ನವದೆಹಲಿ: ಈ ವರ್ಷದ ಕೊನೆಯಲ್ಲಿ ತನ್ನ ಆತಿಥ್ಯದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ಗೆ ಆಯೋಜನಾ ಸಮಿತಿ ರಚಿಸುವುದು, ಜೊತೆಗೆ ಈ ಐಸಿಸಿ ಟೂರ್ನಿಯ ಪಂದ್ಯಗಳಿಗೆ ಸ್ಥಳಗಳನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್ ಕೌನ್ಸಿಲ್ ಇದೇ 22 ರಂದು ಕೋಲ್ಕತ್ತದಲ್ಲಿ ತುರ್ತು ಸಭೆ ಸೇರಲಿದೆ.

ಈಡನ್ ಗಾರ್ಡನ್ಸ್ನಲ್ಲಿ ಅಂದು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯಕ್ಕೆ ಮೊದಲು ಈ ಸಭೆ ನಡೆಯಲಿದೆ.

ಈ ಹಿಂದೆ ಬಿಸಿಸಿಐ 2013ರಲ್ಲಿ ಕೊನೆಯ ಬಾರಿ ಮಹಿಳೆಯರ ಏಕದಿನ ವಿಶ್ವಕಪ್ನ ಆಯೋಜನೆ ಮಾಡಿತ್ತು. ಅಕ್ಟೋಬರ್ನಲ್ಲಿ ನಿಗದಿ ಆಗಿರುವ ಈ ಟೂರ್ನಿಯ ವೇಳಾಪಟ್ಟಿಗೆ ಅಂತಿಮ ರೂಪ ಇನ್ನಷ್ಟೇ ಸಿಗಬೇಕಾಗಿದೆ.

ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಸಭೆಯ ಕಾರ್ಯಸೂಚಿಯ ಪ್ರಕಾರ, ಸಭೆಯಲ್ಲಿ 2025ರ ಮಹಿಳಾ ಏಕದಿನ ವಿಶ್ವಕಪ್ಗೆ ಆಯೋಜನಾ ಸಮಿತಿಯ ರಚನೆ, ಪಂದ್ಯ ನಡೆಯುವ ಸ್ಥಳಗಳ ಬಗ್ಗೆ ಚರ್ಚೆ ನಡೆಯಲಿದೆ.

ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಎರಡು ಬಾರಿ ಫೈನಲ್ ತಲುಪಿದೆ. ಆದರೆ ಅಂತಿಮ ಹಂತದಲ್ಲಿ ಎಡವಿತ್ತು. ಹೀಗಾಗಿ ತವರಿನಲ್ಲಿ ದೀರ್ಘ ಕಾಲದಿಂದ ಎದುರಿಸುತ್ತಿರುವ ಐಸಿಸಿ ಟ್ರೋಫಿಯ ಬರ ನೀಗಿಸಲು ಹರ್ಮನ್ಪ್ರೀತ್ ಕೌರ್ ಅವರ ತಂಡ ಪ್ರಯತ್ನ ನಡೆಸಲಿದೆ.

2025–26ರ ದೇಶೀ ಕ್ರಿಕೆಟ್ನ ರೂಪುರೇಷೆಯನ್ನೂ ಅಪೆಕ್ಸ್ ಕೌನ್ಸಿಲ್ ಸಭೆ ಅಂತಿಮಗೊಳಿಸಲಿದೆ. ಈ ವರ್ಷ ಭಾರತವು, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳಿಗೆ ಆತಿಥ್ಯ ವಹಿಸಲಿದೆ. ಹೀಗಾಗಿ ಸಮಿತಿ ಸದಸ್ಯರು ಈ ಟೆಸ್ಟ್ ಪಂದ್ಯಗಳ ಆತಿಥ್ಯ ವಹಿಸಲಿರುವ ಸ್ಥಳಗಳನ್ನೂ ನಿರ್ಧರಿಸಲಿದ್ದಾರೆ.

ತಂಬಾಕು ಪ್ರಾಯೋಜತ್ವಕ್ಕೆ ನಿಷೇಧ:

22ರಿಂದ ಆರಂಭವಾಗುವ ಐಪಿಎಲ್ ವೇಳೆ ತಂಬಾಕು ಮತ್ತು ಮದ್ಯ ಪಾನ ಉತ್ತೇಜಿಸುವ ಜಾಹೀರಾತು, ಪ್ರಾಯೋ ಜಕತ್ವ ಸೇರಿದಂತೆ ಎಲ್ಲಾ ರೀತಿಯ ಪ್ರಚಾರಗಳಿಗೆ ನಿಷೇಧ ಹೇರು ವಂತೆ ಕೇಂದ್ರ ಆರೋಗ್ಯ ಸಚಿವಾಲಯ ಈ ತಿಂಗಳ ಆರಂಭದಲ್ಲಿ ಕ್ರಿಕೆಟ್ ಮಂಡಳಿಗೆ ನಿರ್ದೇಶನ ನೀಡಿತ್ತು.ಈ ಬಗ್ಗೆಯೂ ಸಭೆ ಚರ್ಚಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.