ಅಬುಧಾಬಿ: ವೇಗಿ ನುವಾನ್ ತುಷಾರ (18ಕ್ಕೆ 4) ಅವರ ಪರಿಣಾಮ ಕಾರಿ ಬೌಲಿಂಗ್ ಬಳಿಕ ಕುಶಾಲ್ ಮೆಂಡಿಸ್ (ಔಟಾಗದೇ 74;52ಎ, 4x10) ಅವರ ಅರ್ಧಶತಕದ ಬಲದಿಂದ ಶ್ರೀಲಂಕಾ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿತು.

ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಲಂಕಾ ಪಡೆ ಆರು ವಿಕೆಟ್ಗಳಿಂದ ಅಫ್ಗಾನಿಸ್ತಾನ ತಂಡವನ್ನು ಮಣಿಸಿತು. ಗುಂಪಿನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೂಪರ್ ಫೋರ್ ಹಂತಕ್ಕೆ ಮುನ್ನಡೆದವು. ಮೂರನೇ ಸ್ಥಾನ ಪಡೆದ ಅಫ್ಗನ್ ತಂಡವು ಟೂರ್ನಿಯಿಂದ ಹೊರಬಿತ್ತು.

ಅಫ್ಗನ್ ತಂಡವು ನೀಡಿದ್ದ 170 ರನ್ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಲಂಕಾ ತಂಡಕ್ಕೆ ಆರಂಭಿಕ ಆಟಗಾರ ಮೆಂಡಿಸ್ ಆಸರೆಯಾದರು. ಒಂದೆಡೆ ನಿಯಮಿತವಾಗಿ ವಿಕೆಟ್ ಉರುಳುತ್ತಿ ದ್ದರೂ ಅವರು ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಎಂಟು ಎಸೆತ ಗಳು ಬಾಕಿ ಇರುವಂತೆ ಲಂಕಾ ತಂಡ 4 ವಿಕೆಟ್ಗೆ 171 ರನ್ ಗಳಿಸಿ ಸಂಭ್ರಮಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಅಫ್ಗನ್ ತಂಡವು ಮೊಹಮ್ಮದ್ ನಬಿ (60, 22ಎ, 4x3, 6x6) ಅವರ ಬೀಸಾಟದ ನೆರವಿನಿಂದ 8 ವಿಕೆಟ್ಗೆ 169 ರನ್ ಗಳಿಸಿತು. ಒಂದು ಹಂತದಲ್ಲಿ ರಶೀದ್ ಖಾನ್ ಬಳಗ 18 ಓವರುಗಳ ನಂತರ 7 ವಿಕೆಟ್ಗೆ 120 ರನ್ ಗಳಿಸಿತ್ತು. ಆದರೆ ಅಫ್ಗನ್ ಪಡೆ ಕೊನೆಯ ಎರಡು ಓವರುಗಳಲ್ಲಿ 49 ರನ್ ಸೂರೆಮಾಡಿತು. ಇದರಲ್ಲಿ ನಬಿ ಪಾಲು 45 ರನ್!.

ಚಮೀರ (50ಕ್ಕೆ1) ಮಾಡಿದ 19ನೇ ಓವರಿನಲ್ಲಿ ಸತತ ಮೂರು ಬೌಂಡರಿ ಬಾರಿಸಿದ ನಬಿ, ವೆಲ್ಲಾಳಗೆ (49ಕ್ಕೆ1) ಮಾಡಿದ ಅಂತಿಮ ಓವರಿನಲ್ಲಿ ಐದು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 170ರ ಸಮೀಪ ತಲುಪಿಸಿದರು.

ಸಂಕ್ಷಿಪ್ತ ಸ್ಕೋರು

ಅಫ್ಗಾನಿಸ್ತಾನ: 20 ಓವರುಗಳಲ್ಲಿ 8ಕ್ಕೆ 169 (ಇಬ್ರಾಹಿಂ ಜದ್ರಾನ್ 24, ಮೊಹಮ್ಮದ್ ನಬಿ 60, ರಷೀದ್ ಖಾನ್ 24; ನುವಾನ್ ತುಷಾರ 18ಕ್ಕೆ4)

ಶ್ರೀಲಂಕಾ: 18.4 ಓವರ್ಗಳಲ್ಲಿ 4 ವಿಕೆಟ್ಗೆ 171 (ಕುಶಾಲ್ ಮೆಂಡಿಸ್ ಔಟಾಗದೇ 74, ಕುಶಾಲ್ ಪೆರೇರಾ 28; ಅಜ್ಮತ್ವುಲ್ಲಾ ಒಮರ್ಜೈ 10ಕ್ಕೆ 1).

ಫಲಿತಾಂಶ: ಶ್ರೀಲಂಕಾಕ್ಕೆ 6 ವಿಕೆಟ್ಗಳ ಜಯ.

ಪಂದ್ಯದ ಆಟಗಾರ: ಕುಶಾಲ್ ಮೆಂಡಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.