ಬುಧವಾರ, ಜೂನ್ 29, 2022
27 °C

ಟೆಸ್ಟ್‌ ಕ್ರಿಕೆಟ್: ರಹೀಂ, ಲಿಟನ್ ಶತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಮುಷ್ಫಿಕುರ್ ರಹೀಮ್ ಮತ್ತು ಲಿಟನ್ ದಾಸ್ ಗಳಿಸಿದ ಶತಕಗಳ ಬಲದಿಂದ ಬಾಂಗ್ಲಾದೇಶ ತಂಡವು ಸೋಮವಾರ ಇಲ್ಲಿ ಆರಂಭವಾದ  ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.

ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಂಕಾದ ಬೌಲರ್ ಕಸುನ್ ರಜೀತಾ  ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಮೆಹಮುದುಲ್ಲಾ ಹಸನ್ ಜಾಯ್ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಎರಡನೇ ಓವರ್‌ನಲ್ಲಿ ಅಸಿತಾ ಫರ್ನಾಂಡೊ ಎಸೆತದಲ್ಲಿ ತಮಿಮ್ ಇಕ್ಬಾಲ್ ಔಟಾದರು. ಇಬ್ಬರೂ ಆರಂಭಿಕರು ಖಾತೆ ತೆರೆಯಲಿಲ್ಲ. ನಜ್ಮುಲ್ ಹುಸೇನ್ ಮತ್ತು ನಾಯಕ ಮೊಮಿನುಲ್ ಹಕ್ ಕೂಡ ಒಂದಂಕಿ ಗಳಿಸಿದರು. ಶಕೀಬ್ ಅಲ್ ಹಸನ್ ಸೊನ್ನೆ ಸುತ್ತಿದರು.  ಇದರಿಂದಾಗಿ ತಂಡವು 24 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ರಹೀಮ್ (ಬ್ಯಾಟಿಂಗ್ 115; 252ಎ, 4X13) ಮತ್ತು ದಾಸ್ (ಬ್ಯಾಟಿಂಗ್ 135; 221ಎ, 4X16, 6X1) ಮುರಿಯದ  ಆರನೇ ವಿಕೆಟ್ ಜೊತೆಯಾಟದಲ್ಲಿ 253 ರನ್‌ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಬಾಂಗ್ಲಾದೇಶ;
85 ಓವರ್‌ಗಳಲ್ಲಿ 5ಕ್ಕೆ277 (ಮುಷ್ಫಿಕುರ್ ರಹೀಮ್ ಬ್ಯಾಟಿಂಗ್ 115, ಲಿಟನ್ ದಾಸ್ ಬ್ಯಾಟಿಂಗ್ 135, ಕಸುನ್ ರಜಿತಾ 43ಕ್ಕೆ3, ಅಶಿತಾ ಫರ್ನಾಂಡೊ 80ಕ್ಕೆ2) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು