ಶುಕ್ರವಾರ, ಮೇ 27, 2022
26 °C

ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನ: ಕಂಬನಿ ಮಿಡಿದ ಕ್ರಿಕೆಟ್‌ ಜಗತ್ತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

@Cricket Australia

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನಕ್ಕೆ ಸಹ ಆಟಗಾರರು, ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ಜಗತ್ತು ತೀವ್ರ ಆಘಾತ ವ್ಯಕ್ತಪಡಿಸಿದೆ. ಅಗಲಿದ ಮೆಚ್ಚಿನ ಆಟಗಾರನನ್ನು ನೆನೆದು ಸಂತಾಪ ವ್ಯಕ್ತಪಡಿಸಿದ್ದಾರೆ.

ಟೌನ್ಸ್‌ವಿಲ್ಲೆ ನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್‌ ಮೃತಪಟ್ಟಿದ್ದಾರೆ.

'ಇದು ನಿಜಕ್ಕೂ ಅತೀವ ನೋವನ್ನುಂಟು ಮಾಡಿದ ಸಂಗತಿ. ಅತ್ಯಂತ ಪ್ರಾಮಾಣಿಕ, ಹಾಸ್ಯಪ್ರಿಯ, ಪ್ರೀತಿಸುವ ಸ್ನೇಹಿತ, ನಿಮಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧನಿದ್ದವನ ಬಗ್ಗೆ ಯೋಚಿಸಿ. ಅದು ರಾಯ್‌' ಎಂದು ಸೈಮಂಡ್ಸ್‌ ಅವರ ಜೊತೆಯಾಟಗಾರ, ಆಸಿಸ್‌ ತಂಡದ ಮಾಜಿ ನಾಯಕ ಆ್ಯಡಂ ಗಿಲ್‌ಕ್ರಿಸ್ಟ್‌ ಭಾವುಕರಾಗಿ ಟ್ವೀಟ್‌ ಮಾಡಿದ್ದಾರೆ.

'ಘೋರ ಸುದ್ದಿ. ಅತ್ಯಂತ ಆಘಾತಕಾರಿ. ನಾವೆಲ್ಲರೂ ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಸ್ನೇಹಿತ' ಎಂದು ಜೇಸನ್‌ ಗಿಲೆಸ್ಪಿ ಟ್ವೀಟ್‌ ಮಾಡಿದ್ದಾರೆ.

'ಕ್ವೀನ್ಸ್‌ಲ್ಯಾಂಡ್‌ನ ಪ್ರೀತಿಯ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಅವರು 46ನೇ ವರ್ಷಕ್ಕೆ ಅಪಘಾತದಲ್ಲಿ ನಿಧನರಾಗಿದ್ದು ಅತ್ಯಂತ ಆಘಾತ ಮತ್ತು ನೋವನ್ನುಂಟು ಮಾಡಿದೆ' ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ.

'ಕಾರು ಅಪಘಾತದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್‌ ಅವರು ನಿಧನರಾದರು ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಗಣದೊಳಗೆ ಮತ್ತು ಹೊರಗೆ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೆವು. ಅವರ ಕುಟುಂಬದ ಪರವಾಗಿ ಪ್ರಾರ್ಥಿಸುತ್ತೇನೆ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್‌ ಅಕ್ತರ್‌ ಹೇಳಿದ್ದಾರೆ.

ಬೆಳಗ್ಗೆಯೇ ಆಘಾತಕಾರಿ ಸುದ್ದಿ ಎದುರಾಗಿದೆ. ನನ್ನ ಆತ್ಮೀಯ ಗೆಳಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.