ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಕ್ರಿಕೆಟ್‌ ಸುನಿಲ್‌ ದ್ವಿಶತಕ

ಅಂಧರ ಕ್ರಿಕೆಟ್‌: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ
Last Updated 27 ನವೆಂಬರ್ 2019, 18:59 IST
ಅಕ್ಷರ ಗಾತ್ರ

ಮೈಸೂರು: ನಾಯಕ ಸುನಿಲ್‌ ರಮೇಶ್‌ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ಇಂಡಸ್‌ಇಂಡ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ಅಂಧರ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗೋವಾ ವಿರುದ್ಧ 158 ರನ್‌ಗಳ ಜಯ ಸಾಧಿಸಿತು.

ಎಸ್‌ಜೆಸಿಇ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 256 ರನ್‌ ಪೇರಿಸಿತು. ಅಜೇಯ 206 (69 ಎಸೆತ, 46 ಬೌಂಡರಿ) ರನ್‌ ಗಳಿಸಿದ ಸುನಿಲ್‌ ಈ ಟೂರ್ನಿಯಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಗೋವಾ ತಂಡ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್‌ಗೆ 98 ರನ್‌ ಗಳಿಸಲಷ್ಟೇ ಶಕ್ತವಾಯಿತು. ಬೆಳಿಗ್ಗೆ ಮಳೆ ಸುರಿದ ಕಾರಣ ಓವರ್‌ಗಳ ಸಂಖ್ಯೆಯನ್ನು 17ಕ್ಕೆ ಇಳಿಸಲಾಗಿತ್ತು.

ಮೈಸೂರು ಲೆಗ್‌ನ ಪಂದ್ಯಗಳು ಕೊನೆಗೊಂಡಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದ ಕರ್ನಾಟಕ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಟೂರ್ನಿಯ ಮುಂದಿನ ಲೆಗ್‌ನ ಪಂದ್ಯಗಳು ಫರೀದಾಬಾದ್‌ನಲ್ಲಿ ಆಯೋಜನೆಯಾಗಿವೆ. ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಜನವರಿಯಲ್ಲಿ ನಡೆಯಲಿವೆ.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 256 (ಸುನಿಲ್‌ ರಮೇಶ್ 206, ಅಭಿ 15) ಗೋವಾ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 98 (ಸಂದೀಪ್ 22, ನೀಲೇಶ್ 17) ಫಲಿತಾಂಶ: ಕರ್ನಾಟಕಕ್ಕೆ 158 ರನ್‌ಗಳ ಗೆಲುವು; ಪಂದ್ಯಶ್ರೇಷ್ಠ: ಸುನಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT