ಮಂಗಳವಾರ, ಅಕ್ಟೋಬರ್ 20, 2020
21 °C

ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆ ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್‌ ಕೌನ್ಸಿಲ್ ಸಭೆಯು ಶನಿವಾರ ನಡೆಯಲಿದೆ.

ನವೆಂಬರ್–ಡಿಸೆಂಬರ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ  ಪ್ರವಾಸ ಮಾಡಲಿದ್ದು, ಕ್ವಾರಂಟೈನ್ ನಿಯಮದ ಕುರಿತು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಒಟ್ಟು ಐದು ವಿಷಯಗಳ  ಬಗ್ಗೆ ಈ ಸಭೆಯಲ್ಲಿ ಚರ್ಚಿಸಲು ಉದ್ಧೇಶಿಸಲಾಗಿದೆ. ಅದರಲ್ಲಿ ದೇಶಿ ಮತ್ತು ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಕುರಿತೂ ಚರ್ಚೆಯಾಗಲಿದೆ.

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ ನಂತರ ಟೆಸ್ಟ್ ತಂಡದ ಆಟಗಾರರು ಬ್ರಿಸ್ಬೇನ್‌ಗೆ ಪ್ರಯಾಣಿಸಲಿದ್ದಾರೆ. ಮೂರು ಮಾದರಿಗಳಲ್ಲಿಯೂ ಸರಣಿಗಳು ಅಲ್ಲಿ ನಡೆಯಲಿದೆ. ಆದ್ದರಿಂದ ಒಟ್ಟು 28 ಆಟಗಾರರು ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

ಆದರೆ ಆಸ್ಟ್ರೇಲಿಯಾದಲ್ಲಿ ಸರಣಿ ಆರಂಭಕ್ಕೂ ಮುನ್ನ 14 ದಿನಗಳ ಕ್ವಾರಂಟೈನ್ ನಿಯಮ ಪಾಲಿಸಲು ನಿಯಮ ರೂಪಿಸಲಾಗಿದೆ. ಯುಎಇಯಲ್ಲಿ ಎಲ್ಲ ಆಟಗಾರರೂ ಜೀವ ಸುರಕ್ಷಾ ವಲಯದಲ್ಲಿಯೇ ಇದ್ದು ಪ್ರಯಾಣ ಮಾಡುವುದರಿಂದ ಪ್ರತ್ಯೇಕವಾಸ ಅವಧಿಯನ್ನು ಕಡಿತಗೊಳಿಸಬೇಕು ಎಂದು ಬಿಸಿಸಿಐ ಮನವಿ ಮಾಡಿದೆ.

ಇಂಗ್ಲೆಂಡ್ ಎದುರಿನ ಸರಣಿಯನ್ನು ಭಾರತದಲ್ಲಿಯೇ ನಡೆಸುವುದೋ ಅಥವಾ ತಟಸ್ಥ ತಾಣವಾದ ಯುಎಇಯಲ್ಲಿ  ಆಯೋಜಿಸುವುದೋ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ ಧುಮಾಲ್  ದುಬೈನಲ್ಲಿದ್ದಾರೆ. ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು