ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20: ಕರ್ನಾಟಕ ತಂಡಕ್ಕೆ ವೃಂದಾ ನಾಯಕಿ

Published 3 ಡಿಸೆಂಬರ್ 2023, 14:58 IST
Last Updated 3 ಡಿಸೆಂಬರ್ 2023, 14:58 IST
ಅಕ್ಷರ ಗಾತ್ರ

ಬೆಂಗಳೂರು: ವೃಂದಾ ದಿನೇಶ್ ಅವರು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಟೂರ್ನಿಯು ಡಿ.10ರಿಂದ 19ರವರೆಗೆ ರಾಯಪುರದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು 15 ಆಟಗಾರ್ತಿಯರನ್ನು ಒಳಗೊಂಡ ಕರ್ನಾಟಕ ತಂಡವನ್ನು ಭಾನುವಾರ ಪ್ರಕಟಿಸಿದೆ.

ತಂಡ ಹೀಗಿದೆ: ವೃಂದಾ ದಿನೇಶ್‌ (ನಾಯಕಿ), ನಿಕಿ ಪ್ರಸಾದ್, ಶ್ರೇಯಾಂಕಾ ಆರ್. ಪಾಟೀಲ, ಜಿ.ಆರ್‌. ಪ್ರೇರಣಾ, ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಚಾಂದಸಿ ಕೃಷ್ಣಮೂರ್ತಿ, ಸೌಮ್ಯ ವರ್ಮಾ (ವಿಕೆಟ್‌ ಕೀಪರ್‌), ಮಿಥಿಲಾ ವಿನೋದ್, ಅದಿತಿ ರಾಜೇಶ್, ಸಾಕ್ಷಿ ದೋಯಿಜೋಡೆ (ವಿಕೆಟ್‌ ಕೀಪರ್‌), ಅದಿತಿ ಬಕ್ಕ, ಶಿಶಿರಾ ಎ. ಗೌಡ, ಎಂ. ಪೂಜಾ ಕುಮಾರಿ, ಅನನ್ಯಾ ಹೆಗ್ಡೆ. 

ಕರುಣಾ ಜೈನ್‌ (ಕೋಚ್‌), ರಂಜಿನಿಕುಮಾರ್‌ (ಮ್ಯಾನೇಜರ್‌), ಇಶಿತಾ ಕುಲಕರ್ಣಿ (ಫಿಸಿಯೋಥೆರಪಿಸ್ಟ್), ಎಸ್‌. ಕೃತಿ, ಮಾಲಾ ರಂಗಸ್ವಾಮಿ (ವಿಡಿಯೊ ಅನಾಲಿಸ್ಟ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT