ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs NZ | ನ್ಯೂಜಿಲೆಂಡ್–ಆಸ್ಟ್ರೇಲಿಯಾ ಟೆಸ್ಟ್ ಬಳಿಕ ಅಂಪೈರ್ ಎರಾಸ್ಮಸ್ ವಿದಾಯ

Published 7 ಮಾರ್ಚ್ 2024, 13:18 IST
Last Updated 8 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ದುಬೈ: ದಕ್ಷಿಣ ಆಫ್ರಿಕದ ಅಂಪೈರ್‌ ಮರಾಯಸ್ ಎರಾಸ್ಮಸ್ ಅವರು ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರ ಆರಂಭವಾಗುವ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ನಂತರ ನಿವೃತ್ತರಾಗಲಿದ್ದಾರೆ.

60 ವರ್ಷದ ಎರಾಸ್ಮಸ್‌ ಅವರು ಎಮಿರೇಟ್ಸ್‌ ಐಸಿಸಿ ಎಲೈಟ್‌ ಅಂಪೈರ್‌ಗಳ ಪಾನೆಲ್‌ನಿಂದ ನಿವೃತ್ತರಾಗುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದರು. ಪ್ರಥಮ ದರ್ಜೆ ಮಾಜಿ ಕ್ರಿಕೆಟರ್‌ ಆಗಿರುವ ಎರಾಸ್ಮಸ್‌ 2010ರಲ್ಲಿ ಮೊದಲ ಬಾರಿ ಎಲೈಟ್‌ ಪಾನೆಲ್‌ಗೆ ನೇಮಕಗೊಂಡಿದ್ದರು.

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಅವರ ಪಾಲಿಗೆ ಅಂಪೈರ್‌ ಆಗಿ 82ನೇ ಪಂದ್ಯವಾಗಿದೆ. ಅವರು ಒಟ್ಟು 380 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್‌ ಆಗಿದ್ದಾರೆ. ಇದರಲ್ಲಿ 131 ಪಂದ್ಯಗಳಲ್ಲಿ ಟಿವಿ ಅಂಪೈರ್ ಆಗಿದ್ದರು. ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದವರಲ್ಲಿ ಅವರು 10ನೇ ಸ್ಥಾನದಲ್ಲಿದ್ದಾರೆ.

‘ಐಸಿಸಿ ವರ್ಷದ ಅಂಪೈರ್‌’ ಗೌರವಕ್ಕೆ ಅವರು ಮೂರು ಬಾರಿ (2016, 2017 ಮತ್ತು 2021) ಪಾತ್ರರಾಗಿ ಡೇವಿಡ್‌ ಶೆಫರ್ಡ್ ಟ್ರೋಫಿ ಪಡೆದಿದ್ದಾರೆ. ನಾಲ್ಕು ಏಕದಿನ ವಿಶ್ವಕಪ್‌ಗಳಲ್ಲಿ (2011, 1015, 2019 ಮತ್ತು 2023), ಏಳು ಟಿ20 ವಿಶ್ವಕಪ್‌ಗಳಲ್ಲಿ ಮತ್ತು ಎರಡು ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಅವರು ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನಲ್ಲೂ ಮೂರು ಬಾರಿ (2010, 2012, 2014) ಅಂಪೈರ್ ಆಗಿದ್ದಾರೆ.

2019ರಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಾಟಕೀಯ ಅಂತ್ಯ ಕಂಡ ಏಕದಿನ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಅವರು ಆನ್‌ಫೀಲ್ಡ್ ಅಂಪೈರ್‌ ಆಗಿದ್ದರು. ಪಂದ್ಯ ಟೈ ಆಗಿ ಬೌಂಡರಿ ಕೌಂಟ್‌ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT