ಹುಬ್ಬಳ್ಳಿ: ಜೂನಿಯರ್ ಪ್ರತಿಭೆಗಳ ಸಾಮರ್ಥ್ಯಕ್ಕೆ ವೇದಿಕೆ ಎನಿಸಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್ ಪಿಎಲ್) ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿ ಶನಿವಾರ ಆರಂಭವಾಗಲಿದೆ.

ಹುಬ್ಬಳ್ಳಿ ನೈಟ್ಸ್, ಸ್ವರ್ಣ ಸ್ಟ್ರೈಕರ್ಸ್, ಮುಂಡಗೋಡ ಮಾನ್‌ಸ್ಟರ್ಸ್, ಸ್ಕೈಟೌನ್ ಬ್ಯಾಷರ್ಸ್, ಎನ್.ಕೆ. ವಾರಿಯರ್ಸ್, ನಿಲೇಕಣಿ ಚಾಲೆಂಜರ್ಸ್, ಟಿ.ಎಸ್.ಎಸ್. ಟೈಗರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ಪಾಲ್ಗೊಳ್ಳಲಿವೆ.

ಪಂದ್ಯಗಳು ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಜ. 21ರಂದು ಫೈನಲ್ ಜರುಗಲಿದೆ. ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದ ಪ್ರಮುಖ ಆಟಗಾರರು ಮತ್ತು ರಣಜಿ ಟೂರ್ನಿ ಆಟಗಾರ ವೇಗಿ ಎಚ್.ಎಸ್. ಶರತ್ ಕೂಡ ಆಡಲಿದ್ದಾರೆ.

‘ಹಿಂದಿನ ಎರಡು ವರ್ಷ ಚೆನ್ನಾಗಿ ಆಡಿದ ಆಟಗಾರರು ಕೆಪಿಎಲ್‌ನಲ್ಲಿ ಅವಕಾಶ ಪಡೆದರು. ಬೆಂಗಳೂರಿನ ಆಟಗಾರರು ಕೂಡ ಹುಬ್ಬಳ್ಳಿಗೆ ಬಂದು ಆಡುವುದರಿಂದ ಈ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆ ವೇಗ ಹೆಚ್ಚಾಗುತ್ತದೆ’ ಎಂದು ಟೂರ್ನಿ ಆಯೋಜಿಸಿರುವ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ಸದಸ್ಯ ಶಿವಾ ನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.