ಶನಿವಾರ, ಜನವರಿ 25, 2020
15 °C

ಸಿಎಸಿಗೆ ಮದನ್‌ ಲಾಲ್, ಗೌತಮ್ ಗಂಭೀರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಹಿರಿಯ ಕ್ರಿಕೆಟಿಗ ಮದನ್ ಲಾಲ್ ಮತ್ತು ಗೌತಮ್ ಗಂಭೀರ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಗೆ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿದ್ಧವಾಗಿದೆ.

1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ ಮದನ್ ಮತ್ತು 2011ರ ವಿಶ್ವಕಪ್ ಜಯಿಸಿದ ತಂಡದ ಗಂಭೀರ್ ಅವರ ಈ ಸಮಿತಿಯು ನಾಲ್ಕು ವರ್ಷ ಕಾರ್ಯನಿರ್ವಹಿಸಲಿದೆ. 

ಮುಂಬೈನ ಹಿರಿಯ ಆಟಗಾರ್ತಿ ಸುಲಕ್ಷಣಾ ನಾಯಕ ಅವರೂ ಈ ಸಮಿತಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸುಲಕ್ಷಣಾ, ಎರಡು ಟೆಸ್ಟ್ ಮತ್ತು 46 ಏಕದಿನ ಪಂದ್ಯ ಗಳನ್ನು ಆಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಂಭೀರ್ ಅವರು ಸದ್ಯ ಸಂಸದರಾಗಿದ್ದಾರೆ. ಕ್ರಿಕೆಟ್ ವೀಕ್ಷಕ ವಿವರಣೆಗಾರರೂ ಆಗಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು