ದುಬೈ: ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಪಾಕಿಸ್ತಾನ ತಂಡವು ಬುಧವಾರ ಏಷ್ಯಾ ಕಪ್ ಎ ಗುಂಪಿನ ಪಂದ್ಯದಲ್ಲಿ 41 ರನ್ಗಳಿಂದ ಯುಎಇ ತಂಡವನ್ನು ಮಣಿಸಿತು. ಅದರೊಂದಿಗೆ ಸೂಪರ್ ಫೋರ್ ಹಂತಕ್ಕೂ ಪ್ರವೇಶ ಪಡೆಯಿತು.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡವು ವೇಗಿ ಜುನೈದ್ ಸಿದ್ದೀಕ್ (18ಕ್ಕೆ4) ಹಾಗೂ ಭಾರತ ಮೂಲದ ಸ್ಪಿನ್ನರ್ ಸಿಮ್ರನ್ಜೀತ್ ಸಿಂಗ್ (26ಕ್ಕೆ3) ಪರಿಣಾಮಕಾರಿ ಬೌಲಿಂಗ್ ದಾಳಿಯಿಂದಾಗಿ 146 ರನ್ ಗಳಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಅನನುಭವಿ ಯುಎಇ ತಂಡವು ಪಾಕಿಸ್ತಾನದ ಸಂಘಟಿತ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲವಾಯಿತು. ವಿಕೆಟ್ ಕೀಪರ್ ರಾಹುಲ್ ಚೋಪ್ರಾ (35; 35ಎ) ಹೊರತುಪಡಿಸಿದರೆ, ಉಳಿದ್ಯಾವ ಬ್ಯಾಟರ್ಗಳೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹೀಗಾಗಿ, ಯುಎಇ 17.4 ಓವರ್ಗಳಲ್ಲಿ 105 ರನ್ಗಳಿಗೆ ಆಲೌಟ್ ಆಯಿತು.

ಬ್ಯಾಟಿಂಗ್ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದ ಶಾಹೀನ್ ಅಫ್ರಿದಿ (29 ರನ್ ಹಾಗೂ 16ಕ್ಕೆ2) ಅವರು ಬೌಲಿಂಗ್ನಲ್ಲೂ ಮಿಂಚಿದರು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಫಖರ್ ಜಮಾನ್ (50; 36) ಅವರು ನಾಯಕ ಸಲ್ಮಾನ್ ಆಘಾ(20; 27ಎ) ಜೊತೆಗೆ ನಾಲ್ಕನೇ ವಿಕೆಟ್ಗೆ 61 ರನ್ ಜತೆಯಾಟವಾಡಿ ಆಸರೆಯಾಗಿದ್ದರು. 18.5 ಓವರ್ಗಳಲ್ಲಿ 128 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ ಅವರು (29; 14ಎ) ಕೊನೆಯ ಓವರ್ನಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಸಹಿತ 18 ರನ್ ಸಿಡಿಸಿ, ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರು

ಪಾಕಿಸ್ತಾನ: 20 ಓವರ್ಗಳಲ್ಲಿ 9 ವಿಕೆಟ್ಗೆ 146 (ಫಖರ್ ಜಮಾನ್ 50, ಶಾಹೀನ್ ಅಫ್ರಿದಿ 29; ಜುನೈದ್ ಸಿದ್ದೀಕ್ 18ಕ್ಕೆ4, ಸಿಮ್ರನ್ಜೀತ್ ಸಿಂಗ್ 26ಕ್ಕೆ3)

ಯುಎಇ: 17.4 ಓವರ್ಗಳಲ್ಲಿ 105 (ರಾಹುಲ್ ಚೋಪ್ರಾ 35, ಶಾಹೀನ್ ಅಫ್ರಿದಿ 16ಕ್ಕೆ2, ಹ್ಯಾರಿಸ್ ರವೂಫ್ 19ಕ್ಕೆ2, ಅಬ್ರಾರ್ ಅಹಮದ್ 13ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.