ಸೋಮವಾರ, ಮಾರ್ಚ್ 27, 2023
28 °C

ಅಬುಧಾಬಿ ಕ್ರೀಡಾಂಗಣದ ಕ್ಯೂರೇಟರ್‌ ಭಾರತ ಮೂಲದ ಮೋಹನ್‌ ಸಿಂಗ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ (ಪಿಟಿಐ): ಅಬುಧಾಬಿ ಕ್ರಿಕೆಟ್ ಕ್ರೀಡಾಂಗಣದ ಮುಖ್ಯ ಕ್ಯೂರೇಟರ್ ಆಗಿದ್ದ ಭಾರತ ಮೂಲದ ಮೋಹನ್ ಸಿಂಗ್ ಅವರು ಭಾನುವಾರ ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಪಂದ್ಯಕ್ಕೆ ಮೊದಲು ನಿಧನರಾದರು. 

ಯುನೈಟೆಡ್‌ ಅರಬ್ ಎಮಿರೇಟ್ಸ್‌ (ಯುಎಇ) ಕ್ರಿಕೆಟ್ ಮಂಡಳಿಯ ಮೂಲಗಳು ವಿಷಯ ಖಚಿತಪಡಿಸಿವೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ.

‘ಮೋಹನ್‌ ಸಿಂಗ್ ಅವರು ಇಂದು ನಿಧನರಾದರು. ಈ ಕುರಿತು ಸಂಪೂರ್ಣ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಇದು ದುರದೃಷ್ಟಕರ‘ ಎಂದು ಮೂಲಗಳು ಹೇಳಿವೆ.

ಮೋಹನ್ ಅವರು 2000ರ ದಶಕದ ಆರಂಭದಲ್ಲಿ ಯುಎಇಗೆ ತೆರಳುವ ಮೊದಲು ಮೊಹಾಲಿಯಲ್ಲಿ ಬಿಸಿಸಿಐನ ಮಾಜಿ ಮುಖ್ಯ ಕ್ಯೂರೇಟರ್ ದಲ್ಜಿತ್ ಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು