ಅಫ್ಗಾನ್ ಬೌಲರ್‌ಗಳ ಮೇಲುಗೈ

ಶುಕ್ರವಾರ, ಮಾರ್ಚ್ 22, 2019
21 °C
ಟೆಸ್ಟ್ ಕ್ರಿಕೆಟ್‌ ಪಂದ್ಯ: ಟಿಮ್‌ ಮುರ್ತಾಘ್‌ ಅರ್ಧಶತಕ

ಅಫ್ಗಾನ್ ಬೌಲರ್‌ಗಳ ಮೇಲುಗೈ

Published:
Updated:
Prajavani

ಡೆಹ್ರಾಡೂನ್‌: ಬೌಲರ್‌ಗಳ ಪರಿಣಾಮಕಾರಿ ಆಟದ ಬಲದಿಂದ ಅಪ್ಗಾನಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಐರ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್‌ ತಂಡ ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ ತಂಡ ಎಂಟು ವಿಕೆಟ್ ಕಳೆದುಕೊಂಡು 69 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ದಿಟ್ಟ ಆಟ ಆಡಿದ ಟಿಮ್ ಮುರ್ತಾಘ್‌ ಅಜೇಯ 54 ರನ್‌ ಗಳಿಸಿದರು. ಹೀಗಾಗಿ ತಂಡಕ್ಕೆ 172 ರನ್‌ ಗಳಿಸಲು ಸಾಧ್ಯವಾಯಿತು.

ಬ್ಯಾಟಿಂಗ್ ಆರಂಭಿಸಿರುವ ಅಫ್ಗಾನ್‌ ತಂಡದ ದಿನದಾಟದ ಮುಕ್ತಾಯಕ್ಕೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 90 ರನ್‌ ಗಳಿಸಿದೆ.

ಐರ್ಲೆಂಡ್ ತಂಡದ ಮೊತ್ತವನ್ನು ಹಿಂದಿಕ್ಕಬೇಕಾದರೆ ತಂಡ ಇನ್ನೂ 82 ರನ್‌ ಕಲೆ ಹಾಕಬೇಕಾಗಿದೆ. ರಹಮತ್ ಶಾ (22) ಮತ್ತು ಹಶ್ಮತ್‌ ಉಲ್ಲಾ ಶಾಹಿದಿ (13) ಕ್ರೀಸ್‌ನಲ್ಲಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಎಡಗೈ ಸ್ಪಿನ್ನರ್‌ ಜೇಮ್ಸ್‌ ಕ್ಯಾಮರೂನ್‌ ವಾಪಸ್ ಕಳುಹಿಸಿದರು.

ಯಾಮಿನ್‌, ನಬಿ ಪ್ರಬಲ ದಾಳಿ: ಬೆಳಿಗ್ಗೆ ವೇಗಿ ಯಾಮಿನ್‌ ಅಹಮ್ಮದ್‌ಜಾಯ್‌ ಮತ್ತು ಆಫ್ ಸ್ಪಿನ್ನರ್‌ ಮೊಹಮ್ಮದ್ ನಬಿ ದಾಳಿಗೆ ಐರ್ಲೆಂಡ್ ಕಂಗೆಟ್ಟಿತು. ಇವರಿಬ್ಬರು ತಲಾ ಮೂರು ವಿಕೆಟ್ ಉರುಳಿಸಿ ಎದುರಾಳಿಗಳ ಪತನಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್‌: ಐರ್ಲೆಂಡ್: 60 ಓವರ್‌ಗಳಲ್ಲಿ 171 (ಪೌಲ್‌ ಸ್ಟರ್ಲಿಂಗ್‌ 26, ಜಾರ್ಜ್ ಡಕೆಲ್‌ 39, ಟಿಮ್ ಮುರ್ತಾಘ್‌ ಔಟಾಗದೆ 54; ಯಾಮಿನ್ 41ಕ್ಕೆ3, ಮೊಹಮ್ಮದ್ ನಬಿ 36ಕ್ಕೆ3,ರಶೀದ್‌ ಖಾನ್‌ 20ಕ್ಕೆ2); ಅಫ್ಗಾನಿಸ್ತಾನ: 31 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 90 (ಮೊಹಮ್ಮದ್ ಶೆಹಜಾದ್‌ 40, ರಹಮತ್ ಶಾ 22, ಶಾಹಿದಿ 13; ಜೇಮ್ಸ್ ಕ್ಯಾಮರೂನ್‌ 35ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !