ಗುರುವಾರ , ಫೆಬ್ರವರಿ 20, 2020
22 °C

35 ರನ್ ಗಳಿಗೆ ಆಲೌಟ್ ಆದ ಯುಎಸ್ಎ: 17.2 ಓವರ್‌ಗಳಲ್ಲೇ ಮುಗಿಯಿತು ಏಕದಿನ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರ್ತಿಪುರ್ (ನೇಪಾಳ): ಇಲ್ಲಿನ ತ್ರಿಭುವನ್‌ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಆತಿಥೇಯ ನೇಪಾಳ ಮತ್ತು ಯುಎಸ್ಎ ತಂಡಗಳ ನಡುವೆ ಏಕದಿನ ಪಂದ್ಯವು ಕೇವಲ 17.2ನೇ ಓವರ್‌ನಲ್ಲಿ ಮುಕ್ತಾಯವಾಯಿತು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಓವರ್‌ಗಳಲ್ಲಿ ಮುಕ್ತಾಯವಾದ ಪಂದ್ಯ ಎನಿಸಿಕೊಂಡಿತು.

ವಿಶ್ವಕಪ್‌ ಅರ್ಹತಾ ಸುತ್ತಿನ ಲೀಗ್‌ ಹಂತದ ಪಂದ್ಯ ಇದಾಗಿದ್ದು, ಟಾಸ್‌ ಗೆದ್ದ ನೇಪಾಳ ಯುಎಸ್‌ಎಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು.

ಇನಿಂಗ್ಸ್‌ ಆರಂಭಿಸಿದ ಯುಎಸ್‌ಎ ಕೇವಲ 35 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಕ್ಸೇವಿಯರ್ ಮಾರ್ಷಲ್‌ (16) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮನ್‌ ಎರಡಂಕಿ ಮುಟ್ಟಲಿಲ್ಲ. ಈ ತಂಡದ ನಾಲ್ವರು ಸೊನ್ನೆ ಸುತ್ತಿದರು. ನೇಪಾಳದ ಸಂದೀಪ್‌ ಲಾಮಿಚಾನೆ 16 ರನ್ ನೀಡಿ 6 ವಿಕೆಟ್‌ ಉರುಳಿಸಿದರು. ಸುಶಾನ್‌ ಭರಿ 5 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಎದುರಾಳಿ ತಂಡವನ್ನು ಕೇವಲ 12 ಓವರ್‌ಗಳಲ್ಲಿ ಕಟ್ಟಿ ಹಾಕಿದ ಶ್ರೇಯಕ್ಕೆ ನೇಪಾಳ ಭಾಜನವಾಯಿತು. ಯುಎಸ್‌ಎ ಗುರಿಯನ್ನು ನೇಪಾಳ ಕೇವಲ 5.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ತಲುಪಿತು.

ಅತಿ ಕಡಿಮೆ ಮೊತ್ತ
ಯುಎಸ್‌ಎ ಕಲೆಹಾಕಿದ ಮೊತ್ತ ಏಕದಿನ ಕ್ರಿಕೆಟ್‌ನ ಅತ್ಯಂತ ಕನಿಷ್ಠ ಮೊತ್ತ ಎನಿಸಿತು. ಈ ಹಿಂದೆ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ ತಂಡವೂ ಇಷ್ಟೇ ರನ್ ಗಳಿಸಿ ಆಲೌಟ್‌ ಆಗಿತ್ತು. ನಂತರ ಸ್ಥಾನಗಳಲ್ಲಿ ಕೆನಡಾ (36), ಜಿಂಬಾಬ್ವೆ (38) ಮತ್ತು ಶ್ರೀಲಂಕಾ (43) ತಂಡಗಳು ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು