ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಚಾಂಪಿಯನ್ಸ್‌ ನೆಟ್‌ ಜಯಭೇರಿ

ನಾಗಾರ್ಜುನ ಅರ್ಧಶತಕ, ಉಮ್ರಾಣಿ ಐದು ವಿಕೆಟ್‌
Last Updated 16 ಫೆಬ್ರುವರಿ 2021, 3:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾಗಾರ್ಜುನ ಎಸ್‌. ಪಾಟೀಲ (54, 70 ಎಸೆತ, 6 ಬೌಂಡರಿ) ಅರ್ಧಶತಕದ ಬಲದಿಂದ ಉತ್ತಮ ಮೊತ್ತ ಕಲೆಹಾಕಿದ ಚಾಂಪಿಯನ್ಸ್‌ ನೆಟ್‌ ತಂಡ16 ವರ್ಷದ ಒಳಗಿನವರ ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತಕ್ರಿಕೆಟ್ಟೂರ್ನಿಯ ಸೋಮವಾರದ ಪಂದ್ಯದಲ್ಲಿ 30 ರನ್‌ಗಳ ಗೆಲುವು ದಾಖಲಿಸಿತು.

ಹುಬ್ಬಳ್ಳಿಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಮೈದಾನದಲ್ಲಿ ಆಯೋಜಿಸಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚಾಂಪಿಯನ್ಸ್‌ ನೆಟ್‌ 30 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿತು. ಎದುರಾಳಿ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ 28.5 ಓವರ್‌ಗಳಲ್ಲಿ 137 ರನ್‌ ಕಲೆಹಾಕಿ ಸರ್ವಪತನ ಕಂಡಿತು. ಚಾಂಪಿಯನ್ಸ್‌ ತಂಡದ ಆರ್ಯನ್‌ ವಿ. ನಾಲ್ಕು, ಆಶೀಶ್‌ ಪಾಟೀಲ ಮತ್ತು ಹೇತ್‌ ಪಟೇಲ ತಲಾ ಎರಡು ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಗಾರ್ಜುನ ಪಂದ್ಯ ಶ್ರೇಷ್ಠ ಗೌರವ ಪಡೆದರು.

ದಿನದ ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ)ತಂಡ ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ (ವಿಎಂಸಿಎ)ಎದುರು ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ವಿಎಂಸಿಎ 22.5 ಓವರ್‌ಗಳಲ್ಲಿ 68 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು.

ಸುಲಭವಾದ ಗುರಿಯನ್ನು ಎಚ್‌ಸಿಎ 11.5 ಓವರ್‌ಗಳಲ್ಲಿ ತಲುಪಿತು. ಈ ತಂಡದ ಆದಿತ್ಯ ಉಮ್ರಾಣಿ ಒಂದೇ ಸ್ಪೆಲ್‌ನಲ್ಲಿ6 ಓವರ್‌ ಬೌಲಿಂಗ್‌ ಮಾಡಿ 21 ರನ್ ಗಳಿಸಿ ಐದು ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಸಾಹಿಲ್‌ ಸೂರ್ಯವಂಶಿ (ಅಜೇಯ 42) ತಂಡದ ಗೆಲುವು ಸುಲಭ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT