ನವದೆಹಲಿ: ಕಳೆದ ವರ್ಷ ವಿಶ್ವದ ವಿವಿಧೆಡೆ ನಡೆದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಲ್ಲಿ 13 ಪಂದ್ಯಗಳು ಸಂಶಯಕ್ಕೆ ಎಡೆಮಾಡಿಕೊಡುವಂತಿದ್ದವು ಎಂದು ಸ್ಪೋರ್ಟ್‌ರೆಡಾರ್ ಇಂಟೆಗ್ರಿಟಿ ಸರ್ವಿಸಸ್ ಸಂಸ್ಥೆಯು ಪ್ರಕಟಿಸಿದ ವರದಿ ಹೇಳಿದೆ.
ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಒಳಗೊಂಡಂತೆ ಕ್ರೀಡೆಯಲ್ಲಿ ನಡೆಯುವ ಇನ್ನಿತರ ಭ್ರಷ್ಟಾಚಾರಗಳ ಬಗ್ಗೆ ವಿಶ್ಲೇಷಣೆ ನಡೆಸುವ ಕೆಲಸವನ್ನು ಸ್ಪೋರ್ಟ್‌ರೆಡಾರ್ ಮಾಡುತ್ತದೆ.
‘2022ರ ಅವಧಿಯಲ್ಲಿ 92 ದೇಶಗಳಲ್ಲಿ 12 ವಿವಿಧ ಕ್ರೀಡೆಗಳಲ್ಲಿ ಆಯೋಜಿಸಿದ್ದ 1,212 ಪಂದ್ಯಗಳು ಸಂಶಯಕ್ಕೆ ಎಡೆಮಾಡಿಕೊಡುವಂತಿದ್ದವು’ ಎಂದು 28 ಪುಟಗಳ ತನ್ನ ವರದಿಯಲ್ಲಿ ತಿಳಿಸಿದೆ.
‘ಫುಟ್‌ಬಾಲ್ ಕ್ರೀಡೆಯಲ್ಲಿ 775 ಪಂದ್ಯಗಳು, ಬ್ಯಾಸ್ಕೆಟ್‌ಬಾಲ್‌ನಲ್ಲಿ 220 ಮತ್ತು ಟೆನಿಸ್‌ನಲ್ಲಿ 75 ಪಂದ್ಯಗಳು ಅನುಮಾನ ಹುಟ್ಟಿಸುವಂತಿದ್ದವು’ ಎಂದಿದೆ.
ಈ ಪಟ್ಟಿಯಲ್ಲಿ ಕ್ರಿಕೆಟ್ ಆರನೇ ಸ್ಥಾನ ಪಡೆದುಕೊಂಡಿದೆ. ವರದಿಯಲ್ಲಿ ಉಲ್ಲೇಖಿಸಿರುವ 13 ಕ್ರಿಕೆಟ್ ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ಇವೆಯೇ ಆಥವಾ ಟಿ20 ಲೀಗ್‌ನಲ್ಲಿ ನಡೆದ ಪಂದ್ಯಗಳೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಭಾರತದಲ್ಲಿ ನಡೆದಿರುವ ಪಂದ್ಯಗಳು ಈ ಪಟ್ಟಿಯಲ್ಲಿ ಇಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.