ಶನಿವಾರ, ನವೆಂಬರ್ 28, 2020
22 °C

ಕ್ಷಮೆ ಕೋರಿದ ಶಕೀಬ್ ಅಲ್ ಹಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ : ಕೋಲ್ಕತ್ತದಲ್ಲಿ ಕಾಳಿ ಪೂಜೆ ಕಾರ್ಯಕ್ರಮವನ್ನು ಉ‌ದ್ಘಾಟಿಸಿದ್ದ ಕಾರಣಕ್ಕೆ ತಮಗೆ ಬಂದ ಬೆದರಿಕೆಗಳಿಗೆ ಮಣಿದ  ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್  ಸೋಮವಾರ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.

ತಾವು ಕೇವಲ ಕಾರ್ಯಕ್ರಮಕ್ಕೆ ಹಾಜರಾಗಿದ್ದಾಗಿ, ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಶಕೀಬ್ ಅಲ್ ಹಸನ್ ಹೇಳಿಕೆ ನೀಡಿದ್ದಾರೆ. 

ಅವರಿಗೆ ಬೆದರಿಕೆ ಹಾಕಿದ್ದನೆನ್ನಲಾದ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

’ಸುನಾಮಗಂಜ್‌ ಜಿಲ್ಲೆಯ 28 ವರ್ಷದ ಮೊಹಸಿನ್ ತಾಲೂಕದಾರ್ ಬೆದರಿಕೆ ಹಾಕಿದ್ದ ಯುವಕ. ದೂರು ಸಿಕ್ಕ 24 ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ನಮ್ಮ ವಶದಲ್ಲಿರುವ ಈ ಯುವಕನನ್ನು   ವಿಚಾರಣೆ ನಡೆಸಲಾಗುತ್ತಿದೆ‘ ಎಂದುಪೊಲೀಸರು ತಿಳಿಸಿದ್ದಾರೆ. 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು