ಗುರುವಾರ , ಜುಲೈ 7, 2022
20 °C
ಐಪಿಎಲ್‌: ಬಿರುಸಿನ ಹೊಡೆತಗಳಿಗೆ ಹೆಸರಾದ ಓಪನರ್‌

ಗುಜರಾತ್‌ ಟೈಟನ್ಸ್‌ಗೆ ಅಫ್ಗನ್‌ ಆಟಗಾರ ಗುರ್ಬಾಜ್‌ ಆಡುವ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜೇಸನ್‌ ರಾಯ್‌ ಅವರ ಅಲಭ್ಯತೆಯಿಂದ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ತೆರವಾಗುವ ಸ್ಥಾನಕ್ಕೆ ಅಫ್ಗಾನಿಸ್ತಾನದ ಆರಂಭ ಆಟಗಾರ ರಹಮತ್ಉಲ್ಲಾ ಗುರ್ಬಾಜ್‌ ಆಡುವ ಸಾಧ್ಯತೆ ಅಧಿಕವಾಗಿದೆ. ಮುಂಬರುವ ಐಪಿಎಲ್‌ನಲ್ಲಿ ಆಡಲಿರುವ ಎರಡು ಹೊಸ ತಂಡಗಳಲ್ಲಿ ಟೈಟನ್ಸ್‌ ಒಂದಾಗಿದೆ.

ದೀರ್ಘ ಕಾಲ ‘ಬಯೊಬಬಲ್‌’ನಲ್ಲಿ ಉಳಿದುಕೊಳ್ಳಲು ಬಯಸದ ಕಾರಣ, ಇಂಗ್ಲೆಂಡ್‌ ಬ್ಯಾಟರ್‌ ಜೇಸನ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಬಿರುಸಿನ ಹೊಡೆತಗಳ ಆಟಗಾರ ಗುರ್ಬಾಜ್‌ ಟಿ–20ಯಲ್ಲಿ 150ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ ಒಂದಿದ್ದಾರೆ. ಅವರು  ಕೀಪಿಂಗ್‌ ಕೂಡ ಮಾಡುವ ಕಾರಣ ಬಹುಪಯೋಗಿ ಆಟಗಾರ ಆಗಬಲ್ಲರು. ಒಟ್ಟು 69 ಟಿ20 ಪಂದ್ಯಗಳಲ್ಲಿ 113 ಸಿಕ್ಸರ್‌ಗಳನ್ನು ಸಿಡಿಸಿರುವುದು ಅವರ ತೋಳ್ಬಲಕ್ಕೆ ನಿದರ್ಶನ.

ಅವರು ಅಫ್ಗಾನಿಸ್ತಾನ ತಂಡವನ್ನು 9 ಏಕದಿನ ಅಂತರರಾಷ್ಟ್ರೀಯ ಮತ್ತು 12 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅಲ್ಪಾವಧಿ ಕ್ರಿಕೆಟ್‌ ಜೀವನದಲ್ಲೇ ಛಾಪು ಮೂಡಿಸಿದ್ದಾರೆ. ಪಾಕ್‌ ಸೂಪರ್‌ ಲೀಗ್‌ನಲ್ಲಿ ಅವರು ಮುಲ್ತಾನ್‌ ಸುಲ್ತಾನ್ಸ್‌ ಮತ್ತು ಇಸ್ಲಾಮಾಬಾದ್‌ ಯುನೈಟೆಡ್‌ ತಂಡಕ್ಕೆ ಮತ್ತು ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಕ್ಯಾಂಡಿ ಟಸ್ಕರ್‌ ತಂಡಕ್ಕೆ ಆಡಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಖುಲ್ನಾ ಟೈಗರ್‌ ಪರ ಬ್ಯಾಟ್‌ ಬೀಸಿದ್ದಾರೆ.

ಗುರ್ಬಾಜ್‌ ಅವರ ಆಗಮನದಿಂದ ಮುಖ್ಯ ಕೋಚ್‌ ಆಶಿಷ್‌ ನೆಹ್ರಾ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯಾ ಅವರ ಚಿಂತೆ ಕಡಿಮೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು