ಬೆಂಗಳೂರು: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ನಡುವಣ ‘ಸ್ನೇಹ’ದ ಕುರಿತು ಈಗಾಗಲೇ ಬಹಳಷ್ಟು ಸುದ್ದಿಯಾಗಿದೆ. ಇವರಿಬ್ಬರೂ ಪ್ರೇಮಿಸುತ್ತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿಯೂ ಸುದ್ದಿಯಾಗಿತ್ತು. ಇದಕ್ಕೆ, ಅಥಿಯಾ ಹಾಗೂ ರಾಹುಲ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಫೋಟೊಗಳೂ ಪುಷ್ಟಿ ನೀಡಿದ್ದವು.

ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳಿಗೆ ಇದೀಗ ಮತ್ತೊಂದು ಪುರಾವೆ ದೊರೆತಿದೆ. ರಾಹುಲ್ ಹುಟ್ಟುಹಬ್ಬದ ನಿಮಿತ್ತ ಇನ್ಸ್ಟಾಗ್ರಾಂನಲ್ಲಿ ತಾವಿಬ್ಬರೂ ಜತೆಯಾಗಿರುವ ಫೋಟೊವೊಂದನ್ನು ಶೇರ್ ಮಾಡಿರುವ ಅಥಿಯಾ, ‘ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಅಥಿಯಾ ಸಂದೇಶ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 3 ಲಕ್ಷ ಜನ ಲೈಕ್ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

2019ರಲ್ಲಿ ಅಥಿಯಾ ಶೆಟ್ಟಿ ಹುಟ್ಟುಹಬ್ಬಕ್ಕೆ ತಾವಿಬ್ಬರು ಕೆಫೆಯೊಂದರಲ್ಲಿ ಜೊತೆಗಿರುವ ಪೋಟೊ ಹಂಚಿಕೊಳ್ಳುವ ಮೂಲಕ ರಾಹುಲ್ ಶುಭಾಶಯ ಕೋರಿದ್ದರು. 2020ರ ಜನವರಿಯಲ್ಲಿ ರಾಹುಲ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದಕ್ಕೆ ಅಥಿಯಾ ಅವರೇ ‘ಹೃದಯ’ ಗುರುತಿನ ಎಮೊಜಿ ಮೂಲಕ ಪ್ರತಿಕ್ರಿಯಿಸಿದ್ದು ಭಾರಿ ಸುದ್ದಿಯಾಗಿತ್ತು. ಈ ಚಿತ್ರಕ್ಕೆ ಅಥಿಯಾ ತಂದೆ ಸುನೀಲ್ ಶೆಟ್ಟಿಯವರೂ ನಗುವ ಎಮೊಜಿ ಮೂಲಕ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.