ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್‌: ಸಿಂಧು ಸವಾಲು ಅಂತ್ಯ

Published 14 ಅಕ್ಟೋಬರ್ 2023, 13:14 IST
Last Updated 14 ಅಕ್ಟೋಬರ್ 2023, 13:14 IST
ಅಕ್ಷರ ಗಾತ್ರ

ವಾಂತಾ (ಫಿನ್ಲೆಂಡ್‌), (ಪಿಟಿಐ): ಭಾರತದ ಪಿ.ವಿ.ಸಿಂಧು ಅವರು ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.

ಎಂಟನೇ ಶ್ರೇಯಾಂಕ ಹೊಂದಿದ್ದ ಸಿಂಧು ಶನಿವಾರ ನಡೆದ ಪಂದ್ಯದಲ್ಲಿ 12–21, 21–11, 7–21 ರಿಂದ ಚೀನಾದ ವಾಂಗ್‌ ಝಿ ಯಿ ಎದುರು ಪರಾಭವಗೊಂಡರು. ಐದನೇ ಶ್ರೇಯಾಂಕದ ವಾಂಗ್‌ 1 ಗಂಟೆ 3 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು, ಶುಕ್ರವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ 20-22, 22-20, 21-18 ರಿಂದ ವಿಯೆಟ್ನಾಂನ ಥುಯಿ ಲಿನ್‌ ಎನ್‌ಗುಯೆನ್ ವಿರುದ್ಧ ರೋಚಕ ಜಯ ಸಾಧಿಸಿದ್ದರು.

ಭಾರತದ ಆಟಗಾರ್ತಿ ಈ ಋತುವಿನಲ್ಲಿ ಬಿಡಬ್ಲ್ಯುಎಫ್‌ ವಿಶ್ವಟೂರ್‌ನ ನಾಲ್ಕು ಟೂರ್ನಿಗಳಲ್ಲಿ ಸೆಮಿ ಪ್ರವೇಶಿಸಿದ್ದಾರೆ. ಈ ಹಿಂದೆ ಸ್ಪೇನ್‌ ಮಾಸ್ಟರ್ಸ್‌, ಮಲೇಷ್ಯಾ ಮಾಸ್ಟರ್ಸ್‌ ಮತ್ತು ಕೆನಡಾ ಓಪನ್‌ ಟೂರ್ನಿಗಳಲ್ಲಿ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT