Ind vs Ban: ಪಿಂಕ್ ಬಾಲ್ ಟೆಸ್ಟ್ , ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ

ಕೋಲ್ಕತ್ತ: ಕ್ರಿಕೆಟ್ ಲೋಕದ ಕಣ್ಣುಗಳು ಈಗ ಈಡನ್ ಗಾರ್ಡನ್ನತ್ತ ನೆಟ್ಟಿವೆ. ಇಲ್ಲಿ ನಡೆಯುತ್ತಿರುವ ಹಗಲು–ರಾತ್ರಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾ ದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತದ ನೆಲದಲ್ಲಿ ನಡೆಯಲಿರುವ ಪ್ರಪ್ರಥಮ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
1934ರಿಂದ 2017ರವರೆಗೆ ಇಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಹಲವಾರು ಮಹತ್ವದ ದಾಖಲೆಗಳು ಕ್ರಿಕೆಟ್ ಇತಿಹಾಸದ ಪುಸ್ತಕಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿವೆ. ಇಂದು ಆರಂಭವಾದ ಟೆಸ್ಟ್ ಪಂದ್ಯ ಹೊಸ ಅಧ್ಯಾಯವಾಗಿ ಸೇರ್ಪಡೆಯಾಯಿತು.
ಭಾರತ ಮತ್ತು ಬಾಂಗ್ಲಾದೇಶ ತಂಡಗಳಿಗೆ ಇದು ಮೊದಲ ಹಗಲು–ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಇದೊಂದೇ ವಿಷಯದಲ್ಲಿ ಉಭಯ ತಂಡಗಳು ಸಮಬಲಶಾಲಿಗಳು. ಆದರೆ. ಆಟಗಾರರ ಸಾಮರ್ಥ್ಯ, ಅನುಭವ ಮತ್ತು ಆತ್ಮವಿಶ್ವಾಸದಲ್ಲಿ ಭಾರತವೇ ಫೆವರಿಟ್ ಆಗಿದೆ.
Bangladesh have won the toss and will bat first in the #PinkBallTest @Paytm #INDvBAN pic.twitter.com/LCTkWZ6bKM
— BCCI (@BCCI) November 22, 2019
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್ಕೀಪರ್), ಆರ್. ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ,
ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಶಾದಮನ್ ಇಸ್ಲಾಂ, ಇಮ್ರುಲ್ ಕಯಸ್, ಮುಷ್ಫಿಕುರ್ ರಹೀಮ್, ಮಹಮುದುಲ್ಲಾ. ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿಕೆಟ್ಕೀಪರ್), ನಯೀಮ್ ಹಸನ್, ಅಬು ಜಯದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್.
ಅಂಪೈರ್: ಮರಾಯಿಸ್ ಎರಸ್ಮಸ್ (ದಕ್ಷಿಣ ಆಫ್ರಿಕಾ), ರಾಡ್ ಟಕ್ಕರ್ (ಆಸ್ಟ್ರೇಲಿಯಾ), ಟಿ.ವಿ. ಅಂಪೈರ್: ಜೋಲ್ ವಿಲ್ಸನ್(ವೆಸ್ಟ್ ಇಂಡೀಸ್), ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ), ಕಾಯ್ದಿಟ್ಟ ಅಂಪೈರ್: ನಂದನ್ (ಭಾರತ).
ಪಂದ್ಯದ ಸಮಯ
ಮೊದಲ ಅವಧಿ: ಮಧ್ಯಾಹ್ನ 1ರಿಂದ 3
ಎರಡನೇ ಅವಧಿ: ಮಧ್ಯಾಹ್ನ 3.40 ರಿಂದ ಸಂಜೆ 5.40
ಮೂರನೇ ಅವಧಿ: ಸಂಜೆ 6 ರಿಂದ 8
(ವಿರಾಮ: 3 ರಿಂದ 3.40 ಊಟ; 5.40 ರಿಂದ 6 ಚಹಾ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್