ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಪಂದ್ಯ: ಜೀನ್ ಡುಪ್ಲೆಸಿ ಶತಕ- ವಿದ್ವತ್‌ಗೆ ವಿಕೆಟ್

Published 12 ಡಿಸೆಂಬರ್ 2023, 20:11 IST
Last Updated 12 ಡಿಸೆಂಬರ್ 2023, 20:11 IST
ಅಕ್ಷರ ಗಾತ್ರ

ಪೊಚೆಸ್‌ಸ್ಟ್ರೂಮ್, ದಕ್ಷಿಣ ಆಫ್ರಿಕಾ (ಪಿಟಿಐ): ಜೀನ್ ಡುಪ್ಲೆಸಿ ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಎ ತಂಡವು ಮಂಗಳವಾರ ಇಲ್ಲಿ ನಡೆದ ‘ಟೆಸ್ಟ್‌’ ಪಂದ್ಯದಲ್ಲಿ ಭಾರತ ಎ ತಂಡದ ಎದುರು ಉತ್ತಮ ಮೊತ್ತ ಗಳಿಸಿತು.

ಎರಡನೇ ದಿನದಾಟದ ಕೊನೆಗೆ 92 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 298 ರನ್ ಗಳಿಸಿತು. ಪಂದ್ಯದ ಮೊದಲ ದಿನವು ಮಳೆಗಾಹುತಿಯಾಗಿತ್ತು.  ಆತಿಥೇಯ ತಂಡದ ರುಬಿನ್ ಹರ್ಮನ್ 95 ರನ್ ಗಳಿಸಿದರು. ಜೀನ್ (ಬ್ಯಾಟಿಂಗ್ 103; 207ಎ, 4X8, 6X1) ಶತಕ ಗಳಿಸಿದರು. 

ಭಾರತ ಎ ತಂಡದಲ್ಲಿ ಪದಾರ್ಪಣೆ ಮಾಡಿದ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಆರಂಭಿಕ ಬ್ಯಾಟರ್ ಕ್ಯಾಮರಾನ್ ಡೀನ್ ಶೇಕ್ಲೆಟನ್ ಅವರ ವಿಕೆಟ್ ಗಳಿಸಿದರು. ಸೌರಭ್ ಕುಮಾರ್ ಮೂರು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 92 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 298 (ರುಬಿನ್ ಹರ್ಮನ್ 95, ಜೀನ್ ಡುಪ್ಲೆಸಿ ಬ್ಯಾಟಿಂಗ್ 103, ಸೌರಭ್ ಕುಮಾರ್ 83ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT