ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಮೌಂಟ್ಸ್ ನೈರುತ್ಯ ರೈಲ್ವೆ

Last Updated 7 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ನೈರುತ್ಯ ರೈಲ್ವೆ ಮತ್ತು ಮೌಂಟ್ಸ್ ಕ್ಲಬ್ ತಂಡಗಳು ಎಸ್‌.ಎಂ.ಎನ್‌. ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ರಾಜ್ಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ತಲುಪಿದವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನೈರುತ್ಯ ರೈಲ್ವೆ 76–45ರಿಂದ ಬೀಗಲ್ಸ್ ಬಿ.ಸಿ. ಎದುರು ಗೆದ್ದಿತು. ವಿಜೇತ ತಂಡದ ಪರ ಅನುಷಾ ಮತ್ತು ಮೋಹನಬಾಲಾ ಮತ್ತು ವರ್ಷಾ ನಂದಿನಿ ತಲಾ 16 ಪಾಯಿಂಟ್ಸ್ ಗಳಿಸಿದರು. ಬೀಗಲ್ಸ್ ತಂಡ ಚಂದನಾ (17 ಪಾಯಿಂಟ್ಸ್) ಆಟ ವ್ಯರ್ಥವಾಯಿತು.

ಪಾವನಿ ಮತ್ತು ನಿಹಾರಿಕಾ ರೆಡ್ಡಿ ಗಳಿಸಿದ ತಲಾ 15 ಪಾಯಿಂಟ್ಸ್ ಬಲ ದಿಂದ, ಮೌಂಟ್ಸ್ 65–51ರಿಂದ ಡಿವೈಇಎಸ್‌ ಮೈಸೂರು ವಿರುದ್ಧ ಜಯ ಸಾಧಿಸಿತು.ಡಿವೈಇಎಸ್‌ ತಂಡಕ್ಕಾಗಿ ಸಹನಾ 15 ಮತ್ತು ಮೇಘನಾ 13 ಪಾಯಿಂಟ್ಸ್ ಗಳಿಸಿದರು.

ಫೈನಲ್‌ ಪಂದ್ಯ ಬುಧವಾರ ಸಂಜೆ 4.30ಕ್ಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT