ಮೊಹಾಲಿ: ಅನ್ಮೋಲ್‌ಪ್ರೀತ್ ಸಿಂಗ್ ಅವರ ಶತಕ ಹಾಗೂ ಎಡಗೈ ವೇಗಿ ಆರ್ಷದೀಪ್ ಸಿಂಗ್ ಅಮೋಘ ಬೌಲಿಂಗ್‌ನಿಂದ ಪಂಜಾಬ್ ತಂಡವು ಇದೇ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿ ಗೆದ್ದುಕೊಂಡಿತು.
ಸೋಮವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ತಂಡವು 20 ರನ್‌ಗಳಿಂದ ಬರೋಡಾ ತಂಡವನ್ನು ಪರಾಭವಗೊಳಿಸಿತು.
ಟಾಸ್ ಗೆದ್ದ ಬರೋಡಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನ್ಮೋಲ್‌ಪ್ರೀತ್ ಸಿಂಗ್ ಮಿಂಚಿನ ಶತಕ (113; 61ಎಸೆತ) ದಾಖಲಿಸಿದರು. 10 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಅವರು ಸಿಡಿಸಿದರು. ನೆಹಲ್ ವಡೇರಾ (ಔಟಾಗದೆ 61; 27ಎ, 4X6, 6X4) ಕೂಡ ಅರ್ಧಶತಕದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿತು.
ಸವಾಲಿನ ಮೊತ್ತ ಬೆನ್ನಟ್ಟಿದ ಬರೋಡಾ ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 203 ರನ್ ಗಳಿಸಲಷ್ಟೇ ಸಾಧ್ಯವಾಯಿತು. ತಂಡದ ಬ್ಯಾಟರ್ ಅಭಿಮನ್ಯು ಸಿಂಗ್ (61; 42ಎ, 4X3, 6X4) ಅರ್ಧಶತಕ ಗಳಿಸಿದರು.
ಪಂಜಾಬ್ ತಂಡದ ಎಡಗೈ ವೇಗಿ ಆರ್ಷದೀಪ್ ಸಿಂಗ್ (23ಕ್ಕೆ4) ಅಮೋಘ ಬೌಲಿಂಗ್ ಮಾಡಿದರು. ಪಂದ್ಯದ ಕೊನೆಯ ಎರಡು ಓವರ್‌ಗಳಲ್ಲಿ ಬರೋಡಾ ತಂಡವು ಜಯದತ್ತ ಸಾಗಿದ್ದ ಸಂದರ್ಭದಲ್ಲಿಯೇ ಆರ್ಷದೀಪ್ ಕೈಚಳಕ ಮೆರೆದರು. 19ನೇ ಓವರ್‌ನಲ್ಲಿಯೇ ಅವರು ಮೂರು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಪಂಜಾಬ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 (ಅನ್ಮೋಲ್‌ಪ್ರೀತ್ ಸಿಂಗ್ 113, ಮನದೀಪ್ ಸಿಂಗ್ 32, ನೇಹಲ್ ವಡೇರಾ ಔಟಾಗದೆ 61, ಸೊಯೆಬ್ ಸೊಪಾರಿಯೊ 43ಕ್ಕೆ1, ಕೃಣಾಲ್ ಪಾಂಡ್ಯ 30ಕ್ಕೆ1, ಅತಿಥ್ ಶೇಟ್ 56ಕ್ಕೆ1) ಬರೋಡಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 203 (ನಿನಾದ್ ರಥ್ವಾ 47, ಅಭಿಮನ್ಯು ಸಿಂಗ್ 61, ಕೃಣಾಲ್ ಪಾಂಡ್ಯ 45, ವಿಷ್ಣು ಸೋಳಂಕಿ 28, ಆರ್ಷದೀಪ್ ಸಿಂಗ್ 23ಕ್ಕೆ4, ಸಿದ್ಧಾರ್ಥ್ ಕೌಲ್ 53ಕ್ಕೆ1) ಫಲಿತಾಂಶ: ಪಂಜಾಬ್ ತಂಡಕ್ಕೆ 20 ರನ್‌ಗಳ ಜಯ. ಪಂದ್ಯಶ್ರೇಷ್ಠ: ಅನ್ಮೋಲ್‌ಪ್ರೀತ್ ಸಿಂಗ್, ಸರಣಿಶ್ರೇಷ್ಠ: ಅಭಿಷೇಕ್ ಶರ್ಮಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.