ಮಂಗಳವಾರ, ಮಾರ್ಚ್ 9, 2021
31 °C

ಕೆಪಿಎಲ್‌ಗೆ ನಾಲ್ವರು ಹೊಸ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ 7 ತಂಡಗಳ ಪೈಕಿ ನಾಲ್ಕನ್ನು ಈ ಬಾರಿ ಹೊಸ ನಾಯಕರು ಮುನ್ನಡೆಸುವರು. ಶನಿವಾರ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ತಂಡಗಳ ನಾಯಕರ ಹೆಸರನ್ನು ಘೋಷಿಸಲಾಯಿತು.

ಬೆಂಗಳೂರು ಬ್ಲಾಸ್ಟರ್ಸ್ ತಂಡವು ರಾಬಿನ್ ಉತ್ತಪ್ಪ ಬದಲಿಗೆ ಆರ್‌.ಜೊನಾಥನ್ ಹೆಗಲಿಗೆ ನಾಯಕತ್ವವನ್ನು ವಹಿಸಿದೆ. ಬೆಳಗಾವಿ ಪ್ಯಾಂಥರ್ಸ್ ತಂಡ ಸ್ಟುವರ್ಟ್ ಬಿನ್ನಿ ಬದಲಿಗೆ ಮಿರ್ ಕೌನೇನ್ ಅಬ್ಬಾಸ್ ಅವರನ್ನು ನಾಯಕನ್ನಾಗಿ ಮಾಡಿದೆ. ಅಭಿಮನ್ಯು ಮಿಥುನ್ ಶಿವಮೊಗ್ಗ ಲಯನ್ಸ್ ತಂಡವನ್ನು ಮುನ್ನಡೆಸುವರು. ಜೆ.ಸುಚಿತ್ ಬದಲಿಗೆ ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ಅಮಿತ್ ವರ್ಮಾ ಅವರಿಗೆ ನೀಡಲಾಗಿದೆ.

ಬಿಜಾಪುರ ಬುಲ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಕ್ರಮವಾಗಿ ಭರತ್ ಚಿಪ್ಲಿ, ಆರ್.ವಿನಯ ಕುಮಾರ್ ಹಾಗೂ ಸಿ.ಎಂ.ಗೌತಮ್ ಅವರನ್ನೇ ನಾಯಕ ಸ್ಥಾನದಲ್ಲಿ ಮುಂದುವರಿಸಿವೆ.

ನೆರೆ ಪರಿಹಾರಕ್ಕೆ ಮುಂದು: ನೆರೆಹಾವಳಿಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಪರಿಹಾರ ನೀಡಲು ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಕೆಪಿಎಲ್‌ ಫ್ರಾಂಚೈಸ್‌ ಮಾಲೀಕರು ಮುಂದೆ ಬಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು