ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕೂಟದಲ್ಲಿ ಮಹಿಳಾ ಕ್ರಿಕೆಟ್?

Last Updated 26 ನವೆಂಬರ್ 2018, 11:18 IST
ಅಕ್ಷರ ಗಾತ್ರ

ದುಬೈ: ಮುಂದಿನ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರಿಸುವ ಪ್ರಯತ್ನಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚಾಲನೆ ನೀಡಿದೆ. ಐಸಿಸಿ ಮತ್ತು ಇಂಗ್ಲೆಂಡ್‌–ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ಈ ಕುರಿತು ಕೂಟದ ಆಯೋಜಕರನ್ನು ಕೋರಿಕೊಂಡಿದೆ.

ಕ್ವಾಲಾಲಂಪುರದಲ್ಲಿ 1998ರಲ್ಲಿ ನಡೆದಿದ್ದ ಕೂಟದಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಪುರುಷ ತಂಡಗಳು ಮಾತ್ರ ಆಗ ಪಾಲ್ಗೊಂಡಿದ್ದವು. ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದಿತ್ತು.

ಮಹಿಳೆಯರ ಕ್ರಿಕೆಟ್‌ಗೆ ಜಾಗತಿಕ ಮನ್ನಣೆ ಗಳಿಸಿಕೊಡಲು ನಡೆಸುತ್ತಿರುವ ಪ್ರಯತ್ನದ ಫಲವಾಗಿ ಕಾಮನ್‌ವೆಲ್ತ್ ಕೂಟದಲ್ಲಿ ಈ ಕ್ರೀಡೆಯನ್ನು ಸೇರಿಸಲು ಒತ್ತಾಯ ಮಾಡಲಾಗುತ್ತಿದೆ. ಇದಕ್ಕೆ ಎಲ್ಲ ಸದಸ್ಯ ರಾಷ್ಟ್ರಗಳಿಂದ ಬೆಂಬಲ ಸಿಕ್ಕಿದೆ. ಮುಂದಿನ ತಿಂಗಳು ಈ ಕುರಿತು ಬಿಡ್‌ ಸಲ್ಲಿಸಲಾಗುವುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಟು ತಂಡಗಳ ಟ್ವೆಂಟಿ–20 ಪಂದ್ಯಗಳನ್ನು ಆಯೋಜಿಸುವಂತೆ ಕೋರಲಾಗುವುದು. ಕ್ರಿಕೆಟ್‌ ಮೇಲೆ ಬರ್ಮಿಂಗ್‌ಹ್ಯಾಂನ ಜನರಿಗೆ ತುಂಬ ಒಲವು ಇದೆ. ಆದ್ದರಿಂದ ಕಾಮನ್‌ವೆಲ್ತ್ ಕೂಟದಲ್ಲಿ ಅದನ್ನು ಸೇರಿಸಲು ಇದು ಸರಿಯಾದ ಸ್ಥಳ ಎಂದು ಐಸಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT