ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ಐಪಿಎಲ್‌ನಲ್ಲಿ ವೇಗವಾಗಿ 5 ಸಾವಿರ ರನ್‌ ಕಲೆಹಾಕಿದ ವಾರ್ನರ್

Last Updated 18 ಅಕ್ಟೋಬರ್ 2020, 13:43 IST
ಅಕ್ಷರ ಗಾತ್ರ

ಅಬುಧಾಬಿ:ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್‌, ಇಂದು ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 10 ರನ್‌ ಗಳಿಸಿದ್ದ ವೇಳೆ ಐದು ಸಾವಿರ ರನ್‌ ಕಲೆಹಾಕಿದ ಸಾಧನೆ ಮಾಡಿದರು.

ವಾರ್ನರ್‌ಗೆ ಐಪಿಎಲ್‌ನಲ್ಲಿ ಇದು 135ನೇ ಪಂದ್ಯ. ಹೀಗಾಗಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ಶ್ರೇಯವೂ ಅವರದ್ದಾಯಿತು. ಮಾತ್ರವಲ್ಲದೆ ಟೂರ್ನಿಯಲ್ಲಿ ಇದುವರೆಗೆ ವಾರ್ನರ್‌ ಹೊರತುಪಡಿಸಿ ಬೇರಾವವಿದೇಶಿ ಆಟಗಾರನೂ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.

ಈ ಮೊದಲು ಭಾರತದ ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ ಮತ್ತು ರೋಹಿತ್‌ ಶರ್ಮಾ 5 ಸಾವಿರ ರನ್ ಗಳಿಸಿಕೊಂಡಿದ್ದರು. ಕೊಹ್ಲಿ ತಮ್ಮ 165ನೇ ಇನಿಂಗ್ಸ್‌ನಲ್ಲಿ, ರೋಹಿತ್‌ 177ನೇ ಇನಿಂಗ್ಸ್ ಹಾಗೂ ರೋಹಿತ್‌ ಶರ್ಮಾ 192ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT