ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ ತರಬೇತುದಾರರಿಗೆ ಅರುಣ್‌ಲಾಲ್‌ ಆನ್‌ಲೈನ್ ಕೋಚಿಂಗ್

Last Updated 8 ಜೂನ್ 2020, 6:18 IST
ಅಕ್ಷರ ಗಾತ್ರ

ಕೋಲ್ಕತ್ತ: ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಅವರು ಜಾರ್ಖಂಡ್ ರಾಜ್ಯದ ತರಬೇತುದಾರರಿಗೆ ಆನ್‌ಲೈನ್‌ ತರಬೇತಿ ನೀಡುತ್ತಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಗಾಗಿ ಲಾಕ್‌ಡೌನ್ ವಿಧಿಸಿರುವುದರಿಂದ ತಮ್ಮ ನೆರೆಯ ಜಾರ್ಖಂಡ್ ರಾಜ್ಯದ ತರಬೇತುದಾರರಿಗೆ ಮಾರ್ಗದರ್ಶನ ನೀಡಲು ಬಂಗಾಳ ಕ್ರಿಕೆಟ್ ಸಂಸ್ಥೆಯು ಈ ಕಾರ್ಯಕ್ಕೆ ಚಾಲನೆ ನೀಡಿದೆ. ಅದರ ನೇತೃತ್ವವನ್ನು ಲಾಲ್ ವಹಿಸಿಕೊಂಡಿದ್ದಾರೆ.

ವಿವಿಧ ವಯೋಮಿತಿಯ ಕ್ರಿಕೆಟ್‌ ತಂಡಗಳ ಕೋಚ್‌ಗಳಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕಾರ್ಯದರ್ಶಿ ಸಂಜಯ್ ಸಹಾಯ್ ಅವರೂ ಲಾಲ್ ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಲಾಲ್ ಅವರನ್ನು ಪರಿಣತ ಉಪನ್ಯಾಸಕರನ್ನಾಗಿ ನೇಮಿಸಬೇಕೆಂದು ಜೆಎಸ್‌ಸಿಎ ಮನವಿ ಮಾಡಿತ್ತು. ಜಾರ್ಖಂಡ್‌ನ ಕೋಚ್‌ ಮತ್ತು ಟ್ರೇನರ್‌ಗಳಿಗೆ ಡಿಜಿಟಲ್ ತಾಣದ ಮೂಲಕ ತರಗತಿಗಳನ್ನು ನಡೆಸಿಕೊಡಲಾಗುತ್ತಿದೆ. ನಮ್ಮ ಸಂಸ್ಥೆಯು ಪಕ್ಕದ ರಾಜ್ಯಗಳೊಂದಿಗೆ ಸದಾ ಉತ್ತಮ ಬಾಂಧವ್ಯ ಹೊಂದಿದೆ. ಅಗತ್ಯವಿದ್ದಾಗಲೆಲ್ಲ ನೆರವು ನೀಡಲಾಗಿದೆ. ಆದ್ದರಿಂದ ಈ ಯೋಜನೆಯನ್ನೂ ಕಾರ್ಯಗತಗೊಳಿಸಿದ್ದೇವೆ. ಇದರಿಂದ ಬಹಳಷ್ಟು ಪ್ರಯೋಜನವಾಗಿದೆಯೆಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ.

‘ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೆ ಸೂಕ್ತವಾಗುವ ವಿಭಾಗದಲ್ಲಿ ಬೆಳೆಯಲು ಅವಕಾಶ ಮಾಡಿಕೊಡುವ ವಿಧಾನಗಳನ್ನು ಕಲಿಸಲಾಗುತ್ತಿದೆ. ತಮ್ಮ ತಂಡದೊಳಗಿನ ಎಲ್ಲ ಆಟಗಾರರ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಅಭ್ಯಾಸ ಮಾಡಿ ಅದನ್ನು ಪಂದ್ಯಗಳಲ್ಲಿ ದುಡಿಸಿಕೊಳ್ಳುವ ಬಗೆಯನ್ನು ತರಬೇತುದಾರರಿಗೆ ಸಾಧ್ಯಂತವಾಗಿ ತಿಳಿಸಲಾಗಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರೆಲ್ಲರೂ ಬಹಳ ಆಸಕ್ತಿಯಿಂದ ಭಾಗವಹಿಸಿದ್ದಾರೆ. ನನ್ನ ಅನುಭವದ ಆಧಾರದಲ್ಲಿ ಅವರಿಗೆ ಮಾರ್ಗದರ್ಶನ ನೀಡಿದ್ದೇನೆ’ ಎಂದು ಅರುಣ್ ಲಾಲ್ ಹೇಳಿದ್ದಾರೆ.

‘ಈ ತರಗತಿಗಳು ಉತ್ತಮವಾದ ಸಂವಾದಗಳಾಗಿವೆ. ಇಂತಹ ಚರ್ಚೆಗಳು ಮತ್ತು ವಿಚಾರ ವಿನಿಮಯವು ಉತ್ತಮ ಭವಿಷ್ಯಕ್ಕಾಗಿ ಅನುಕೂಲ. ಈಗ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಒಂದಿಲ್ಲೊಂದು ಹಂತದಲ್ಲಿ ಈ ವಿಚಾರಗಳು ಉಪಯುಕ್ತವಾಗುತ್ತವೆ’ ಎಂದು 64 ವರ್ಷದ ಲಾಲ್ ಹೇಳಿದ್ದಾರೆ.

ಲಾಲ್ ಭಾರತ ತಂಡದಲ್ಲಿ 16 ಟೆಸ್ಟ್ ಮತ್ತು 13 ಏಕದಿನ ಪಂದ್ಯಗಳನ್ನು ಆಡಿದ್ದರು. ಕೆಲವು ವರ್ಷಗಳಿಂದ ಬಂಗಾಳ ತಂಡದ ಕೋಚ್ ಆಗಿದ್ದು, ಹೋದ ವರ್ಷ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT