ಏರ್ ಸಸ್ಪೆನ್ಷನ್, ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್
ಐಷಾರಾಮಕ್ಕೆ ಮಾನವ ಅತ್ಯಂತ ಹೆಚ್ಚು ಮಹತ್ವ ನೀಡುವುದರಿಂದಲೋ ಏನೋ ವಾಹನ ಕ್ಷೇತ್ರದಲ್ಲಿ ಸಸ್ಪೆನ್ಷನ್ ತಂತ್ರಜ್ಞಾನದಲ್ಲಾಗಿರುವಷ್ಟು ಸುಧಾರಣೆಗಳು ಬೇರಾವುದರಲ್ಲೂ ಆಗಿಲ್ಲ. ಕೇವಲ ಯಾಂತ್ರಿಕ ತಂತ್ರಜ್ಞಾನ ಕಾರ್ಯವಿಧಾನದಿಂದ ಹಿಡಿದು. ಕಂಪ್ಯೂಟರ್ ನಿಯಂತ್ರಿತ ಸಸ್ಪೆನ್ಷನ್ ವಿಧಾನದವರೆಗೂ ಸುಧಾರಣೆಗಳು ನಡೆದಿವೆ.

ಸಸ್ಪೆನ್ಷನ್ ಇಂದು ಎಷ್ಟು ಚುರುಕಾಗಿದೆ ಎಂದರೆ, ರಸ್ತೆಯಲ್ಲಿನ ಸಣ್ಣ ಹಳ್ಳಕೊಳ್ಳಗಳನ್ನು 50 ಅಡಿ ದೂರದಲ್ಲಿರುವಾಗಲೇ ಗುರುತಿಸಿ ಚಕ್ರಗಳಿಗೆ ಸೂಕ್ತ ಸಂಜ್ಞೆ ಕಳುಹಿಸುವ ಸೆನ್ಸರ್ಗಳು ಅನ್ವೇಷಣೆಗೊಂಡಿವೆ. ಯಾವ ಹೊಳ್ಳಕ್ಕೆ ಎಷ್ಟು ಸ್ಪಂದಿಸಬೇಕು ಎಂದು ಚಕ್ರಕ್ಕೆ ಆದೇಶ ನೀಡುವ ಕಂಪ್ಯೂಟರ್ಗಳು ವಾಹನಗಳಲ್ಲಿವೆ. ಈ ವಾರದ ಆಟೋ ಟೆಕ್ನಲ್ಲಿದೆ ಏರ್ ಸಸ್ಪೆನ್ಷನ್ ಹಾಗೂ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್.

ಏರ್ ಸಸ್ಪೆನ್ಷನ್ ಸಿಸ್ಟಂ
ಪಂಚಭೂತಗಳಲ್ಲಿ ಗಾಳಿ ಅತ್ಯಂತ ಶಕ್ತಿಶಾಲಿಯಾದ್ದರಿಂದ ಅದನ್ನೇ ಸಸ್ಪೆನ್ಷನ್ನಲ್ಲಿ ಬಳಸಿಕೊಳ್ಳುವ ಜಾಣ್ಮೆ ಮಾನವನದು. ಕುಲುಕಾಟ ನಿಯಂತ್ರಿಸಲು ಗಾಳಿಯನ್ನೇ ಬಳಸಿಕೊಳ್ಳುವ ವಿಧಾನವಿದು. ಚಕ್ರಗಳಲ್ಲಿ ಸಾಮಾನ್ಯವಾಗಿ ಕುಲುಕಾಟ ನಿಯಂತ್ರಣಕ್ಕಾಗಿ ಬಳಕೆಯಾಗುವ ಸ್ಪ್ರಿಂಗ್ಗಳು ಈ ವಿಧಾನದಲ್ಲೂ ಇರುತ್ತವೆ. ಆದರೆ ಈ ಸಸ್ಪೆನ್ಷನ್ ಸಿಸ್ಟಂನಲ್ಲಿ ಗಾಳಿಯನ್ನು ಒತ್ತಡದಿಂದ ಸಿಲಿಂಡರ್ನಲ್ಲಿ ಶೇಖರಿಸಿಟ್ಟು ಕುಲುಕಾಟ ನಿಯಂತ್ರಿಸಲಾಗುತ್ತದೆ.

ಇದಕ್ಕಾಗಿ ಗಾಳಿಯನ್ನು ನಿಯಂತ್ರಿಸಲೆಂದೇ ಏರ್ ಕಂಪ್ರೆಸರ್ ಅಥವಾ ಮೋಟಾರ್ ಒಂದನ್ನು ಜೋಡಿಸಿರಲಾಗುತ್ತದೆ. ಈ ಸಾಧನ ಸದಾ ಗಾಳಿಯ ಮಟ್ಟವನ್ನು ಕಾಪಾಡಿಕೊಳ್ಳುತ್ತ ಚಕ್ರಗಳಿಗೆ ಸಾಗಿಸುತ್ತಿರುತ್ತದೆ. ಈ ವ್ಯವಸ್ಥೆ ದೊಡ್ಡ ವಾಹನಗಳಾದ ಬಸ್, ಟ್ರಕ್ಗಳಲ್ಲೆೀ ಹೆಚ್ಚು ಬಳಕೆಯಾಗುತ್ತದೆ. ಏಕೆಂದರೆ ವಾಹನದ ದೇಹದ ಭಾರದಿಂದ ಸಸ್ಪೆನ್ಷನ್ ಕುಸಿಯುವ ಸಾಧ್ಯತೆ ಇರುತ್ತದೆ. ಅದನ್ನು ನಿಯಂತ್ರಿಸಿ ಸಮತೋಲನ ಕಾಪಾಡುವುದು ಉದ್ದೇಶ. ಅಲ್ಲದೇ ಅತ್ಯಂತ ನಯವಾದ ಚಾಲನೆಯೂ ವಾಹನಕ್ಕೆ ದೊರೆಯುತ್ತದೆ.

ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್
ವಾಹನ ಕುಲುಕಾಟದ ಮೊದಲ ಸಮಸ್ಯೆಯೆಂದರೆ ಬೆನ್ನು ನೋವು. ವಾಹನ ಚಾಲನೆಯಿಂದ ಬೆನ್ನು ನೋವು ಕ್ರಾನಿಕ್ (ನಿರಂತರ) ಆಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಈ ಸಮಸ್ಯೆ ಎದುರಿಸಿದ ವಿಜ್ಞಾನಿಗಳು ವಾಹನಗಳಲ್ಲಿ ಮೊಟ್ಟ ಮೊದಲು ಅಳವಡಿಸಿದ ಸಾಧನವೇ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್. ಇದು ಅತ್ಯಂತ ಸರಳ ಹಾಗೂ ಕಚ್ಛಾ ತಂತ್ರಜ್ಞಾನ. ಈಗಿನ ತಂತ್ರಜ್ಞಾನಗಳಿಗೆ ಹೋಲಿಸಿದರೆ ಬಹು ಸಾಧಾರಣವಾದದ್ದು.

ಅತಿ ಗಡುಸಾದ ಉಕ್ಕುಗಳ ಪಟ್ಟಿಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ ಅವನ್ನು ಚಕ್ರಕ್ಕೆ ಜೋಡಿಸರಲಾಗುತ್ತದೆ. ಈ ಪಟ್ಟಿಗಳ ಮೇಲೆ ಚಕ್ರದ ನೇರ ಒತ್ತಡ ಬೀಳುತ್ತದೆ. ಆಗ ಕುಲುಕಾಟವನ್ನು ಈ ಪಟ್ಟಿಗಳು ನಿಯಂತ್ರಿಸುತ್ತವೆ. ಮೊದಲು ಕುದುರೆ ಗಾಡಿಗಳಲ್ಲಿ ಈ ಸಾಧನ ಅಳವಡಿಸಲಾಗುತ್ತಿತ್ತು.

ನಂತರ ಕಾರು, ರೈಲುಗಳಲ್ಲಿ ಅಳವಡಿತಗೊಂಡಿತು. ಇಂದು ಡೊಡ್ಡ ವಾಹನಗಳಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಜತೆಗೆ ಹೆಚ್ಚುವರಿಯಾಗಿ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಜೋಡಿಸಿರಲಾಗುತ್ತದೆ. ಭಾರವನ್ನು ಅತಿ ಪರಿಣಾಮಕಾರಿಯಾಗಿ ತಡೆಯಬಲ್ಲ ಶಕ್ತಿ ಇರುವುದು ಇದಕ್ಕೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.