ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20: ಬಾಂಗ್ಲಾ ವಿರುದ್ಧ ಸರಣಿಗೆ ಆಶಾ, ಸಜನಾ

Published 15 ಏಪ್ರಿಲ್ 2024, 16:32 IST
Last Updated 15 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್) ನಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪಿನ್ನರ್ ಆಶಾ ಶೋಭನಾ ಮತ್ತು ಬ್ಯಾಟರ್ ಸಜೀವನ್ ಸಜನಾ ಅವರು ಏಪ್ರಿಲ್ 28ರಿಂದ ನಡೆಯುವ ಬಾಂಗ್ಲಾದೇಶ ವಿರುದ್ಧದ ಐದು ಟಿ20 ಪಂದ್ಯಗಳಿಗೆ ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

ಲೆಗ್ ಸ್ಪಿನ್ನರ್ ಶೋಭನಾ ಅವರು ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿಯ ವಿಜಯದ ಅಭಿಯಾನದಲ್ಲಿ 10 ಪಂದ್ಯಗಳಲ್ಲಿ 15.42 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದರು.

ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸಜೀವನ್, ಇತ್ತೀಚೆಗೆ ಪುಣೆಯಲ್ಲಿ ಮುಕ್ತಾಯಗೊಂಡ ಅಂತರ ವಲಯ ರೆಡ್ ಬಾಲ್ ಟೂರ್ನಿಯ  ಸೆಮಿಫೈನಲ್‌ನಲ್ಲಿ 74 ರನ್ ಗಳಿಸಿದ್ದರು. ಅವರು ಆಫ್ ಸ್ಪಿನ್ನರ್ ಕೂಡ ಆಗಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲಾ ಐದು ಪಂದ್ಯಗಳು ಸಿಲೆಟ್‌ನಲ್ಲಿ ನಡೆಯಲಿವೆ. 

ಆರ್‌ಸಿಬಿಯ ಶ್ರೇಯಂಕಾ ಪಾಟೀಲ್ ಕೂಡ ತಂಡದ ಭಾಗವಾಗಿದ್ದರೆ, ಹೇಮಲತಾ ದಯಾಳನ್ ಅವರು ತಂಡಕ್ಕೆ ಮರಳಿದ್ದಾರೆ. ರೇಣುಕಾ ಸಿಂಗ್ ಠಾಕೂರ್,  ಟಿಟಾಸ್ ಸಾಧು ಮತ್ತು ಪೂಜಾ ವಸ್ತ್ರಾಕರ್ ತಂಡದಲ್ಲಿ ವೇಗಿಗಳಾಗಿದ್ದಾರೆ. ಎಡಗೈ ಸ್ಪಿನ್ನರ್ ಸೈಕಾ ಇಶಾಕ್ ಕೂಡ ತಂಡದ ಭಾಗವಾಗಿದ್ದಾರೆ.  

ಏಪ್ರಿಲ್ 28, ಏಪ್ರಿಲ್ 30, ಮೇ 2, ಮೇ 6 ಮತ್ತು ಮೇ 9 ರಂದು ಪಂದ್ಯಗಳು ನಡೆಯಲಿವೆ.

ಟಿ20 ಪಂದ್ಯಗಳಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದಯಾಳನ್ ಹೇಮಲತಾ, ಸಜೀವನ್ ಸಜನಾ, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಶ್ರೇಯಂಕಾ ಪಾಟೀಲ್, ಸೈಕಾ ಇಶಾಕ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT