ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಸರಣಿ ಸಭೆಗಳಲ್ಲಿ ಅನುಷ್ಕಾ ಶರ್ಮಾ?

7

ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಸರಣಿ ಸಭೆಗಳಲ್ಲಿ ಅನುಷ್ಕಾ ಶರ್ಮಾ?

Published:
Updated:
Deccan Herald

ನವದೆಹಲಿ: ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಸರಣಿ ನಡೆಯುತ್ತಿದ್ದ ಸಂದರ್ಭದಲ್ಲಿ  ಭಾರತ ತಂಡದ ಸಭೆಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೂ ಭಾಗವಹಿಸುತ್ತಿದ್ದರು ಮತ್ತು ತಂಡದ ಬದಲಾವಣೆಗಳ ಕುರಿತು ಸಲಹೆ ನೀಡುತ್ತಿದ್ದರು ಎಂದು ‘ದೈನಿಕ ಜಾಗರಣ್’ ಹಿಂದಿ ಪತ್ರಿಕೆಯು ವರದಿ ಮಾಡಿದೆ.

ಅನುಷ್ಕಾ ಅವರ ಈ ವರ್ತನೆಯನ್ನು  ಶಿಖರ್ ಧವನ್ ಅವರ ಪತ್ನಿ ಆಯೇಷಾ ಅವರು ಆಕ್ಷೇಪಿಸಿದ್ದರು.  ಆದ್ದರಿಂದಲೇ ಅವರಿಬ್ಬರ ಮಧ್ಯೆ ವೈಮನಸ್ಸು ಉಂಟಾಗಿದೆ ಎಂದು ತಂಡದ ಮೂಲಗಳು ಪತ್ರಿಕೆಗೆ ಬಹಿರಂಗಪಡಿಸಿವೆ.

ಇಂಗ್ಲೆಂಡ್ ಪ್ರವಾಸದ ಆರಂಭದಲ್ಲಿ ಭಾರತದ ಹೈಕಮಿಷನರ್ ಕಚೇರಿಯಲ್ಲಿ ನಡೆದಿದ್ದ  ಔತಣಕೂಟದಲ್ಲಿ ತಂಡದೊಂದಿಗೆ ಅನುಷ್ಕಾ ಕೂಡ ಹೋಗಿದ್ದರು. ಅಲ್ಲದೇ ತಂಡದೊಂದಿಗೆ ಹೈಕಮಿಷನರ್ ತೆಗೆಸಿಕೊಂಡ ಚಿತ್ರದಲ್ಲಿಯೂ ಅವರಿದ್ದರು. ಅದು ಶಿಷ್ಟಾಚಾರ ಉಲ್ಲಂಘನೆ ಎಂದು ಆಗ ಹಲವರು ಟೀಕಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !