ಗುರುವಾರ , ಜನವರಿ 21, 2021
30 °C

ಮಾಜಿ ಕ್ರಿಕೆಟಿಗ ಭಾಸ್ಕರನ್ ನಾಯರ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇರಳ ಕ್ರಿಕೆಟ್ ತಂಡದ ವೇಗದ ಬೌಲರ್ ಅಗಿದ್ದ ಸಿ.ಕೆ.ಭಾಸ್ಕರನ್ ನಾಯರ್ ಅಮೆರಿಕದ ಹಾಸ್ಟನ್‌ನಲ್ಲಿ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಸಿಲೋನ್ ಎದುರಿನದ ಅನಧಿಕೃತ ಪ್ರಥಮ ದರ್ಜೆ ಪಂದ್ಯದಲ್ಲಿ ಭಾರತ ತಂಡದಲ್ಲಿ ಆಡಿದ್ದ ಭಾಸ್ಕರನ್ ನಾಯರ್ ವೈದ್ಯರಾಗಿದ್ದು ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಅಮೆರಿಕದಲ್ಲಿ ವೃತ್ತಿಯಲ್ಲಿ ತೊಡಗಿದ್ದರು.

ಕಣ್ಣೂರು ಜಿಲ್ಲೆಯ ತಲಶೇರಿಯಲ್ಲಿ 1941ರಲ್ಲಿ ಜನಿಸಿದ ಭಾಸ್ಕರನ್ ಕೇರಳ ರಣಜಿ ತಂಡದ ಸದಸ್ಯರಾಗಿದ್ದರು. 1957ರಿಂದ 1969ರ ವರೆಗೆ ಕ್ರಿಕೆಟ್ ಆಡಿದ್ದ ಅವರು 42 ಪ್ರಥಮ ದರ್ಜೆ ಪಂದ್ಯಗಳಲ್ಲಿ 106 ವಿಕೆಟ್ ಉರುಳಿಸಿದ್ದಾರೆ. ಐದು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಬ್ಯಾಟಿಂಗ್‌ನಲ್ಲೂ ಸಾಮರ್ಥ್ಯ ಮೆರೆದಿದ್ದು ಒಟ್ಟು 580 ರನ್ ಕಲೆ ಹಾಕಿದ್ದಾರೆ. ಅಜೇಯ 76 ರನ್ ಅವರು ಗಳಿಸಿದ ಗರಿಷ್ಠ ಮೊತ್ತ.

1965ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನೇತೃತ್ವದಲ್ಲಿ ಸಿಲೋನ್ (ಇಂದಿನ ಶ್ರೀಲಂಕಾ) ಎದುರು ಅನಧಿಕೃತ ಪ್ರಥಮ ದರ್ಜೆ ಪಂದ್ಯ ಆಡಿದ್ದ ಭಾರತ ತಂಡದಲ್ಲಿ ಅವರಿದ್ದರು. ಬಲಗೈ ವೇಗದ ಬೌಲರ್ ಆಗಿದ್ದ ಅವರು ಆ ಪಂದ್ಯದಲ್ಲಿ 18 ಓವರ್‌ ಬೌಲಿಂಗ್ ಮಾಡಿ ಎರಡು ವಿಕೆಟ್ ಕಬಳಿಸಿದ್ದರು. 51 ರನ್ ನೀಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು