಬೆ ತಿನ್ನುವುದರಿಂದ ಅವುಗಳ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

*ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆಯಿಂದ ಬೆಕ್ಕುಗಳಲ್ಲಿ ರಕ್ತಹೀನತೆ ಉಂಟಾಗುವ ಸಂಭವ ಇರುತ್ತದೆ.

*ಮದ್ಯಪಾನ, ಕೆಫಿನ್ ಅಂಶವುಳ್ಳ ಪಾನೀಯ ನೆಲದ ಮೇಲೆ ಬಿದ್ದರೆ ತಕ್ಷಣ ಒರೆಸಿ. ಬೆಕ್ಕುಗಳು ಅದನ್ನು ಕುಡಿದರೆ ಅವುಗಳ ಯಕೃತ್, ಮಿದುಳಿಗೆ ತೊಂದರೆಯಾಗಬಹುದು.

*ದ್ರವಾಹಾರ ನೀಡುವುದು ಒಳ್ಳೆಯದು. ತರಕಾರಿ, ಮಾಂಸವನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ ಸೂಪ್ ತಯಾರಿಸಿ ಆಗಾಗ್ಗೆ ನೀಡಿ.

*ಕೊಬ್ಬು ಹೆಚ್ಚಿರುವ ಆಹಾರ ನೀಡದಿರುವುದು ಒಳಿತು. ಇಂತಹ ಆಹಾರ ಸೇವನೆಯಿಂದ ಬೆಕ್ಕಿಗೆ ವಾಂತಿ, ಭೇದಿ ಆಗುವ ಸಾಧ್ಯತೆ ಇದೆ.

*ಹೆಚ್ಚು ಒಣದ್ರಾಕ್ಷಿಯನ್ನು ತಿನ್ನುವುದರಿಂದ ಬೆಕ್ಕಿನ ಮೂತ್ರಪಿಂಡ ವೈಫಲ್ಯವಾಗುತ್ತದೆ. 24 ಗಂಟೆಯ ಒಳಗೆ ಅತಿಸಾರ, ಅತಿಯಾದ ನಿದ್ರೆ, ಹೊಟ್ಟೆ ನೋವು, ಮೂತ್ರ ಕಡಿಮೆ ಹೋಗುವ ಸಮಸ್ಯೆ ಎದುರಿಸುತ್ತದೆ.

(ಮಾಹಿತಿ: ಪೆಟ್ ಎಜುಕೇಷನ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.